Maruti Suzuki Fronx CNG: ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್ ಜಿ ವರ್ಷನ್ ಬಿಡುಗಡೆ

ಸಿಎನ್ ಜಿ ಕಾರು ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಯಲ್ಲಿ ಹೊಸದಾಗಿ ಸಿಎನ್ ಜಿ ಆವೃತ್ತಿ ಬಿಡುಗಡೆ ಮಾಡಿದೆ.

Follow us
Praveen Sannamani
|

Updated on: Jul 14, 2023 | 6:32 PM

ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ(Maruti Suzuki) ಕಂಪನಿ ಫ್ರಾಂಕ್ಸ್ ಸಿಎನ್ ಜಿ(Fronx CNG) ಆವೃತ್ತಿ ಬಿಡುಗಡೆ ಮಾಡಿದ್ದು, ಹೊಸ ಸಿಎನ್ ಜಿ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 8.42 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೊಸ ಫ್ರಾಂಕ್ಸ್ ಸಿಎನ್ ಜಿ ಮಾದರಿಯು ಸಿಗ್ಮಾ ಮತ್ತು ಡೆಲ್ಟಾ ಎನ್ನುವ ಎರಡು ವೆರಿಯೆಂಟ್ ಗಳನ್ನು ಪಡೆದುಕೊಂಡಿದ್ದು, ಇದರಲ್ಲಿ ಸಿಗ್ಮಾ ವೆರಿಯೆಂಟ್ ರೂ. 8.42 ಲಕ್ಷ ಬೆಲೆ ಹೊಂದಿದ್ದರೆ ಡೆಲ್ಟಾ ವೆರಿಯೆಂಟ್ ರೂ. 9.28 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದ ಸಂಪೂರ್ಣವಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್ ಜಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಂಪನಿಯು ಇದುವರೆಗೆ ಸುಮಾರು 13 ಕಾರು ಮಾದರಿಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಹೊಸ ಫ್ರಾಂಕ್ಸ್ ಕಾರು ಮಾದರಿಯಲ್ಲಿ ಸಿಎನ್ ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಎಸ್-ಸಿಎನ್ ಜಿ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಭರ್ಜರಿ ಮೈಲೇಜ್ ಹಿಂದಿರುಗಿಸಲಿದೆ.

ಇದನ್ನೂ ಓದಿ: ಬಜೆಟ್ ಬೆಲೆಯ ಹ್ಯುಂಡೈ ಎಕ್ಸ್‌ಟರ್ ಮೈಕ್ರೊ ಎಸ್ ಯುವಿ ಬಿಡುಗಡೆ

ಹೊಸ ಫ್ರಾಂಕ್ಸ್ ಸಿಎನ್ ಜಿ ಕಾರು ಮಾದರಿಯು ಸಾಮಾನ್ಯ ಸಿಗ್ಮಾ ಮತ್ತು ಡೆಲ್ಟಾ ಪೆಟ್ರೋಲ್ ಆವೃತ್ತಿಯಂತೆ ಹಲವಾರು ಫೀಚರ್ಸ್ ಹೊಂದಿದ್ದು, ಸಿಎನ್ ಜಿ ಕಿಟ್ ಜೋಡಣೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ರೂ. 95 ಸಾವಿರದಷ್ಟು ದುಬಾರಿಯಾಗಿರಲಿದೆ.

ಎಂಜಿನ್ ಮತ್ತು ಮೈಲೇಜ್ ಹೊಸ ಫ್ರಾಂಕ್ಸ್ ಸಿಎನ್ ಜಿ ಆವೃತ್ತಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 77.5 ಹಾರ್ಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಇದು ಪ್ರತಿ ಲೀಟರ್ ಸಿಎನ್ ಜಿಗೆ ಗರಿಷ್ಠ 28.51 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಈ ವಿಭಾಗದ ಕಾರುಗಳಲ್ಲೇ ಅತಿ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಜೊತೆಗೆ ಹೊಸ ಫ್ರಾಂಕ್ಸ್ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಪೆಟ್ರೋಲ್ ಮಾದರಿಯಲ್ಲಿರುವಂತೆ ಆಕರ್ಷಕ ಹೊರಭಾಗದ ವಿನ್ಯಾಸದ ಜೊತೆಗೆ ಐಷಾರಾಮಿ ಅನುಭವ ನೀಡುವ ಡ್ಯುಯಲ್ ಕಲರ್ ಕ್ಯಾಬಿನ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದರಲ್ಲಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಮಾರ್ಟ್ ಪ್ಲೇ ಪ್ರೋ ಸಿಸ್ಟಂ, ಸ್ಟಿರಿಂಗ್ ಮೌಂಟೆಡ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್ ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗ್ರಾಹಕರನ್ನು ಆಕರ್ಷಿಸಲಿದ್ದು, ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳಿವೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಇನ್ವಿಕ್ಟೊ ಎಂಪಿವಿ ಬಿಡುಗಡೆ

ಇನ್ನು ಸಿಎನ್ ಜಿ ಕಿಟ್ ಜೋಡಣೆಯಿಂದಾಗಿ ಹೊಸ ಕಾರಿನ ಬೂಟ್ ಸ್ಪೆಸ್ ಸಾಮಾರ್ಥ್ಯವು ತುಸು ಕಡಿಮೆ ಎನ್ನಿಸಲಿದ್ದು, ಇದರ ಹೊರತಾಗಿ ಹೊಸ ಕಾರು ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಗ್ರಾಹಕರ ಆಯ್ಕೆಗೆ ಹಲವಾರ ಪೂರಕವಾದ ಅಂಶಗಳನ್ನು ಹೊಂದಿದೆ. ಈ ಮೂಲಕ ಹೊಸ ಕಾರು ಪೆಟ್ರೋಲ್ ಚಾಲಿತ ಪ್ರಮುಖ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಅತಿ ಕಡಿಮೆ ನಿರ್ವಹಣಾ ವೆಚ್ಟವು ಮಾಲೀಕತ್ವ ಹೊರೆ ತಗ್ಗಿಸಲಿದೆ.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ