Panoramic Sunroof Cars: ಪನೊರಮಿಕ್ ಸನ್ ರೂಫ್ ಹೊಂದಿರುವ ಕಾರುಗಳಿವು!
ಹೊಸ ಕಾರುಗಳಲ್ಲಿ ಇತ್ತೀಚೆಗೆ ಗ್ರಾಹಕರ ಬೇಡಿಕೆಯೆಂತೆ ಕಾರು ಕಂಪನಿಗಳು ಹಲವಾರು ಪ್ರೀಮಿಯಂ ಫೀಚರ್ಸ್ ಗಳನ್ನು ಆಯ್ಕೆ ರೂಪದಲ್ಲಿ ಜೋಡಣೆ ಮಾಡುತ್ತಿದ್ದು, ಹೊಸ ಫೀಚರ್ಸ್ ಗಳಲ್ಲಿ ಪನೊರಮಿಕ್ ಸನ್ ರೂಫ್ ಕೂಡಾ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.
ಪನೊರಮಿಕ್ ಸನ್ ರೂಫ್(Panoramic Sunroof) ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಗಳು ಇತ್ತೀಚೆಗೆ ಹೊಸ ಕಾರುಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇವು ಕಾರು ಚಾಲನೆಗೆ ಐಷಾರಾಮಿ ಅನುಭವ ನೀಡುತ್ತವೆ. ಹೀಗಾಗಿ ಬಜೆಟ್ ಬೆಲೆಗೆ ಖರೀದಿಸಬಹುದಾದ ಪನೊರಮಿಕ್ ಸನ್ ರೂಫ್ ಕಾರುಗಳು ಯಾವುವು? ಬೆಲೆ ಎಷ್ಟು? ಎಲ್ಲಾ ಮಾಹಿತಿ ಇಲ್ಲಿದೆ.
ಐಷಾರಾಮಿ ಕಾರುಗಳಲ್ಲಿ ಮಾತ್ರವಲ್ಲ ಬಜೆಟ್ ಬೆಲೆಯ ಕಾರುಗಳಲ್ಲೂ ಇತ್ತೀಚೆಗೆ ಹಲವು ಹೊಸ ಫೀಚರ್ಸ್ ಗಳನ್ನು ನೀಡಲಾಗುತ್ತಿದ್ದು, ಇವು ಕಾರುಗಳಲ್ಲಿ ಪ್ರಯಾಣಿಸುವಾಗ ಐಷಾರಾಮಿ ಅನುಭವ ನೀಡುತ್ತವೆ. ಹೀಗಾಗಿ ಗ್ರಾಹಕರು ಮಧ್ಯಮ ಕ್ರಮಾಂಕದ ಕಾರುಗಳಲ್ಲೂ ಹೊಸ ಫೀಚರ್ಸ್ ಗಳನ್ನು ಬಯಸುತ್ತಿದ್ದು, ಕಾರು ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡುತ್ತಿವೆ. ಇವು ಸಾಮಾನ್ಯ ಕಾರುಗಳಿಂತಲೂ ತುಸು ದುಬಾರಿ ಎನಿಸಿದರೂ ಹಲವಾರು ಗ್ರಾಹಕರಿಗೆ ಹೊಸ ಫೀಚರ್ಸ್ ಗಳು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
ಹೊಸ ಫೀಚರ್ಸ್ ಗಳಲ್ಲಿ ಪನೊರಮಿಕ್ ಸನ್ ರೂಫ್ ಕೂಡಾ ಒಂದಾಗಿದ್ದು, ಕೆಲವೇ ವೆರಿಯೆಂಟ್ ಗಳಲ್ಲಿ ಮಾತ್ರ ಹೊಸ ಫೀಚರ್ಸ್ ನೀಡಲಾಗುತ್ತಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳಲ್ಲಿ ಹೊಸ ಫೀಚರ್ಸ್ ಗೆ ಹೆಚ್ಚಿನ ಬೇಡಿಕೆಯಿದ್ದು, ರೂ. 14 ಲಕ್ಷ ಬೆಲೆ ಅಂತರದಲ್ಲಿ ಹಲವಾರು ಕಾರುಗಳು ಖರೀದಿಗೆ ಲಭ್ಯವಿವೆ. ಪನೊರಮಿಕ್ ಸನ್ ರೂಫ್ ಹೊಂದಿರುವ ಪ್ರಮುಖ ಎಸ್ ಯುವಿ ಕಾರುಗಳಲ್ಲಿ ಹ್ಯುಂಡೈ, ಎಂಜಿ, ಟಾಟಾ ಕಾರುಗಳು ಕೂಡಾ ಮುಂಚೂಣಿಯಲ್ಲಿವೆ.
ಸನ್ ರೂಫ್ ಹೊಂದಿರುವ ಕಾರುಗಳು ಸದ್ಯ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.96 ಲಕ್ಷಕ್ಕೆ ಹ್ಯುಂಡೈ ಕ್ರೆಟಾ, ರೂ. 14.21 ಲಕ್ಷಕ್ಕೆ ಎಂಜಿ ಆಸ್ಟರ್, ರೂ. 15 ಲಕ್ಷಕ್ಕೆ ಕಿಯಾ ಸೆಲ್ಟೊಸ್, ರೂ.15.41 ಲಕ್ಷಕ್ಕೆ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ರೂ. 16.04 ಲಕ್ಷಕ್ಕೆ ಟೊಯೊಟಾ ಹೈರೈಡರ್, ರೂ. 16.78 ಲಕ್ಷಕ್ಕೆ ಹ್ಯುಂಡೈ ಅಲ್ಕಾಜರ್, ರೂ.17.16 ಲಕ್ಷಕ್ಕೆ ಎಂಜಿ ಹೆಕ್ಟರ್, ರೂ. 17.82 ಲಕ್ಷಕ್ಕೆ ಎಕ್ಸ್ ಯುವಿ700, ರೂ. 17.90 ಲಕ್ಷಕ್ಕೆ ಟಾಟಾ ಹ್ಯಾರಿಯರ್, ರೂ.18.66 ಲಕ್ಷಕ್ಕೆ ಟಾಟಾ ಸಫಾರಿ ಖರೀದಿಗೆ ಲಭ್ಯವಿದ್ದು, ಇವು ಮಧ್ಯಮ ಕ್ರಮಾಂಕದ ವೆರಿಯೆಂಟ್ ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯೆಂಟ್ ಗಳ ತನಕ ಖರೀದಿಸಬಹುದಾಗಿದೆ.