Mercedes Benz GLE: ಮರ್ಸಿಡಿಸ್ ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ

|

Updated on: Nov 02, 2023 | 6:46 PM

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಜಿಎಲ್ಇ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Mercedes Benz GLE: ಮರ್ಸಿಡಿಸ್ ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ
ಮರ್ಸಿಡಿಸ್ ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ
Follow us on

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ (Mercedes Benz) ತನ್ನ ಬಹುನೀರಿಕ್ಷಿತ ಜಿಎಲ್ಇ ಫೇಸ್‌ಲಿಫ್ಟ್ (GLE facelift) ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 96.40 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಆರಂಭಿಕ ಮಾದರಿಯಾದ ಜಿಎಲ್ಇ 300ಡಿ 4 ಮ್ಯಾಟಿಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 96.40 ಲಕ್ಷ ಬೆಲೆ ಹೊಂದಿದ್ದರೆ ಜಿಎಲ್ಇ 450 4 ಮ್ಯಾಟಿಕ್ ಮಾದರಿಯು ರೂ. 1.10 ಕೋಟಿ ಮತ್ತು ಜಿಎಲ್ಇ 450ಡಿ 4 ಮ್ಯಾಟಿಕ್ ಮಾದರಿ ರೂ. 1.15 ಕೋಟಿ ಬೆಲೆ ಹೊಂದಿದೆ.

ಹೊಸ ಜಿಎಲ್ಇ ಫೇಸ್‌ಲಿಫ್ಟ್ ಮಾದರಿಯನ್ನು ಈ ವರ್ಷದ ಆರಂಭದಲ್ಲಿ ಜಾಗತಿಕ ಮಾರುಕಟ್ಟೆಗಾಗಿ ಅನಾವರಣಗೊಳಿಸಿದ್ದ ಮರ್ಸಿಡಿಸ್ ಬೆಂಝ್ ಕಂಪನಿಯು ಇದೀಗ ಅಧಿಕೃತ ಬಿಡುಗಡೆ ಮಾಡಿದ್ದು, ಹೊಸ ಕಾರು ಮೂರು ಎಂಜಿನ್ ಆಯ್ಕೆಯೊಂದಿಗೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಜಿಎಲ್ಇ ಫೇಸ್‌ಲಿಫ್ಟ್ ನಲ್ಲಿ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಫೋರ್ ಸಿಲಿಂಡರ್ 2.0 ಲೀಟರ್ ಡೀಸೆಲ್, ಸಿಕ್ಸ್ ಸಿಲಿಂಡರ್ 3.0 ಲೀಟರ್ ಡೀಸೆಲ್ ಮತ್ತು ಫೋರ್ ಸಿಲಿಂಡರ್ 3.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಎಲ್ಲಾ ಎಂಜಿನ್ ಮಾದರಿಗಳಲ್ಲೂ 48 ಐಎಸ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 4 ಮ್ಯಾಟಿಕ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ನೀಡಲಾಗಿದೆ.

ಇದನ್ನೂ ಓದಿ: ಸಿಟ್ರನ್ ಹೊಸ ಎಸ್‍ಯುವಿ ಖರೀದಿ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್ ಘೋಷಣೆ

ಫೋರ್ ಸಿಲಿಂಡರ್ 2.0 ಲೀಟರ್ ಡೀಸೆಲ್ ಮಾದರಿಯು 296 ಹಾರ್ಸ್ ಪವರ್, 550 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಸಿಕ್ಸ್ ಸಿಲಿಂಡರ್ 3.0 ಲೀಟರ್ ಡೀಸೆಲ್ ಮಾದರಿಯು 367 ಹಾರ್ಸ್ ಪವರ್, 750 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಫೋರ್ ಸಿಲಿಂಡರ್ 3.0 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 381 ಹಾರ್ಸ್ ಪವರ್, 500 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 5.6 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುತ್ತವೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಜಿಎಲ್ಇ ಫೇಸ್‌ಲಿಫ್ಟ್ ಆವೃತ್ತಿಯು ನವೀಕೃತ ವಿನ್ಯಾಸದೊಂದಿಗೆ ಮತ್ತಷ್ಟು ಸ್ಪೋರ್ಟಿಯಾಗಿ ಗುರುತಿಸಿಕೊಂಡಿದ್ದು, ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್ ಲೈಟ್ಸ್, ಟೈಲ್ ಲೈಟ್ ಗಳ ಜೊತೆಗೆ ಆಕರ್ಷಕ ಕ್ರೋಮ್ ಸ್ಟ್ರೀಪ್ ನೀಡಲಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಎಸ್ ಕ್ಲಾಸ್ ಮಾದರಿಯಲ್ಲಿರುವಂತೆ ಫೀಡ್ ಬ್ಯಾಕ್ ಹೊಂದಿರುವ ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವ್ಹೀಲ್, ಕ್ರೋಮ್ ಸರೌಂಡ್ ಹೊಂದಿರುವ ಎಸಿ ವೆಂಟ್ಸ್, ವೈರ್ ಲೆಸ್ ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಹೊಂದಿರುವ 12.3 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, 12.3 ಇಂಚಿನ ಡಿಜಿಟಲ್ ಡ್ರೈವರ್ ಸಿಸ್ಟಂ, 13 ಸ್ಪೀಕರ್ಸ್ ಒಳಗೊಂಡಿರುವ ಬೂರ್ಮಸ್ಟರ್ ಸರೌಂಡ್ ಸೌಂಡ್ ಸಿಸ್ಟಂ, ವೈರ್ ಲೆಸ್ ಚಾರ್ಜರ್, ಸಿ ಟೈಪ್ ಯುಎಸ್ ಬಿ ಪೋರ್ಟ್ಸ್ ಮತ್ತು ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯಗಳಿವೆ.

ಇದನ್ನೂ ಓದಿ: ಬಜೆಟ್ ಬೆಲೆಯ ಟಾಪ್ 5 ಟರ್ಬೊ ಪೆಟ್ರೋಲ್ ಕಾರುಗಳಿವು!

ಸುರಕ್ಷಾ ಸೌಲಭ್ಯಗಳು

ಮರ್ಸಿಡಿಸ್ ಬೆಂಝ್ ಕಂಪನಿ ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೊತೆಗೆ 9 ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಟ್ರಾಕ್ಷನ್ ಮತ್ತು ಸ್ಟ್ಯಾಬಿಲಿಟಿ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

Published On - 6:44 pm, Thu, 2 November 23