Kia Seltos facelift: ಭರ್ಜರಿ ಫೀಚರ್ಸ್ ಗಳೊಂದಿಗೆ ಕಿಯಾ ಸೆಲ್ಟೊಸ್ ಫೇಸ್ ಲಿಫ್ಟ್ ಬಿಡುಗಡೆ

ಕಿಯಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಸೆಲ್ಟೊಸ್ ಕಂಪ್ಯಾಕ್ಟ್ ಎಸ್ ಯುವಿಯ ಫೇಸ್ ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Kia Seltos facelift: ಭರ್ಜರಿ ಫೀಚರ್ಸ್ ಗಳೊಂದಿಗೆ ಕಿಯಾ ಸೆಲ್ಟೊಸ್ ಫೇಸ್ ಲಿಫ್ಟ್ ಬಿಡುಗಡೆ
ಭರ್ಜರಿ ಫೀಚರ್ಸ್ ಗಳೊಂದಿಗೆ ಕಿಯಾ ಸೆಲ್ಟೊಸ್ ಫೇಸ್ ಲಿಫ್ಟ್ ಬಿಡುಗಡೆ
Follow us
Praveen Sannamani
|

Updated on: Jul 21, 2023 | 3:51 PM

ಕಿಯಾ ಇಂಡಿಯಾ(Kia India) ಕಂಪನಿಯು ಬಹುನೀರಿಕ್ಷಿತ ಸೆಲ್ಟೊಸ್  ಫೇಸ್ ಲಿಫ್ಟ್(Seltos facelift) ಆವೃತ್ತಿಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಹೊಸ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ಹಲವಾರು ಹೊಸ ಫೀಚರ್ಸ್ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಟ್ಟಿದೆ.

ಹೊಸ ಸೆಲ್ಟೊಸ್ ಕಂಪ್ಯಾಕ್ಟ್ ಎಸ್ ಯುವಿ ಕಾರು ಹೆಚ್ ಟಿಇ, ಹೆಚ್ ಟಿಕೆ, ಹೆಚ್ ಟಿಕೆ ಪ್ಲಸ್, ಹೆಚ್ ಟಿಎಕ್ಸ್, ಹೆಚ್ ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್ ಲೈನ್ ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.90 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಆವೃತ್ತಿಯು ರೂ.20 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆಗಳೊಂದಿಗೆ ಬಲಿಷ್ಠವಾದ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದು, ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

Kia Seltos facelift (3)

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್ ಜಿ ವರ್ಷನ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಸೆಲ್ಟೊಸ್ ಕಾರಿನಲ್ಲಿ ಕಿಯಾ ಕಂಪನಿಯು 1.5 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಪೆಟ್ರೋಲ್ ಟರ್ಬೊ ಆವೃತ್ತಿಯು ಡ್ಯುಯಲ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 158 ಹಾರ್ಸ್ ಪವರ್ ಮತ್ತು 253 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಸಾಮಾನ್ಯ ಎನ್ಎ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ನೊಂದಿಗೆ 113 ಹಾರ್ಸ್ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಾಗೆಯೇ 1.5 ಲೀಟರ್ ಟರ್ಬೊ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 114 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

Kia Seltos facelift (2)

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಸೆಲ್ಟೊಸ್ ಆವೃತ್ತಿಯಲ್ಲಿ ಕಿಯಾ ಕಂಪನಿಯು ಬದಲಾವಣೆಗೊಳಿಸಲಾದ ಸ್ಪೋರ್ಟಿ ಮುಂಭಾಗದ ವಿನ್ಯಾಸದೊಂದಿಗೆ ಬಂಪರ್, ಗ್ರಿಲ್ ಮತ್ತು ಆಲ್ ಎಲ್ಇಡಿ ಲೈಟಿಂಗ್ಸ್, ಅಲಾಯ್ ವ್ಹೀಲ್, ಲೈಟ್ ಬಾರ್ ನೀಡಲಾಗಿದ್ದು, ಕಾರಿನ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆಯಾಗಿದೆ. ಒಳಭಾಗದಲ್ಲಿ ಡ್ಯುಯಲ್ ಕನೆಕ್ಟ್ ಡಿಸ್ ಪ್ಲೇ, ಹೊಸ ಡ್ಯಾಶ್ ಬೋರ್ಡ್, ಇನ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸರ್ಪೊಟ್ ಹೊಂದಿರುವ ಇನ್ಪೋಟೈನ್ ಮೆಂಟ್ ಸಿಸ್ಟಂ, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಏರ್ ಕಂಡಿಷನರ್, ಪನೊರಮಿಕ್ ಸನ್ ರೂಫ್‌, ವೈರ್ ಲೆಸ್ ಚಾರ್ಜರ್ ಸೌಲಭ್ಯಗಳಿವೆ.

ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ನಡುವೆ ಭರ್ಜರಿ ಪೈಪೋಟಿ ಶುರು!

ಸುರಕ್ಷಾ ಸೌಲಭ್ಯಗಳು

ಹೊಸ ಸೆಲ್ಟೊಸ್ ಕಾರಿನಲ್ಲಿ ಕಿಯಾ ಕಂಪನಿಯು ಈ ಬಾರಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಅದರಲ್ಲೂ ಹೊಸ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ(ADAS) ಜೋಡಣೆಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಎಡಿಎಎಸ್ ಸೌಲಭ್ಯವು ಹೊಸ ಕಾರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೊಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಡ್ ಸ್ಪಾಟ್ ಕೂಲಿಷನ್ ವಾರ್ನಿಂಗ್, ಫಾರ್ವಡ್ ಕೂಲಿಷನ್ ಅವಾಯ್ಡ್ ಅಸಿಸ್ಟ್ ಸೌಲಭ್ಯಗಳಿವೆ.

Kia Seltos facelift (4)

ಈ ಮೂಲಕ ಹೊಸ ಕಾರು ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್ ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಎಡಿಎಎಸ್ ಫೀಚರ್ಸ್ ನಿಂದಾಗಿ ಹೊಸ ಕಾರಿನ ಟಾಪ್ ಎಂಡ್ ಮಾದರಿಯು ತುಸು ದುಬಾರಿ ಎನ್ನಿಸಲಿದೆ.

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ