ದೇಶಾದ್ಯಂತ ರಸ್ತೆ ನಿಯಮಗಳ ಸರಿಯಾದ ಪಾಲನೆಗಾಗಿ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದ್ದು, ಕಠಿಣ ಕ್ರಮಗಳ ಹೊರತಾಗಿಯೂ ನಿಯಮ ಉಲ್ಲಂಘಿಸಿ ಅಪಾಯಕಾರಿ ಚಾಲನಾ ಪ್ರವೃತ್ತಿ ಹೆಚ್ಚುತ್ತಿದೆ. ಇತ್ತೀಚೆಗೆ ಮರ್ಸಿಡಿಸ್ ಬೆಂಝ್(mercedes benz) ಕಾರು ಮಾಲೀಕನೊಬ್ಬ ಕೂಡಾ ಸಾರ್ವಜನಿಕ ಪ್ರದೇಶದಲ್ಲಿಯೇ ಡ್ರಿಫ್ಟ್ ಮಾಡುವ ಮೂಲಕ ಪೊಲೀಸರ ಅತಿಥಿಯಾಗಿದ್ದು, ಕಾರು ಮಾಲೀಕನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಇಂದೋರ್ ಮೂಲದ 23 ವರ್ಷದ ಯುವಕನೊಬ್ಬ ತನ್ನ ಮರ್ಸಿಡಿಸ್ ಬೆಂಝ್ ಇ400 ಕ್ಯಾಬ್ರಿಯೊಲೆಟ್ ಕಾರಿನ ಮೂಲಕ ಸಾರ್ವಜನಿಕ ರಸ್ತೆಯಲ್ಲಿಯೇ ಡಿಫ್ಟ್ ಮಾಡುವ ಮೂಲಕ ಸಿಕ್ಕಿಬಿದ್ದಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಇಂದೋರ್ ಪೊಲೀಸರು ಕಾರು ಮಾಲೀಕನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ ಕಾರನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತಷ್ಟು ಓದಿ: ಸಿಗ್ನಲ್ ಜಂಪ್ ಮಾಡಿ, ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡೆದು ಬಾನೆಟ್ ಮೇಲೆ 1.5 ಕಿ.ಮೀ ಎಳೆದೊಯ್ದ ಚಾಲಕ
ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಕಾರು ಚಾಲನೆ ಮಾಡಿದ್ದಕ್ಕಾಗಿ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279 (ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಚಾಲನೆ) ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಡ್ರಿಫ್ಟ್ ಮಾಡಲು ಬಳಸಿದ್ದ ಮರ್ಸಿಡಿಸ್ ಬೆಂಝ್ ಕಾರನ್ನ ಸಹ ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ಕುರಿತು ಇಂದೋರ್ ಟ್ರಾಫಿಕ್ ಪೊಲೀಸರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
लापरवाहीपूर्वक एवं खतरनाक तरीके से कार ड्रिफ्टिंग कर, आम जनमानस का जीवन संकट में डालने वाले का वीडियो एक जिम्मेदार नागरिक ने एडिशनल, सीपी यातायात प्रबंधन को भेजा था। उसके बाद आपराधिक प्रकरण पंजीबद्ध। @CMMadhyaPradesh @mohdept@DGP_MP @MPPoliceDeptt @CP_INDORE @IPSMaheshCJain pic.twitter.com/fd9HmRaean
— DCP Traffic Indore (@DcptrafficInd) March 20, 2023
ತಡರಾತ್ರಿ ವೇಳೆ ಟ್ರಾಫಿಕ್ ದಟ್ಟಣೆ ಕಡಿಮೆ ಇರುವಾಗ ಇಂದೋರ್ ನಗರದ ಪ್ರಮುಖ ವೃತ್ತವೊಂದರಲ್ಲಿ ಡ್ರಿಫ್ಟ್ ಮಾಡುತ್ತಿದ್ದು, ಹಿರಿಯ ನಾಗರಿಕರೊಬ್ಬರು ಹೆಚ್ಚುವರಿ ಸಿಪಿ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ಕಳುಹಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರಿನ ಮಾಹಿತಿ ಪತ್ತೆಹಚ್ಚಿ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ದೊಡ್ಡ ಮೊತ್ತದ ದಂಡ ವಿಧಿಸುವ ಸಾಧ್ಯತೆಗಳಿವೆ.
Published On - 2:05 pm, Thu, 23 March 23