Toyota Vellfire: ಲಗ್ಷುರಿ ಫೀಚರ್ಸ್ ಗಳೊಂದಿಗೆ 2023ರ ಟೊಯೊಟಾ ವೆಲ್‌ಫೈರ್ ಬಿಡುಗಡೆ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಐಷಾರಾಮಿ ಎಂಪಿವಿ ಕಾರು ಮಾದರಿಯಾದ ವೆಲ್‌ಫೈರ್ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Follow us
Praveen Sannamani
|

Updated on:Aug 03, 2023 | 9:57 PM

ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್ ಯುವಿ ಕಾರು ಮಾದರಿಗಳ ಜೊತೆಗೆ ಐಷಾರಾಮಿ ಕಾರುಗಳ ಮಾರಾಟದಲ್ಲೂ ಮುಂಚೂಣಿ ಸಾಧಿಸುತ್ತಿರುವ ಟೊಯೊಟಾ(Toyota) ಕಂಪನಿಯು ಭಾರತದಲ್ಲಿ ನವೀಕೃತ ವೆಲ್‌ಫೈರ್(Vellfire) ಎಂಪಿವಿ ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ರಮುಖ ಎರಡು ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 1.20 ಕೋಟಿ ಬೆಲೆ ಹೊಂದಿದೆ.

ಹೊಸ ವೆಲ್‌ಫೈರ್ ಎಂಪಿವಿ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೈ ಮತ್ತು ವಿಐಪಿ ವೆರಿಯೆಂಟ್ ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಹೊಸ ಕಾರಿನ ಹೈ ವೆರಿಯೆಂಟ್ ರೂ. 1.20 ಕೋಟಿ ಬೆಲೆ ಹೊಂದಿದ್ದರೆ ವಿಐಪಿ ವೆರಿಯೆಂಟ್ ರೂ. 1.30 ಕೋಟಿ ಬೆಲೆ ಹೊಂದಿದೆ. ಇದರಲ್ಲಿ ಶೀಘ್ರದಲ್ಲಿಯೇ ಮತ್ತೊಂದು ಹೈ ಎಂಡ್ ಮಾದರಿಯಾದ ಎಕ್ಸಿಕ್ಲೂಟಿವ್ ಲಾಂಜ್ ವೆರಿಯೆಂಟ್ ಬಿಡುಗಡೆ ಮಾಡಲಾಗುತ್ತಿದ್ದು, ಇದು ಹೈ ಮತ್ತು ವಿಐಪಿ ವೆರಿಯೆಂಟ್ ಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಫೀಚರ್ಸ್ ಹೊಂದಿರಲಿದೆ.

Toyota Vellfire

ಹೊಸ ವೆಲ್‌ಫೈರ್ ವಿಶೇಷತೆಗಳೇನು?

ನವೀಕೃತ ವೆಲ್‌ಫೈರ್ ಮಾದರಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಲೆಕ್ಸಸ್ ಎಲ್ಎಂ ಆಧರಿಸಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾದ ವಿನ್ಯಾಸದೊಂದಿಗೆ ಸಿಕ್ಸ್ ಸ್ಪಾಟ್ ಗ್ರಿಲ್ ಮತ್ತು ಸ್ಪಿಟ್ ಹೆಡ್ ಲ್ಯಾಂಪ್ಸ್ ಜೋಡಣೆಯು ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡಿವೆ. ಹಾಗೆಯೇ ಹೊಸ ಕಾರಿನಲ್ಲಿರುವ ಕೆಳಭಾಗದಲ್ಲಿ ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ನೀಡಲಾಗಿದ್ದು, ಯು ಮಾದರಿಯಲ್ಲಿರುವ ಕ್ರೋಮ್ ಸ್ಟ್ರಿಪ್ ಎರಡು ಬದಿಯಲ್ಲಿರುವ ಹೆಡ್ ಲ್ಯಾಂಪ್ಸ್ ವಿನ್ಯಾಸಕ್ಕೆ ಸಂಪರ್ಕಿಸುವ ಮೂಲಕ ಉತ್ತಮ ಹೊರ ನೋಟ ನೀಡಿದೆ.

ಇದನ್ನೂ ಓದಿ: ಪನೊರಮಿಕ್ ಸನ್ ರೂಫ್ ಹೊಂದಿರುವ ಕಾರುಗಳಿವು!

ಇನ್ನು ಹೊಸ ಕಾರಿನ ಹೊರಭಾಗದಲ್ಲಿ ಕ್ರೋಮ್ ಔಟ್ ಲೈನ್ ಜೊತೆಗೆ ಬ್ಲ್ಯಾಕ್ ಔಟ್ ಪಿಲ್ಲರ್ಸ್, ವಿ ಮಾದರಿಯಲ್ಲಿರುವ ಟೈಲ್ ಲ್ಯಾಂಪ್, ವೆಲ್ ಫೈರ್ ಬ್ಯಾಡ್ಜಿಂಗ್ ನೀಡಲಾಗಿದ್ದು, ಒಳಭಾಗದಲ್ಲಿ ಆಕರ್ಷಕವಾದ ಡ್ಯಾಶ್ ಬೋರ್ಡ್, 60ಕ್ಕೂ ಹೆಚ್ಚು ಕನೆಕ್ಟೆಟೆಡ್ ಫೀಚರ್ಸ್ ಗಳನ್ನು ಹೊಂದಿರುವ 14 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಕೂಲಿಂಗ್ ಸೌಲಭ್ಯ ಹೊಂದಿರುವ ಅರಾಮದಾಯಕವಾದ ಆಸನಗಳು, ವೈರ್ ಲೆಸ್ ಚಾರ್ಜರ್, ಎಂಟು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಆಸನ, ದೊಡ್ಡದಾಗಿರುವ ಓವರ್ ಹೆಡ್ ಕನ್ಸೊಲ್, ಮಲ್ಟಿಪಲ್ ಎಸಿ ವೆಂಟ್ಸ್, ಫುಲ್ ಡೌನ್ ಮಾಡಬಹುದಾದ ಸನ್ ಶೇಡ್ ಸೌಲಭ್ಯಗಳಿವೆ.

Toyota Vellfire (4)

ಹಾಗೆಯೇ ಹೊಸ ಎಂಪಿವಿ ಆವೃತ್ತಿಯು ಆಕರ್ಷಕವಾದ ಉದ್ದಳತೆ ಹೊಂದಿದ್ದು, ಇದು ಆರಾಮದಾಯಕ ಪ್ರಯಾಣ ಒದಸುವುದಕ್ಕೆ ಮುಖ್ಯ ಕಾರಣವಾಗಿದೆ. ಹೊಸ ಸದ್ಯ 4,995ಎಂಎಂ ಉದ್ದ, 1,850 ಎಂಎಂ ಅಗಲ, 1,950ಎಂಎಂ ಎತ್ತರ ಮತ್ತು 3,000 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಇದು 160 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ವೆಲ್‌ಫೈರ್ ಕಾರು ಮಾದರಿಯಲ್ಲಿ ಟೊಯೊಟಾ ಕಂಪನಿಯು 2.5 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಜೋಡಣೆ ಹೊಂದಿದ್ದು, ಇದು ಇ-ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 193 ಹಾರ್ಸ್ ಪವರ್ ಮತ್ತು 240 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 19.28 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

Toyota Vellfire (4)

ಇದನ್ನೂ ಓದಿ: ಭರ್ಜರಿ ಫೀಚರ್ಸ್ ಗಳೊಂದಿಗೆ ಕಿಯಾ ಸೆಲ್ಟೊಸ್ ಫೇಸ್ ಲಿಫ್ಟ್ ಬಿಡುಗಡೆ

ಸುರಕ್ಷಾ ಸೌಲಭ್ಯಗಳು

ಟೊಯೊಟಾ ಕಂಪನಿಯು ಹೊಸ ವೆಲ್‌ಫೈರ್ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಇದರಲ್ಲಿ ಮೊದಲ ಬಾರಿಗೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗಿದೆ. ಜೊತೆಗೆ ಎಬಿಎಸ್ ಜೊತೆ ಇಬಿಡಿ, ಆರು ಏರ್ ಬ್ಯಾಗ್ ಗಳು, ಸ್ಟ್ಯಾಬಿಲಿಟಿ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಹಿಲ್ ಅಸಿಸ್ಟ್ ಕಂಟ್ರೋಲ್ ಸೌಲಭ್ಯಗಳಿದ್ದು, ಎಡಿಎಎಸ್ ಸೇಫ್ಟಿ ಪ್ಯಾಕೇಜ್ ನಲ್ಲಿ 360 ಡಿಗ್ರಿ ಕ್ಯಾಮೆರಾ, ಹೈ ಬೀಮ್ ಅಸಿಸ್ಟ್, ಪ್ರೀ-ಕೂಲಿಷನ್ ಸೇಫ್ಟಿ ಸಿಸ್ಟಂ, ಲೈನ್ ಟ್ರೆಸ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯಗಳಿವೆ.

Published On - 4:10 pm, Thu, 3 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ