ಭಾರತದಲ್ಲಿ ವಿಂಡ್ಸರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಎಂಜಿ ಮೋಟಾರ್ ಹೊಸ ಎಲೆಕ್ಟ್ರಿಕ್ ಕಾರು

|

Updated on: Aug 01, 2024 | 9:11 PM

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ತನ್ನ ಮೂರನೇ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ವಿಂಡ್ಸರ್ ಹೆಸರಿನಲ್ಲಿ ಬಿಡುಗಡೆಯಾಗುವ ಕುರಿತು ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ವಿಂಡ್ಸರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಎಂಜಿ ಮೋಟಾರ್ ಹೊಸ ಎಲೆಕ್ಟ್ರಿಕ್ ಕಾರು
ಎಂಜಿ ಮೋಟಾರ್ ಹೊಸ ಎಲೆಕ್ಟ್ರಿಕ್ ಕಾರು
Follow us on

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆ ಹಿನ್ನಲೆಯಲ್ಲಿ ಎಂಜಿ ಮೋಟಾರ್ (MG Motor) ಕಂಪನಿಯು ತನ್ನ ಮೂರನೇ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಕಾರು ಮಾದರಿಯು ವಿಂಡ್ಸರ್ ಹೆಸರಿನಲ್ಲಿ ಬಿಡುಗಡೆಯಾಗುವ ಕುರಿತು ಮಾಹಿತಿ ಲಭ್ಯವಾಗಿದೆ ಎಂಜಿ ಮೋಟಾರ್ ಕಂಪನಿಯ ಹೊಸ ಕಾರು ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ನಡುವಿನ ಸ್ಥಾನದಲ್ಲಿ ಬಿಡುಗಡೆಯಾಗಲಿದ್ದು, ಇದು ಅತ್ಯಾಧುನಿಕ ವಿನ್ಯಾಸ ಭಾಷೆಯೊಂದಿಗೆ ಅಭಿವೃದ್ದಿಗೊಂಡಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಇತ್ತೀಚೆಗೆ ಜೆಎಸ್ ಡಬ್ಲ್ಯು ಜೊತೆಗೂಡಿರುವ ಎಂಜಿ ಮೋಟಾರ್ ಕಂಪನಿಯು ಭಾರೀ ಪ್ರಮಾಣದ ಹೊಸ ಹೂಡಿಕೆ ಮಾಡಿದ್ದು, ಹೊಸ ಹೂಡಿಕೆಯ ನಂತರ ಇದೀಗ ಮೊದಲ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸದಾಗಿ ಬಿಡುಗಡೆಯಾಗಿರುವ ವಿಂಡ್ಸರ್ ಕಾರು ಮಾದರಿಯು ಸದ್ಯ ಇಂಡೋನೇಷಿಯಾ ಮಾರುಕಟ್ಟೆಯಲ್ಲಿರುವ ಸೈಕ್ ಕಂಪನಿಯ ಕ್ಲೌಡ್ ಇವಿ ಮಾದರಿಯನ್ನು ಆಧರಿಸಿದ್ದು, ಇದು ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಗ್ರಾಹಕರ ಹಲವು ಬೇಡಿಕೆಗಳನ್ನು ಪೂರೈಸಲಿದೆ.

ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ

ವಿಂಡ್ಸರ್ ಕಾರು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವು ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದ್ದು, ಇದು 4,295 ಎಂಎಂ ಉದ್ದಳತೆಯೊಂದಿಗೆ ಅತ್ಯಾಧುನಿಕ ವಿನ್ಯಾಸದೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್ ಗಳನ್ನು ಪಡೆದುಕೊಂಡಿರಲಿದೆ. ಹೊಸ ಇವಿ ಕಾರು ಮಾದರಿಯಲ್ಲಿ ಎಂಜಿ ಕಂಪನಿಯು ಭರ್ಜರಿ ಮೈಲೇಜ್ ನೊಂದಿಗೆ ವಿವಿಧ ಬ್ಯಾಟರಿ ಪ್ಯಾಕ್ ಗಳ ಆಯ್ಕೆ ನೀಡಲಿದ್ದು, ಹೊಸ ಕಾರಿನ ಟಾಪ್ ಎಂಡ್ ಮಾದರಿಯು 50.6 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಪ್ರತಿ ಚಾರ್ಜ್ ಗೆ 460 ಕಿ.ಮೀ ಮೈಲೇಜ್ ನೀಡಲಿದೆ.

ಹಾಗೆಯೇ ಹೊಸ ಇವಿ ಕಾರಿನಲ್ಲಿ ಆಧುನಿಕ ಕಾರುಗಳಲ್ಲಿ ಫೀಚರ್ಸ್ ಗಳಾದ ಎಲ್ಇಡಿ ಲೈಟ್ಸ್, ಫ್ಲಶ್ ಡೋರ್ ಹ್ಯಾಂಡಲ್ಸ್, ಡ್ಯುಯಲ್ ಡಿಜಿಟಲ್ ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಕನೆಕ್ಡೆಡ್ ಕಾರ್ ಟೆಕ್ ಸೇರಿದಂತೆ ವಿವಿಧ ಸೌಲಭ್ಯಗಳಿರಲಿವೆ. ಜೊತೆಗೆ ಹೊಸ ಕಾರಿನಲ್ಲಿ ಗರಿಷ್ಠ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗುತ್ತಿದ್ದು, ಇದು ಸಂಭಾವ್ಯ ಅಪಘಾತಗಳನ್ನು ತಡೆಯುವ ಮೂಲಕ ಪ್ರಾಣಹಾನಿ ಪ್ರಕರಣಗಳನ್ನು ತಡೆಯಲಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಹೀಗಾಗಿ ಹೊಸ ಇವಿ ಕಾರು ತಂತ್ರಜ್ಞಾನ ಮತ್ತು ಬ್ಯಾಟರಿ ಪ್ಯಾಕ್ ಗಳಿಗೆ ಅನುಗುಣವಾಗಿ ರೂ. 18 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಇದು ಬೆಲೆ ವಿಚಾರವಾಗಿ ಬಿವೈಡಿ ಇ6 ಎಂಪಿವಿ ಕಾರಿಗೆ ಉತ್ತಮ ಪೈಪೋಟಿ ನೀಡಲಿದೆ.