AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಜೆಟ್ ಬೆಲೆಯ ಎಂಜಿ ಕಾಮೆಟ್ ಇವಿ ಮಾಹಿತಿ ಬಹಿರಂಗ

ಭಾರತದಲ್ಲಿ ವಿವಿಧ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಹೊಂದಿರುವ ಎಂಜಿ ಮೋಟಾರ್‌ ಕಂಪನಿಯು ಶೀಘ್ರದಲ್ಲಿಯೇ ತನ್ನ ಬಜೆಟ್ ಬೆಲೆಯ ಇವಿ ಕಾರು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರಿನ ಅಧಿಕೃತ ಹೆಸರನ್ನ ಬಹಿರಂಗಪಡಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಜೆಟ್ ಬೆಲೆಯ ಎಂಜಿ ಕಾಮೆಟ್ ಇವಿ ಮಾಹಿತಿ ಬಹಿರಂಗ
ಬಜೆಟ್ ಬೆಲೆಯ ಎಂಜಿ ಕಾಮೆಟ್ ಇವಿ ಮಾಹಿತಿ ಬಹಿರಂಗ
Praveen Sannamani
|

Updated on:Mar 06, 2023 | 12:23 PM

Share

ಎಲೆಕ್ಟ್ರಿಕ್ ಕಾರು(Electric Cars) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್(MG Motor) ಕಂಪನಿಯು ಶೀಘ್ರದಲ್ಲಿ ಮತ್ತಷ್ಟು ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯ ಜೆಡ್ಎಸ್ ಇವಿ ಕಾರಿನ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿರುವ ಎಂಜಿ ಕಂಪನಿ ಈ ಬಾರಿ ಮೈಕ್ರೊ ಇವಿ ಬಿಡುಗಡೆಯ ಯೋಜನೆಯಲ್ಲಿದೆ. ಪರ್ಸನಲ್ ಮೊಲಿಬಿಟಿ ಉದ್ದೇಶಕ್ಕಾಗಿ ಹೊಸ ಇವಿ ಕಾರು ಬಿಡುಗಡೆ ಮಾಡುತ್ತಿದ್ದು, ಇದೀಗ ಹೊಸ ಕಾರಿನ ಅಧಿಕೃತ ಹೆಸರನ್ನ ಬಹಿರಂಗಪಡಿಸಿದೆ.

ಹೌದು, ಜೆಡ್ಎಸ್ ಇವಿ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಬಿಡುಗಡೆಯ ನಂತರ ಎಂಜಿ ಕಂಪನಿಯು ಇದೀಗ ಬಜೆಟ್ ಬೆಲೆಯ ಇವಿ ಕಾರು ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಇವಿ ಕಾರು ಮಾದರಿಯನ್ನ ಎಂಜಿ ಕಂಪನಿಯು ಭಾರತದಲ್ಲಿ ಕಾಮೆಟ್(Comet) ಹೆಸರಿನಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಚೀನಾದಲ್ಲಿರುವ ವುಲಿಂಗ್ ಏರ್ ಒನ್ ಕಾರು ಆಧರಿಸಿ ನಿರ್ಮಾಣಗೊಳ್ಳುತ್ತಿದೆ.

ವುಲಿಂಗ್ ಮೋಟಾರ್ ಸದ್ಯ ಚೈನಾ ಸೇರಿದಂತೆ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಇದು ಸೈಕ್ ಕಂಪನಿಯೊಂದಿಗೆ ಜಂಟಿ ಕಾರ್ಯಾಚರಣೆ ಹೊಂದಿದೆ. ಹಾಗೆಯೇ ಸೈಕ್ ಕಂಪನಿಯೊಂದಿಗೆ ಎಂಜಿ ಮೋಟಾರ್ ಕೂಡಾ ಜಂಟಿ ಕಾರ್ಯಾಚರಣೆ ಹೊಂದಿದ್ದು, ಸಹಭಾಗಿತ್ವ ಯೋಜನೆ ಅಡಿ ಹೊಸ ಕಾಮೆಟ್ ಇವಿ ಕಾರನ್ನು ಬಿಡುಗಡೆ ಮಾಡಲಾಗುತ್ತಿದೆ.

ಕಾಮೆಟ್ ಇವಿ ಕಾರಿನ ವಿಶೇಷತೆಗಳೇನು?

ಹೊಸ ಕಾಮೆಟ್ ಇವಿ ಕಾರು ಬಿಡುಗಡೆಗಾಗಿ ಎಂಜಿ ಮೋಟಾರ್ ಕಂಪನಿ ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೂ ಸಹ ಚಾಲನೆ ನೀಡಿದೆ. ಹೊಸ ಇವಿ ಕಾರು ಪರ್ಸನಲ್ ಮೊಬಿಲಿಟಿ ಉದ್ದೇಶಕ್ಕಾಗಿ ವಿಶೇಷವಾಗಿ ನಿರ್ಮಾಣಗೊಂಡಿದ್ದು, ಇದು ಸಣ್ಣ ಗಾತ್ರದ ವಿನ್ಯಾಸದೊಂದಿಗೆ ಗಮನಸೆಳೆಯಲಿದೆ.

2.1 ಮೀಟರ್ ವ್ಹೀಲ್ ಬೆಸ್ ನೊಂದಿಗೆ ತ್ರಿ ಡೋರ್ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರು 2.9 ಮೀಟರ್ ಉದ್ದಳತೆ ಹೊಂದಿದೆ. ಹೀಗಾಗಿ ಇದು ಪ್ರಸ್ತುತ ಮಾರುಕಟ್ಟೆಯಲ್ಲಿನ ಅತ್ಯಂತ ಚಿಕ್ಕ ಕಾರು ಮಾದರಿಯಾಗಿರಲಿದೆ. ಈ ಮೂಲಕ ಪ್ರತ್ಯೇಕ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಹೊಂದಿರುವ ಹೊಸ ಕಾರು ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಅತ್ಯುತ್ತಮವಾಗಿದ್ದು, ತಂತ್ರಜ್ಞಾನ ಸೌಲಭ್ಯದಲ್ಲೂ ಗಮನಸೆಳೆಯಲಿದೆ.

ಬ್ಯಾಟರಿ ಮತ್ತು ಮೈಲೇಜ್ ರೇಂಜ್

ಇನ್ನು ಹೊಸ ಇವಿ ಕಾರು ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಳ್ಳಲಿದ್ದು, ಹೊಸ ಕಾರಿನಲ್ಲಿ 20 ಕೆವಿಹೆಚ್ ಅಥವಾ 25 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಬಹುದಾಗಿದೆ. ಇದರೊಂದಿಗೆ ಹೊಸ ಇವಿ ಕಾರು ಪ್ರತಿ ಚಾರ್ಜ್ ಗೆ 250ರಿಂದ 300 ಕಿ.ಮೀ ರೇಂಜ್ ಹೊಂದಿರಲಿದ್ದು, ಹೊಸ ಕಾರನ್ನ ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ಲಾಟ್‌ಫಾರ್ಮ್‌ ಅಡಿಯಲ್ಲಿ ಅಭಿವೃದ್ದಿಪಡಿಸಲಾಗಿದೆ.

ಹೀಗಾಗಿ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 5 ಲಕ್ಷದಿಂದ ರೂ. 7 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ. ಆದರೆ ಹೊಸ ಕಾರಿನ ತಾಂತ್ರಿಕ ಸೌಲಭ್ಯಗಳ ಕುರಿತಾಗಿ ಇನ್ನು ಕೆಲವು ಮಾಹಿತಿಗಳನ್ನ ಗೌಪ್ಯವಾಗಿರಿಸಿದ್ದು, ಮುಂಬರುವ ಕೆಲವೇ ತಿಂಗಳಿನಲ್ಲಿ ಹೊಸ ಕಾರನ್ನ ಬಿಡುಗಡೆ ಮಾಡಲಿದೆ.

ಈ ಹೆಚ್ಚಿನ ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 12:23 pm, Mon, 6 March 23