ವಿನೂತನ ಫೀಚರ್ಸ್ ಗಳೊಂದಿಗೆ 2023ರ ಹೋಂಡಾ ಶೈನ್ 125 ಬೈಕ್ ಬಿಡುಗಡೆ

|

Updated on: Jun 22, 2023 | 10:15 PM

ಹೋಂಡಾ ಟು ವ್ಹೀಲರ್ ಕಂಪನಿಯು 2023ರ ಶೈನ್ 125 ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ವಿನೂತನ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಿದೆ.

ವಿನೂತನ ಫೀಚರ್ಸ್ ಗಳೊಂದಿಗೆ 2023ರ ಹೋಂಡಾ ಶೈನ್ 125 ಬೈಕ್ ಬಿಡುಗಡೆ
ಹೋಂಡಾ ಶೈನ್ 125 ಬೈಕ್ ಬಿಡುಗಡೆ
Follow us on

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಟು ವ್ಹೀಲರ್(Honda 2 Wheelers India) ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳನ್ನು ವಿಶೇಷ ಫೀಚರ್ಸ್ ಗಳೊಂದಿಗೆ ಉನ್ನತೀಕರಿಸುತ್ತಿದ್ದು, ಇದೀಗ 2023ರ ಶೈನ್ 125 (Shine 125) ಬೈಕ್ ಮಾದರಿಯನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 79,800 ಕ್ಕೆ ಬಿಡುಗಡೆ ಮಾಡಿದೆ.

ಹೊಸ ಹೋಂಡಾ ಶೈನ್ 125 ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಡ್ರಮ್ ಮತ್ತು ಡಿಸ್ಕ್ ಎನ್ನುವ ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡ್ರಮ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 79,800 ಬೆಲೆ ಹೊಂದಿದ್ದರೆ ಡಿಸ್ಕ್ ವೆರಿಯೆಂಟ್ ರೂ. 83,800 ಬೆಲೆ ಹೊಂದಿರುತ್ತದೆ.

ಇದನ್ನೂ ಓದಿ: ಸ್ಮಾರ್ಟ್ ಕೀ ಜೊತೆ ವಿಶೇಷ ಫೀಚರ್ಸ್ ಹೊಂದಿರುವ ಹೊಸ ಹೋಂಡಾ ಡಿಯೋ ಸ್ಕೂಟರ್ ಬಿಡುಗಡೆ

ಎಂಜಿನ್ ಮತ್ತು ಮೈಲೇಜ್
ಹೊಸ ಶೈನ್ 125 ಬೈಕ್ ಮಾದರಿಯಲ್ಲಿ ಹೋಂಡಾ ಕಂಪನಿಯು ತನ್ನ ಪ್ರಮುಖ ಬೈಕ್ ಸರಣಿಗಳಲ್ಲಿರುವ ಫ್ಯೂಯಲ್ ಇಂಜೆಕ್ಟೆಡ್ 123.94 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಜೋಡಣೆ ಮಾಡಿದ್ದು, ಇದು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿ ಬಂದಿರುವ ಬಿಎಸ್6 2ನೇ ಹಂತದ ಮಾನದಂಡಗಳನ್ನು ಪೂರೈಸಿದೆ. ಹೊಸ ತಂತ್ರಜ್ಞಾನದೊಂದಿಗೆ ನವೀಕರಣಗೊಂಡಿರುವ ಹಿನ್ನಲೆ ಹೊಸ ಎಂಜಿನ್ ನಲ್ಲಿ ಇ20 ಇಂಧನ ಬಳಕೆಗೆ ಸಹಕಾರಿಯಾಗಿದ್ದು, ಇದು ಎಸಿಜಿ ಸ್ಟಾರ್ಟರ್ ಮೋಟಾರ್ ಹೊಂದಿರಲಿದೆ.

ಈ ಮೂಲಕ ಹೊಸ ಬೈಕಿನಲ್ಲಿರುವ ಎಂಜಿನ್ 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 7,500 ಆರ್ ಪಿಎಂನಲ್ಲಿ 10.59 ಹಾರ್ಸ್ ಪವರ್ ಮತ್ತು 6,000 ಆರ್ ಪಿಎಂನಲ್ಲಿ 11 ಎನ್ಎಂ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 60 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಇದನ್ನೂ ಓದಿ: ಬಜೆಟ್ ಬೆಲೆಯ ಎಥರ್ 450ಎಸ್ ಇವಿ ಸ್ಕೂಟರ್ ಬಿಡುಗಡೆ

ಇದರೊಂದಿಗೆ ಹೊಸ ಬೈಕಿನಲ್ಲಿ ಹೋಂಡಾ ಕಂಪನಿಯು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಬದಿಯಲ್ಲಿ ಟ್ವಿನ್ ಸ್ಪ್ರಿಂಗ್‌ಗಳನ್ನು 5 ಹಂತದ ಹೊಂದಾಣಿಕೆ ಮಾಡಬಹುದಾದ ಅವಕಾಶ ನೀಡಿದ್ದು, ಈ ಮೂಲಕ 162 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುತ್ತದೆ. ಜೊತೆಗೆ ಹೊಸ ಬೈಕಿನ ಬ್ರೇಕಿಂಗ್ ಸೌಲಭ್ಯವು ಕೂಡಾ ಉತ್ತಮವಾಗಿದ್ದು, ಬೆಸ್ ವೆರಿಯೆಂಟ್ ನಲ್ಲಿ ಎರಡು ಬದಿಯಲ್ಲೂ ಡ್ರಮ್ ಬ್ರೇಕ್‌ ಹೊಂದಿದ್ದು, ಟಾಪ್ ಎಂಡ್ ವೆರಿಯೆಂಟ್ ನಲ್ಲಿ 240 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ 80/100 ಟ್ಯೂಬ್‌ಲೆಸ್ ಟೈರ್‌ ಜೋಡಿಸಲಾಗಿದೆ.

ಇನ್ನು ಹೊಸ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೇ ಹೊಸ ಆವೃತ್ತಿಯಲ್ಲಿ ಯಾವುದೇ ಗುರುತರ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬೈಕಿನಲ್ಲಿ ಬ್ಲ್ಯಾಕ್, ಜೆನಿ ಗ್ರೇ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ, ರೆಬೆಲ್ ರೆಡ್ ಮೆಟಾಲಿಕ್ ಮತ್ತು ಡಿಸೆಂಟ್ ಬ್ಲೂ ಮೆಟಾಲಿಕ್ ಎಂಬ ಬಣ್ಣಗಳ ಆಯ್ಕೆಗಳನ್ನು ಹೊಂದಿದ್ದು, ಹೊಸ ಬದಲಾವಣೆಗಳ ಜೊತೆಗೆ ಹೋಂಡಾ ಕಂಪನಿಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಮತ್ತು 7 ವರ್ಷಗಳ ವಿಸ್ತರಿತ ವಾರಂಟಿ ಆಫರ್ ನೀಡುತ್ತಿದೆ.