Best Mileage Hybrid Cars: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಭಾರತದಲ್ಲಿ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ವಿವಿಧ ಕಾರು ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ಭರ್ಜರಿ ಮೈಲೇಜ್ ಪ್ರೇರಿತ ಹೈಬ್ರಿಡ್ ಮಾದರಿಗಳನ್ನು ಮಾರಾಟ ಮಾಡುತ್ತಿವೆ.

Best Mileage Hybrid Cars: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!
ಭರ್ಜರಿ ಮೈಲೇಜ್ ನೀಡುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!
Follow us
Praveen Sannamani
|

Updated on:Sep 05, 2023 | 5:16 PM

ಹೊಸ ಕಾರುಗಳ ಮಾರಾಟ ವಿಭಾಗದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಜೊತೆ ಹೈಬ್ರಿಡ್ ಕಾರುಗಳು(Hybrid Cars) ಸಹ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಹೈಬ್ರಿಡ್ ಕಾರುಗಳು ಬೆಲೆಯಲ್ಲಿ ಸಾಮಾನ್ಯ ಕಾರುಗಳಿಂತಲೂ ತುಸು ದುಬಾರಿಯಾಗಿದ್ದರೂ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗೆ ಬಜೆಟ್ ಬೆಲೆಯಲ್ಲೂ ಬಿಡುಗಡೆಯಾಗುತ್ತಿವೆ. ಹಾಗಾದ್ರೆ ಸದ್ಯ ಮಾರುಕಟ್ಚೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಹೈಬ್ರಿಡ್ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ಕಾರುಗಳ ಅಬ್ಬರ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಪೆಟ್ರೋಲ್ ಜೊತೆ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿರುವ ಇವು ಪರ್ಫಾಮೆನ್ಸ್ ಜೊತೆಗೆ ಭರ್ಜರಿ ಮೈಲೇಜ್ ನೀಡುತ್ತಿವೆ. ಹೀಗಾಗಿ ಹೊಸ ಕಾರು ಖರೀದಿದಾರರು ಹೈಬ್ರಿಡ್ ಎಂಜಿನ್ ಪ್ರೇರಿತ ಕಾರುಗಳ ಆಯ್ಕೆಯತ್ತ ಮುಖಮಾಡುತ್ತಿದ್ದು, ಬ್ರಾಂಡ್ ಮತ್ತು ಫೀಚರ್ಸ್ ಆಧರಿಸಿ ರೂ. 17 ಲಕ್ಷ ಆರಂಭಿಕ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಿವೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುತ್ತೆ ಹೊಚ್ಚ ಹೊಸ ಟೊಯೊಟಾ ರೂಮಿಯಾನ್

ಪ್ರಸ್ತುತ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಗೆ ಖರೀದಿಗೆ ಲಭ್ಯವಿರುವ ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮೊದಲ ಸ್ಥಾನದಲ್ಲಿದೆ. ಇದು ಎಕ್ಸ್ ಶೋರೂಂ ಪ್ರಕಾರ ರೂ. 16.46 ಲಕ್ಷದಿಂದ ರೂ. 19.99 ಲಕ್ಷ ಬೆಲೆ ಹೊಂದಿದ್ದು, ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ ಜತೆ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಇದು ಪ್ರತಿ ಲೀಟರ್ ಪೆಟ್ರೋಲ್ ಗೆ 27.97 ಕಿ.ಮೀ ಮೈಲೇಜ್ ನೀಡಲಿದ್ದು, ಇದರಲ್ಲಿ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಸಹ ಖರೀದಿಗೆ ಲಭ್ಯವಿದೆ.

ಅತ್ಯುತ್ತಮ ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಮತ್ತೊಂದು ಬಜೆಟ್ ಆವೃತ್ತಿಯೆಂದರೆ ಅದು ಮಾರುತಿ ಗ್ರ್ಯಾಂಡ್ ವಿಟಾರಾ. ಇದು ಹೈರೈಡರ್ ಜೊತೆ ಪ್ಲ್ಯಾಟ್ ಫಾರ್ಮ್ ಹಂಚಿಕೊಂಡಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 18.29 ಲಕ್ಷದಿಂದ ರೂ. 19.79 ಲಕ್ಷ ಬೆಲೆ ಹೊಂದಿದೆ. ಗ್ರ್ಯಾಂಡ್ ವಿಟಾರಾ ದಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ನೀಡಲಿದ್ದು, ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಸಹ ಲಭ್ಯವಿದೆ.

ಅತ್ಯುತ್ತಮ ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಹೋಂಡಾ ಸಿಟಿ ಸೆಡಾನ್ ಕಾರು ಸಹ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದು ಎಕ್ಸ್ ಶೋರೂಂ ಪ್ರಕಾರ ರೂ. 18.99 ಲಕ್ಷದಿಂದ ರೂ. 20.39 ಲಕ್ಷ ಬೆಲೆ ಹೊಂದಿದೆ. ಸಿಟಿ ಹೈಬ್ರಿಡ್ ಆವೃತ್ತಿಯು 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಹೈಬ್ರಿಡ್ ತಂತ್ರಜ್ಞಾನ ಹೊಂದಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 27.13 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲಿ ಹೈಬ್ರಿಡ್ ಎಂಜಿನ್ ಹೊಂದಿರುವ ಏಕೈಕ ಕಾರು ಮಾದರಿಯಾಗಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಸಿಎನ್‌ಜಿ ಬಿಡುಗಡೆ

ಇನ್ನು ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಸದ್ಯ ಭರ್ಜರಿ ಬೇಡಿಕೆ ಹೊಂದಿರುವ ಕಾರುಗಳಲ್ಲಿ ಮಾರುತಿ ಸುಜುಕಿ ಇನ್ವಿಕ್ಟೊ ಮತ್ತು ಟೊಯೊಟಾ ಇನೋವಾ ಹೈಕ್ರಾಸ್ ಪ್ರಮುಖವಾಗಿವೆ. ಈ ಎರಡೂ ಕಾರುಗಳು ಸಾಮಾನ್ಯ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ವಿಭಿನ್ನ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಇನ್ವಿಕ್ಟೊ ಹೈಬ್ರಿಡ್ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 24.79 ಲಕ್ಷದಿಂದ ರೂ. 28.42 ಲಕ್ಷ ಬೆಲೆ ಹೊಂದಿದ್ದರೆ ಇನೋವಾ ಹೈಕ್ರಾಸ್ ಹೈಬ್ರಿಡ್ ಆವೃತ್ತಿ ಎಕ್ಸ್ ಶೋರೂಂ ಪ್ರಕಾರ ರೂ. 25.03 ಲಕ್ಷದಿಂದ ರೂ. 30.26 ಲಕ್ಷ ಬೆಲೆ ಹೊಂದಿದೆ.

ಇನೋವಾ ಹೈಕ್ರಾಸ್ ಮತ್ತು ಇನ್ವಿಕ್ಟೊ ಎಂಪಿವಿ ಆವೃತ್ತಿಗಳಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದ್ದು, ಹೈಬ್ರಿಡ್ ಎಂಜಿನ್ ಮಾದರಿಯು ಎಲೆಕ್ಟ್ರಿಕ್ ಮೋಟಾರ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 23.24 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ. ಹಾಗೆಯೇ ಈ ಎರಡು ಹೊಸ ಕಾರುಗಳಲ್ಲಿ ಹಲವಾರು ಪ್ರೀಮಿಯಂ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್ ನೀಡಲಾಗಿದೆ. ಜೊತೆಗೆ ಇನೋವಾ ಹೈಕ್ರಾಸ್ ಕಾರಿನಲ್ಲಿ ಅಡ್ವಾನ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸಹ ನೀಡಲಾಗಿದ್ದು, ಬೆಲೆ ಇಳಿಕೆಗಾಗಿ ಇನ್ವಿಕ್ಟೊ ಕಾರಿನಲ್ಲಿ ಎಡಿಎಎಸ್ ನೀಡಲಾಗಿಲ್ಲ.

Published On - 7:23 pm, Sun, 27 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ