ಭಾರತದಲ್ಲಿ ADAS ಸೌಲಭ್ಯ ಹೊಂದಿರುವ ಹೊಸ ಕಾರುಗಳಿವು!

ಭಾರತದಲ್ಲಿ ಮಾರಾಟಗೊಳ್ಳುವ ಹೊಸ ಕಾರುಗಳಲ್ಲಿ ಇದೀಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಕಾರುಗಳ ಸುರಕ್ಷತೆಯು ಸಾಕಷ್ಟು ಸುಧಾರಿಸಿದ್ದು, ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯಕ್ಕೆ ಭಾರೀ ಬೇಡಿಕೆ ಹರಿದುಬರುತ್ತಿದೆ.

Follow us
Praveen Sannamani
|

Updated on:Mar 08, 2023 | 9:09 PM

ಭಾರತದಲ್ಲಿ ಮಾರಾಟಗೊಳ್ಳುವ ಹೊಸ ಕಾರುಗಳಲ್ಲಿ ಇದೀಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಕಾರುಗಳ ಸುರಕ್ಷತೆಯು ಸಾಕಷ್ಟು ಸುಧಾರಿಸಿದ್ದು, ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ(ADAS) ಸೌಲಭ್ಯಕ್ಕೆ ಭಾರೀ ಬೇಡಿಕೆ ಹರಿದುಬರುತ್ತಿದೆ. ಹೀಗಾಗಿ ಇತ್ತೀಚೆಗೆ ಬಿಡುಗಡೆಯಾದ ಹಲವು ಕಾರುಗಳಲ್ಲಿ ಹೊಸ ಫೀಚರ್ಸ್ ನೀಡಲಾಗಿದ್ದು, ಎಡಿಎಎಸ್ ಸೌಲಭ್ಯ ಹೊಂದಿರುವ ಮಧ್ಯಮ ಕ್ರಮಾಂಕದ ಕಾರುಗಳ ಸಂಖ್ಯೆ ಹೆಚ್ಚುತ್ತಿದೆ.

ಹೊಸ ಕಾರುಗಳಲ್ಲಿ ಇದೀಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಾರುಗಳಲ್ಲಿ ಹಲವಾರು ಹೊಸ ಸೇಫ್ಟಿ ಫೀಚರ್ಸ್ ಪರಿಚಯಿಸಲಾಗುತ್ತಿದೆ. ಇದರಲ್ಲಿ ಎಡಿಎಎಸ್ ಹೆಸರಿನಲ್ಲಿ ಕರೆಯಲಾಗುವ ಹೊಸ ಸುರಕ್ಷಾ ಸೌಲಭ್ಯವು ಇತ್ತೀಚಿನ ಆಧುನಿಕ ಕಾರು ಮಾದರಿಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದು ಸಂಭಾವ್ಯ ಅಪಘಾತಗಳನ್ನು ತಗ್ಗಿಸಲು ಸಾಕಷ್ಟು ನೆರವಾಗುತ್ತಿದ್ದು, ಹೀಗಾಗಿ ಇತ್ತೀಚೆಗೆ ಬಿಡುಗಡೆಯಾದ ಹಲವು ಹೊಸ ಕಾರುಗಳು ಈ ಸೇಫ್ಟಿ ಫೀಚರ್ಸ್ ಪಡೆದುಕೊಂಡಿವೆ. 2023ರ ಹಲವು ಕಾರು ಮಾದರಿಗಳಲ್ಲಿ ಎಡಿಎಎಸ್ ಫೀಚರ್ಸ್ ಜೋಡಿಸಲಾಗಿದ್ದು, ಇದು ಅಪಘಾತಗಳ ಸಂಖ್ಯೆ ತಗ್ಗಿಸಲು ಮಹತ್ವದ ಪಾತ್ರವಹಿಸಲಿದೆ.

ಇದನ್ನೂ ಓದಿ: ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಅಪಘಾತಗಳಲ್ಲಿ ಸಾವು ನೋವಿನ ಸಂಖ್ಯೆ ತಗ್ಗಿಸಲು ಹಲವಾರು ಕಠಿಣ ಸಂಚಾರಿ ನಿಯಮಗಳನ್ನು ಜಾರಿ ತಂದಿದ್ದರೂ ಅದು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹಲವಾರು ಕಾರಣಗಳಿಂದ ದಿನಂಪ್ರತಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದಕ್ಕೆ ಬ್ರೇಕ್ ಹಾಕಲು ಹೊಸ ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸಾಕಷ್ಟು ನೆರವಾಗುತ್ತಿದೆ. ಹೊಸ ಸುರಕ್ಷಾ ತಂತ್ರಜ್ಞಾನವು ಅಪಘಾತಗಳನ್ನು ತಗ್ಗಿಸುವುದರ ಜೊತೆಗೆ ಅಮೂಲ್ಯವಾದ ಜೀವಗಳನ್ನು ರಕ್ಷಿಸಲು ನೆರವಾಗಲಿದ್ದು, ಇದು ಸುಗಮ ಸಂಚಾರಕ್ಕಾಗಿ ಚಾಲಕನಿಗೆ ಸಾಕಷ್ಟು ಸಹಾಯ ಮಾಡಲಿದೆ.

ಗರಿಷ್ಠ ಸುರಕ್ಷತೆ ಹಿನ್ನಲೆ ವಿಶ್ವಾದ್ಯಂತ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಈ ಹೊಸ ಸುರಕ್ಷಾ ಸೌಲಭ್ಯವನ್ನು ತಮ್ಮ ಪ್ರಮುಖ ಕಾರು ಉತ್ಪನ್ನಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿವೆ. ಭಾರತದಲ್ಲೂ ಕೂಡಾ ಹೊಸ ಎಡಿಎಎಸ್ ಸೌಲಭ್ಯ ಹೊಂದಿರುವ ಕಾರುಗಳು ನಿಧಾನವಾಗಿ ಹೆಚ್ಚುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಹೊಸ ಫೀಚರ್ಸ್ ಹೊಂದಿರುವ ಕಾರುಗಳ ಸಂಖ್ಯೆ ದ್ವಿಗುಣಗೊಳ್ಳಲಿವೆ. ಹೊಸ ಫೀಚರ್ಸ್ ಹೊಂದಿರುವ ಹೊಸ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ರೂ. 20 ಲಕ್ಷ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಿದ್ದು, ಮುಂಬರುವ ಕೆಲವು ದಿನಗಳಲ್ಲಿ ರೂ. 15 ಲಕ್ಷ ಬೆಲೆ ಅಂತರದ ಹೊಸ ಫೀಚರ್ಸ್ ಹೊಂದಿರುವ ಕಾರುಗಳನ್ನ ನೋಡಬಹುದಾಗಿದೆ.

ಸದ್ಯ ಕೆಲವೇ ಕೆಲವು ಕಾರುಗಳ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಮಾತ್ರ ಎಡಿಎಎಸ್ ಫೀಚರ್ಸ್ ಲಭ್ಯವಿದೆ. ಭಾರತದಲ್ಲಿ ಮೊದಲ ಬಾರಿಗೆ ಎಂಜಿ ಮೋಟಾರ್ ಕಂಪನಿಯು ಹೊಸ ಫೀಚರ್ಸ್ ಅನ್ನ ಆಸ್ಟರ್ ಎಸ್ ಯುವಿಯಲ್ಲಿ ಪರಿಚಯಿಸಿತು. ಆಸ್ಟರ್ ಕಾರು ಬಿಡುಗಡೆಯ ನಂತರ ಮಹೀಂದ್ರಾ ಎಕ್ಸ್ ಯುವಿ ಸೆವೆನ್ ಡಬಲ್ ಜೀರೋ, ಹ್ಯುಂಡೈ ಟುಸಾನ್, ಹೋಂಡಾ ಸಿಟಿ, ಟಾಟಾ ಹ್ಯಾರಿಯರ್, ಟಾಟಾ ಸಫಾರಿ ಮತ್ತು ಹೋಂಡಾ ಸಿಟಿ ಕಾರುಗಳಲ್ಲೂ ಪರಿಚಯಿಸಲಾಯ್ತು. ಹೀಗಾಗಿ ಮುಂಬರುವ ಕೆಲವೇ ದಿನಗಳಲ್ಲಿ ಇನ್ನು ಹಲವು ಹೊಸ ಕಾರುಗಳಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರಲಿದ್ದು, ಇದರಲ್ಲಿ ಹಲವಾರು ಆಕ್ಟಿವ್ ಸೇಫ್ಟಿ ಫೀಚರ್ಸ್ ನೀಡಲಾಗಿದೆ.

ಇದನ್ನೂ ಓದಿ: ಕಾರಿನ ಎಂಜಿನ್ ದಕ್ಷತೆ ಹೆಚ್ಚಿಸಲು ಈ ಸಿಂಪಲ್ ಟಿಪ್ಸ್ ತಪ್ಪದೇ ಅನುಸರಿಸಿ..

ಭಾರತದಲ್ಲಿ ಸದ್ಯ ಹೊಸ ಕಾರುಗಳು ಲೆವಲ್ 2 ಎಡಿಎಎಸ್ ಸೌಲಭ್ಯ ಪಡೆದುಕೊಳ್ಳುತ್ತಿದ್ದು, ಇದರಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಪೆಡೆಸ್ಟ್ರಿಯನ್ ಡಿಟೆಕ್ಷನ್, ಸರೌಂಡ್ ವ್ಯೂ, ಪಾರ್ಕಿಂಗ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ಫಾರ್ವಡ್ ಕೂಲಿಷನ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಸಿಸ್ಟ್ ಫೀಚರ್ಸ್ ಗಳಿರಲಿವೆ.

ಇನ್ನು ಲೆವಲ್ 2 ಎಡಿಎಎಸ್ ಫೀಚರ್ಸ್ ನಲ್ಲಿ ಮತ್ತೊಂದು ಮುಖ್ಯವಾದ ವೈಶಿಷ್ಟ್ಯ ವೆಂದರೆ ಕಾರು ಚಾಲನೆ ಮಾಡುವ ವೇಳೆ ಚಾಲಕನಿಗೆ ನಿದ್ರೆ ಮಂಪರು ಬಂದಲ್ಲಿ ತಕ್ಷಣವೇ ಅದು ಅಲರ್ಟ್ ಮಾಡುತ್ತದೆ. ಚಾಲಕನ ಚಾಲನಾ ಶೈಲಿಯನ್ನು ಆಧರಿಸಿ ನಿದ್ರೆ ಮಂಪರಿನಿಂದ ಎಚ್ಚರಿಸಿ ವಿಶ್ರಾಂತಿ ಸೂಚಿಸುವ ಮೂಲಕ ಅಪಘಾತಗಳನ್ನ ತಡೆಯಲು ಸಹಕಾರಿಯಾಗಿದೆ. ಎಡಿಎಎಸ್ ಸೌಲಭ್ಯವು ಸಂಪೂರ್ಣವಾಗಿ ರಡಾರ್ ಆಧರಿಸಿ ಕಾರ್ಯನಿರ್ವಹಿಸಲಿದ್ದು, ಇದು ಭವಿಷ್ಯದ ಆಟೊನೊಮಸ್ ಕಾರುಗಳಲ್ಲೂ ಇದು ನಿರ್ಣಾಯಕ ಪಾತ್ರವಹಿಸಲಿದೆ. ಆಟೋನೊಮಸ್ ಕಾರುಗಳಲ್ಲಿ ಸದ್ಯಕ್ಕೆ ಲೆವಲ್ 5 ಎಡಿಎಎಸ್ ಸೌಲಭ್ಯವನ್ನು ಬಳಕೆ ಮಾಡಲಾಗುತ್ತಿದ್ದು, ಇದರಲ್ಲಿ ಲೆವಲ್ 2 ಎಡಿಎಸ್ ಸೌಲಭ್ಯವು ಭಾರತದಲ್ಲಿ ಹೊಸ ಭರವಸೆ ಮೂಡಿಸಿದೆ.

Published On - 9:05 pm, Wed, 8 March 23

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ