Hyundai Venue: ADAS ಫೀಚರ್ಸ್ ಹೊಂದಿರುವ ಹೊಸ ಹ್ಯುಂಡೈ ವೆನ್ಯೂ ಬಿಡುಗಡೆ

| Updated By: Praveen Sannamani

Updated on: Sep 04, 2023 | 8:38 PM

ಹ್ಯುಂಡೈ ಇಂಡಿಯಾ ಕಂಪನಿಯು ನವೀಕರಿಸಿದ ವೆನ್ಯೂ ಸಬ್ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆ ಮಾಡಿದ್ದು, ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಿದೆ.

Hyundai Venue: ADAS ಫೀಚರ್ಸ್ ಹೊಂದಿರುವ ಹೊಸ ಹ್ಯುಂಡೈ ವೆನ್ಯೂ ಬಿಡುಗಡೆ
ADAS ಫೀಚರ್ಸ್ ಹೊಂದಿರುವ ಹೊಸ ಹ್ಯುಂಡೈ ವೆನ್ಯೂ ಬಿಡುಗಡೆ
Follow us on

ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಹ್ಯುಂಡೈ ಇಂಡಿಯಾ(Hyundai India) ತನ್ನ ಜನಪ್ರಿಯ ವೆನ್ಯೂ(Venue) ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.33 ಲಕ್ಷ ಆರಂಭಿಕ ಬೆಲೆಯೊಂದಿಗೆ ಟಾಪ್ ಟಾಪ್ ಎಂಡ್ ಮಾದರಿ ರೂ. 13.75 ಲಕ್ಷ ಬೆಲೆ ಹೊಂದಿದೆ.

ಹ್ಯುಂಡೈ ಕಂಪನಿಯು ನವೀಕರಿಸಿದ ವೆನ್ಯೂ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಎಸ್ ಆಪ್ಷನ್ ಮತ್ತು ಎಸ್ಎಕ್ಸ್(ಆಪ್ಷನ್) ವೆರಿಯೆಂಟ್ ಬಿಡುಗಡೆ ಮಾಡಿದ್ದರೆ ವೆನ್ಯೂ ಎನ್ ಆವೃತ್ತಿಯಲ್ಲಿ ಎನ್6 ಮತ್ತು ಎನ್8 ವೆರಿಯೆಂಟ್ ಗಳನ್ನು ನವೀಕರಿಸಿದೆ.

ಸ್ಟ್ಯಾಂಡರ್ಡ್ ವೆನ್ಯೂ ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಇದೀಗ ಹೊಸದಾಗಿ 1.0 ಲೀಟರ್ ಟರ್ಬೊ ಪೆಟ್ರೋಲ್ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೋಡಣೆ ಮಾಡಿದ್ದು, ಸ್ಟ್ಯಾಂಡರ್ಡ್ ವೆನ್ಯೂ ಮತ್ತು ವೆನ್ಯೂ ಎನ್ ಲೈನ್ ಟಾಪ್ ಎಂಡ್ ಮಾದರಿಗಳಿಗೆ ಅನ್ವಯಿಸುವಂತೆ ಲೆವಲ್-1 ಅಡ್ವಾನ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ನೀಡಲಾಗಿದೆ.

ಇದನ್ನೂ ಓದಿ: ಆಕರ್ಷಕ ಬೆಲೆಗೆ ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಎಸ್ ಯುವಿ ಬಿಡುಗಡೆ

ಎಸ್ಎಕ್ಸ್ ಆಪ್ಷನ್ ವೆರಿಯೆಂಟ್ ನಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು ಎನ್ ಲೈನ್ ನಲ್ಲಿರುವ ಎನ್8 ವೆರಿಯೆಂಟ್ ಗಳಲ್ಲಿ ಎಡಿಎಎಸ್ ಫೀಚರ್ಸ್ ನೀಡಲಾಗಿದ್ದು, ಲೆವಲ್ 1 ಎಡಿಎಎಸ್ ನಲ್ಲಿ ಫಾರ್ವಡ್ ಕೂಲಿಷನ್ ಅವಾಯ್ಡ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಡ್ರೈವರ್ ಅಟ್ಷೆಷನ್ ವಾರ್ನಿಂಗ್, ಲೇನ್ ಫಾಲೋವಿಂಗ್ ಅಸಿಸ್ಟ್ ಮತ್ತು ಹೈ ಭೀಮ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

ಈ ಮೂಲಕ ಹ್ಯುಂಡೈ ಕಂಪನಿಯು ಎಡಿಎಎಸ್ ಹೊಂದಿರುವ ನಾಲ್ಕನೇ ಕಾರು ಮಾದರಿಯನ್ನು ಪರಿಚಯಿಸಿದಂತಾಗಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಆವೃತ್ತಿಗಳಲ್ಲೂ ಹೊಸ ಸುರಕ್ಷಾ ಸೌಲಭ್ಯ ಪರಿಚಯಿಸಲಿದೆ. ಎಡಿಎಎಸ್ ಸೌಲಭ್ಯವನ್ನು ಕಾರು ಉತ್ಪಾದನಾ ಕಂಪನಿಗಳು ಕಾರು ಮಾದರಿಗಳಿಗೆ ಅನುಗುಣವಾಗಿ ಲೆವಲ್ 1, ಲೆವಲ್ 2, ಲೆವಲ್ 3, ಲೆವಲ್ 4 ಮತ್ತು ಲೆವಲ್ 5 ಹಂತಗಳಲ್ಲಿ ಜೋಡಣೆ ಮಾಡುತ್ತಿದ್ದು, ಇದೀಗ ವೆನ್ಯೂ ಕಾರಿನಲ್ಲಿ ಸಾಮಾನ್ಯ ಆಕ್ಟಿವ್ ಸೇಫ್ಟಿ ಫೀಚರ್ಸ್ ಹೊಂದಿರುವ ಲೆವಲ್ 1 ಎಡಿಎಎಸ್ ಜೋಡಿಸಲಾಗಿದೆ. ಆಕ್ಟಿವ್ ಸೇಫ್ಟಿ ಫೀಚರ್ಸ್ ಗಳಿಗೆ ಅನುಗುಣವಾಗಿ ವಿವಿಧ ಹಂತಗಳು ನಿರ್ಧಾರವಾಗಲಿದ್ದು, ವೆನ್ಯೂ ಹೊರತುಪಡಿಸಿ ಐಯಾನಿಕ್ 5, ಟುಸಾನ್ ಮತ್ತು ವೆರ್ನಾ ಕಾರುಗಳಲ್ಲಿ ತುಸು ಹೆಚ್ಚಿನ ಫೀಚರ್ಸ್ ಹೊಂದಿರುವ ಲೆವಲ್ 2 ಎಡಿಎಎಸ್ ಜೋಡಿಸಲಾಗಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಇನ್ನು ಹೊಸ ಫೀಚರ್ಸ್ ಹೊಂದಿರುವ ವೆನ್ಯೂ ಕಾರಿನಲ್ಲಿ ಇನ್ನುಳಿದ ವೆರಿಯೆಂಟ್ ಗಳ ಮಾರಾಟ ಎಂದಿನಂತೆ ಮಾರಾಟಗೊಳ್ಳಲಿದ್ದು, ಇವು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 7.77 ಲಕ್ಷದಿಂದ ರೂ. 13.48 ಲಕ್ಷ ಬೆಲೆ ಹೊಂದಿರಲಿವೆ.