New Renault Duster: ಬಿಡುಗಡೆಗೆ ಸಿದ್ದವಾಗಿರುವ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ವಿಶೇಷತೆಗಳೇನು?

ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ರೆನಾಲ್ಟ್ ತನ್ನ ಹೊಸ ತಲೆಮಾರಿನ ಡಸ್ಟರ್ ಎಸ್ ಯುವಿಯನ್ನು ಭಾರತದಲ್ಲಿ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ನವೀಕೃತ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ.

New Renault Duster: ಬಿಡುಗಡೆಗೆ ಸಿದ್ದವಾಗಿರುವ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ವಿಶೇಷತೆಗಳೇನು?
ರೆನಾಲ್ಟ್ ಡಸ್ಟರ್
Follow us
Praveen Sannamani
|

Updated on: Nov 13, 2023 | 8:42 PM

ಮಧ್ಯಮ ಗಾತ್ರದ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿರುವ ರೆನಾಲ್ಟ್ ಇಂಡಿಯಾ (Renault India) ಕಂಪನಿಯು ಶೀಘ್ರದಲ್ಲಿಯೇ ತನ್ನ ಹೊಸ ತಲೆಮಾರಿನ ಡಸ್ಟರ್ ಎಸ್ ಯುವಿ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಇದೇ ತಿಂಗಳು 29ರಂದು ಹೊಸ ಕಾರನ್ನು ಅಧಿಕೃತವಾಗಿ ಪ್ರದರ್ಶನಗೊಳಿಸಲಿದೆ.

ಭಾರತದಲ್ಲಿ ಸದ್ಯ ಹೊಸ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿ ನಿರ್ಮಾಣದ ಕೈಗರ್, ಟ್ರೈಬರ್ ಮತ್ತು ಕ್ವಿಡ್ ಕಾರುಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಕಂಪನಿಯು ಕಳೆದ ವರ್ಷ ಕಾರಣಾಂತರಗಳಿಂದ ಡಸ್ಟರ್ ಎಸ್ ಯುವಿ ಮಾರಾಟವನ್ನು ಸ್ಥಗಿತಗೊಳಿಸಿತ್ತು. ಇದೀಗ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಭಾರೀ ಬದಲಾವಣೆ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಹೊಸ ರೆನಾಲ್ಟ್ ಡಸ್ಟರ್ ಎಸ್‍ಯುವಿಯನ್ನು ಸ್ಥಳೀಕರಣಗೊಳಿಸಲಾಗಿರುವ ಸಿಎಂಎಫ್-ಬಿ(CMF-B) ಮಾಡ್ಯುಲರ್ ಪ್ಲಾಟ್‌ಫಾರ್ಮ್‌ ಅಡಿಯಲ್ಲಿ ಅಭಿವೃದ್ದಿಪಡಿಸಲಾಗಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಸಿಯಾ ಬಿಗ್ ಸ್ಟರ್ ಮಾದರಿಯಿಂದಲೂ ಹಲವಾರು ವಿನ್ಯಾಸ ಪ್ರೇರಣೆ ಹೊಂದಿರಲಿದೆ. ಜೊತೆಗೆ ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಕಾರು ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!

ಭಾರತದಲ್ಲಿ ಸದ್ಯ ಕಂಪ್ಯಾಕ್ಟ್ ಎಸ್ ಯುವಿಗಳಿಗೆ ಭಾರೀ ಬೇಡಿಕೆಯಿರುವ ಹಿನ್ನಲೆಯಲ್ಲಿ ಗ್ರಾಹಕರ ಆದ್ಯತೆಯೆಂತೆ ಹೊಸ ಡಸ್ಟರ್ ಕಾರಿನಲ್ಲಿ ವಿವಿಧ ಎಂಜಿನ್ ಆಯ್ಕೆ ನೀಡಬಹುದಾಗಿದ್ದು, ಹೊಸ ಕಾರು ಪೆಟ್ರೋಲ್ ಜೊತೆಗೆ ಹೈಬ್ರಿಡ್ ಆವೃತ್ತಿಯನ್ನು ಸಹ ಪಡೆದುಕೊಳ್ಳುತ್ತಿದೆ. ಮಾಹಿತಿಗಳ ಪ್ರಕಾರ ಹೊಸ ಡಸ್ಟರ್ ಕಾರಿನಲ್ಲಿ 120 ಹಾರ್ಸ್ ಪವರ್ ಪ್ರೇರಿತ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 140 ಹಾರ್ಸ್ ಪವರ್ ಪ್ರೇರಿತ 1.2 ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 170 ಹಾರ್ಸ್ ಪವರ್ ಪ್ರೇರಿತ 1.3 ಲೀಟರ್ ಫ್ಲಕ್ಸ್ ಫ್ಯೂಲ್ ನಿಯಮ ಪಾಲನೆ ಮಾಡಿರುವ 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಬಹುದಾಗಿದೆ.

ರೆನಾಲ್ಟ್ ಕಂಪನಿಯು ಹೊಸ ಡಸ್ಟರ್ ಕಾರಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಮೂರು ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಭಾರತದಲ್ಲಿ ಕೇವಲ 1.0 ಟರ್ಬೊ ಪೆಟ್ರೋಲ್ ಮತ್ತು 1.2 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ನೀಡಬಹುದಾಗಿದೆ. ಹೊಸ ಕಾರಿನಲ್ಲಿರುವ ಹೈಬ್ರಿಡ್ ಮಾದರಿಯು ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಹೆಚ್ಚಿನ ಮೈಲೇಜ್ ಹೊಂದಿರುವ ಡೀಸೆಲ್ ಎಂಜಿನ್ ಕಾರುಗಳಿಗೆ ಪರ್ಯಾಯ ಆಯ್ಕೆಯಾಗಲಿದ್ದು, ಹೊಸ ವೆರಿಯೆಂಟ್ ಬಿಡುಗಡೆಯ ಕುರಿತಂತೆ ರೆನಾಲ್ಟ್ ಕಂಪನಿ ಈಗಾಗಲೇ ಹಲವಾರು ಮಾದರಿಯ ಮಾರುಕಟ್ಟೆ ಅಧ್ಯಯನಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ರೂ. 10 ಲಕ್ಷಕ್ಕೆ ಭರ್ಜರಿ ಮೈಲೇಜ್ ನೀಡುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಈ ಮೂಲಕ ಹೊಸ ಡಸ್ಟರ್ ಕಾರು ಮಾದರಿಯು 2024ರ ಕೊನೆಯಲ್ಲಿ ಇಲ್ಲವೇ 2025ರ ಆರಂಭದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್ ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.