Tata Punch iCNG: ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಸಿಎನ್‌ಜಿ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಪಂಚ್ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Tata Punch iCNG: ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಸಿಎನ್‌ಜಿ ಬಿಡುಗಡೆ
ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಸಿಎನ್‌ಜಿ ಬಿಡುಗಡೆ
Follow us
Praveen Sannamani
|

Updated on:Aug 04, 2023 | 7:12 PM

ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಪಂಚ್ ಸಿಎನ್‌ಜಿ(Punch CNG) ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಪ್ರಮುಖ ಐದು ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.10 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.68 ಲಕ್ಷ ಬೆಲೆ ಹೊಂದಿದೆ.

ಪಂಚ್ ಸಿಎನ್‌ಜಿ ಮಾದರಿಯು ಪ್ಯೂರ್, ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಂಪ್ಲಿಶೆಡ್ ಮತ್ತು ಅಕಂಪ್ಲಿಶೆಡ್ ಡ್ಯಾಜೆಲ್ ಎಸ್ ಎನ್ನುವ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಪ್ಯೂರ್ ವೆರಿಯೆಂಟ್ ರೂ. ರೂ. 7.10 ಲಕ್ಷ ಬೆಲೆ ಹೊಂದಿದ್ದರೆ ಅಡ್ವೆಂಚರ್ ವೆರಿಯೆಂಟ್ ರೂ. 7.85 ಲಕ್ಷ, ಅಡ್ವೆಂಚರ್ ರಿದಮ್ ವೆರಿಯೆಂಟ್ ರೂ. 8.20 ಲಕ್ಷ, ಅಕಂಪ್ಲಿಶೆಡ್ ವೆರಿಯೆಂಟ್ ರೂ. 8.85 ಲಕ್ಷ ಮತ್ತು ಅಕಂಪ್ಲಿಶೆಡ್ ಡ್ಯಾಜೆಲ್ ಎಸ್ ವೆರಿಯೆಂಟ್ ರೂ. 9.68 ಲಕ್ಷ ಬೆಲೆ ಹೊಂದಿವೆ.

Tata Punch iCNG (3)

ಹೊಸ ಪಂಚ್ ಸಿಎನ್‌ಜಿ ವೆರಿಯೆಂಟ್ ಗಳು ಸಾಮಾನ್ಯ ಪೆಟ್ರೋಲ್ ವೆರಿಯೆಂಟ್ ಗಿಂತ ರೂ. 95 ಸಾವಿರದಿಂದ ರೂ. 1.10 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಯಾಗೋ ಸಿಎನ್‌ಜಿ , ಟಿಗೋರ್ ಸಿಎನ್‌ಜಿ ಮತ್ತು ಆಲ್ಟ್ರೊಜ್ ಸಿಎನ್‌ಜಿ ಆವೃತ್ತಿಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ನಾಲ್ಕನೇ ಕಾರು ಮಾದರಿಯಾಗಿ ಪಂಚ್ ಸಿಎನ್‌ಜಿ ಬಿಡುಗಡೆ ಮಾಡಿದ್ದು, ಇದು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಎಕ್ಸ್ಟರ್ ಸಿಎನ್‌ಜಿ ಆವೃತ್ತಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಲಗ್ಷುರಿ ಫೀಚರ್ಸ್ ಗಳೊಂದಿಗೆ 2023ರ ಟೊಯೊಟಾ ವೆಲ್‌ಫೈರ್ ಬಿಡುಗಡೆ

Tata Punch iCNG (1)

ಎಂಜಿನ್ ಮತ್ತು ಮೈಲೇಜ್ ಪಂಚ್ ಸಿಎನ್‌ಜಿ ಕಾರಿನಲ್ಲಿ ಟಾಟಾ ಕಂಪನಿಯು ಸಾಮಾನ್ಯ ಮಾದರಿಯಲ್ಲಿರುವ 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ವಿಶೇಷ ತಂತ್ರಜ್ಞಾನ ಹೊಂದಿರುವ ಐಸಿಎನ್‌ಜಿ ಕಿಟ್ ಜೋಡಣೆ ಹೊಂದಿದ್ದು, ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 72 ಹಾರ್ಸ್ ಪವರ್ ಮತ್ತು 103 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಮೂಲಕ ಇದು ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 26 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಮ್ಯಾನುವಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಹೊಸ ಕಾರಿನಲ್ಲಿ ಮತ್ತೊಂದು ವಿಶೇಷವೆಂದರೆ ಡ್ಯುಯಲ್ ಸಿಎನ್‌ಜಿ ಟ್ಯಾಂಕ್ ಹೊಂದಿರುವುದರಿಂದ ಸಾಮಾನ್ಯ ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಹೆಚ್ಚಿನ ಮಟ್ಟದ ಬೂಟ್ ಸ್ಪೆಸ್ ದೊರೆಯಲಿದ್ದು, ಇನ್ನುಳಿದಂತೆ ಆಯಾ ವೆರಿಯೆಂಟ್ ಗಳಲ್ಲಿ ಪೆಟ್ರೋಲ್ ಮಾದರಿಯಲ್ಲಿರುವಂತೆ ಫೀಚರ್ಸ್ ಜೋಡಣೆ ಮುಂದುವರಿಸಲಾಗಿದೆ. ಹೊಸ ಕಾರಿನಲ್ಲಿ ಸಿಎನ್‌ಜಿ ಮಾದರಿಯಾಗಿ ಗುರುತಿಸಿಕೊಳ್ಳಲು ಟೈಲ್ ಗೇಟ್ ಮೇಲೆ iCNG ಬ್ಯಾಡ್ಜ್ ನೀಡಲಾಗಿದ್ದು, ಟಾಪ್ ಎಂಡ್ ವೆರಿಯೆಂಟ್ ಸನ್ ರೂಫ್ ಪಡೆದುಕೊಂಡಿರಲಿದೆ.

ಇದನ್ನೂ ಓದಿ: ಪನೊರಮಿಕ್ ಸನ್ ರೂಫ್ ಹೊಂದಿರುವ ಕಾರುಗಳಿವು!

Tata Punch iCNG (2)

ಇನ್ನು ಹೊಸ ಸಿಎನ್‌ಜಿ ಕಾರಿನಲ್ಲಿ ಆಟೋಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್, ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಆಟೋಮ್ಯಾಟಿಕ್ ಎಸಿ, ಎಂಜಿನ್ ಸ್ಟಾರ್ಟ್/ಸ್ಟಾಪ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸರ್ಪೊಟ್ ಮಾಡುವ 7 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ ಹಲವು ಸೌಲಭ್ಯಗಳಿವೆ.

Published On - 7:03 pm, Fri, 4 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ