Nissan Magnite: ನಿಸ್ಸಾನ್ ಮ್ಯಾಗ್ನೈಟ್ ಹೊಸ ಬಜೆಟ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

|

Updated on: Oct 10, 2023 | 5:15 PM

ನಿಸ್ಸಾನ್ ಇಂಡಿಯಾ ಕಂಪನಿಯು ಮ್ಯಾಗ್ನೈಟ್ ಮೈಕ್ರೊ ಎಸ್ ಯುವಿ ಮಾದರಿಯ ಬೆಸ್ ವೆರಿಯೆಂಟ್ ನಲ್ಲಿ ಹೊಸ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Nissan Magnite: ನಿಸ್ಸಾನ್ ಮ್ಯಾಗ್ನೈಟ್ ಹೊಸ ಬಜೆಟ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ
ನಿಸ್ಸಾನ್ ಮ್ಯಾಗ್ನೈಟ್
Follow us on

ಆಕರ್ಷಕ ಬಜೆಟ್ ಕಾರು ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ನಿಸ್ಸಾನ್ ಇಂಡಿಯಾ(Nissan India) ಕಂಪನಿಯು ಮ್ಯಾಗ್ನೈಟ್(Magnite) ಮೈಕ್ರೊ ಎಸ್ ಯುವಿಯ ಬೆಸ್ ವೆರಿಯೆಂಟ್ ನಲ್ಲಿ ಹೊಸದಾಗಿ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 6.50 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಬಜೆಟ್ ಬೆಲೆಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಖರೀದಿದಾರರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಮ್ಯಾಗ್ನೈಟ್ ಮೈಕ್ರೊ ಎಸ್ ಯುವಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್ಎಲ್, ಎಕ್ಸ್ ವಿ ಮತ್ತು ಎಕ್ಸ್ ವಿ ಪ್ರೀಮಿಯಂ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಈ ಹಿಂದೆ ಎಕ್ಸ್ಎಲ್ ನಂತರದ ವೆರಿಯೆಂಟ್ ಗಳಲ್ಲಿ ಮಾತ್ರ ಆಟೋಮ್ಯಾಟಿಕ್ ಆವೃತ್ತಿಗಳನ್ನು ಖರೀದಿಸಬಹುದಾಗಿತ್ತು. ಇದೀಗ ನಿಸ್ಸಾನ್ ಕಂಪನಿಯು ಎಕ್ಸ್ಇ ವೆರಿಯೆಂಟ್ ನಲ್ಲೂ ಲಭ್ಯವಾಗುವಂತೆ ಇಜೆಡ್-ಶಿಫ್ಟ್ ತಂತ್ರಜ್ಞಾನ ಪ್ರೇರಿತ ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆ ಪರಿಚಯಿಸಿದೆ.

ಇದನ್ನೂ ಓದಿ: ಮಹೀಂದ್ರಾ ಹೊಸ ಕಾರುಗಳ ಖರೀದಿ ಮೇಲೆ ರೂ. 1.25 ಲಕ್ಷ ಆಫರ್ ಘೋಷಣೆ

ಹೊಸ ಆಟೋಮ್ಯಾಟಿಕ್ ಆವೃತ್ತಿಯು ಇತ್ತೀಚೆಗೆ ಬಿಡುಗಡೆಯಾದ ಮ್ಯಾಗ್ನೈಟ್ ಕುರೋ ಆವೃತ್ತಿಯಲ್ಲೂ ಸಹ ಖರೀದಿಗೆ ಲಭ್ಯವಿದ್ದು, ಹೊಸ 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯು 1.0 ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ 72 ಹಾರ್ಸ್ ಪವರ್ ಮತ್ತು 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಮ್ಯಾಗ್ನೈಟ್ ಹೊಸ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್ ಗೆ ಗರಿಷ್ಠ 19.70 ಕಿ.ಮೀ ಮೈಲೇಜ್ ನೀಡಲಿದ್ದರೆ ಮ್ಯಾನುವಲ್ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್ ಗೆ 19.35 ಕಿ.ಮೀ ಮೈಲೇಜ್ ನೀಡುತ್ತದೆ.

ನಿಸ್ಸಾನ್ ಕಂಪನಿಯು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ವೆಹಿಕಲ್ ಡೈನಾಮಿಕ್ ಕಂಟ್ರೋಲ್(ವಿಡಿಸಿ) ಯುನಿಟ್ ಅನ್ನು ಜೋಡಿಸಲಾಗಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್ ನೊಂದಿಗೆ ಇಂಧನ ದಕ್ಷತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಹೀಗಾಗಿ ಪ್ರತಿಸ್ಪರ್ಧಿ ಮಾದರಿಗಳಾದ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್ಟರ್ ಕಾರುಗಳ ಆರಂಭಿಕ ಆಟೋಮ್ಯಾಟಿಕ್ ಆವೃತ್ತಿಗಳಿಂತಲೂ ಅತ್ಯುತ್ತಮ ತಂತ್ರಜ್ಞಾನ ಮತ್ತು ಕಡಿಮೆ ಬೆಲೆಯ ಕಾರು ಮಾದರಿ ಇದಾಗಿದೆ.

ಇದನ್ನೂ ಓದಿ: ಅಚ್ಚರಿಯ ಬೆಲೆಗೆ ಬಿಡುಗಡೆಗೊಂಡಿದೆ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ

ಇನ್ನುಳಿದಂತೆ ಮ್ಯಾಗ್ನೈಟ್ ಕಾರಿನ ಎಕ್ಸ್ಇ, ಎಕ್ಸ್ಎಲ್, ಎಕ್ಸ್ ವಿ ಮತ್ತು ಎಕ್ಸ್ ವಿ ಪ್ರೀಮಿಯಂ ವೆರಿಯೆಂಟ್ ಗಳು ಈ ಹಿಂದಿನಂತೆ 1.0 ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಖರೀದಿಗೆ ಲಭ್ಯವಿರಲಿದ್ದು, ಇವು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.99 ಲಕ್ಷದಿಂದ ರೂ. 11.02 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ ಇತ್ತೀಚೆಗೆ ಎಕ್ಸ್ ವಿ ವೆರಿಯೆಂಟ್ ಆಧರಿಸಿ ಬಿಡುಗಡೆಯಾಗಿರುವ ಮ್ಯಾಗ್ನೈಟ್ ಕುರೋ ಆವೃತ್ತಿಯು ರೂ. 8.27 ಲಕ್ಷದಿಂದ ರೂ.10.46 ಲಕ್ಷ ಬೆಲೆ ಹೊಂದಿದೆ.