Mahindra: ಮಹೀಂದ್ರಾ ಹೊಸ ಕಾರುಗಳ ಖರೀದಿ ಮೇಲೆ ರೂ. 1.25 ಲಕ್ಷ ಆಫರ್ ಘೋಷಣೆ

ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ಅಕ್ಟೋಬರ್ ಅವಧಿಯ ಆಫರ್ ಗಳನ್ನು ಘೋಷಣೆ ಮಾಡಿದೆ.

Mahindra: ಮಹೀಂದ್ರಾ ಹೊಸ ಕಾರುಗಳ ಖರೀದಿ ಮೇಲೆ ರೂ. 1.25 ಲಕ್ಷ ಆಫರ್ ಘೋಷಣೆ
Follow us
Praveen Sannamani
|

Updated on:Oct 08, 2023 | 7:23 PM

ಎಸ್ ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ(Mahindra) ಕಂಪನಿಯು ಅಕ್ಟೋಬರ್ ಅವಧಿಗಾಗಿ ಭರ್ಜರಿ ಆಫರ್ ನೀಡುತ್ತಿದ್ದು, ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ರೂ. 1.25 ಲಕ್ಷ ತನಕ ಆಫರ್ ಘೋಷಣೆ ಮಾಡಿದೆ. ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಹೊಸ ಆಫರ್ ಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಖರೀದಿ ಮೇಲೆ ಹೆಚ್ಚಿನ ಆಫರ್ ನೀಡುತ್ತಿದೆ. ಹಾಗಾದ್ರೆ ಯಾವ ಕಾರಿನ ಎಷ್ಟು ಆಫರ್ ನೀಡಲಾಗುತ್ತಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.

ಎಕ್ಸ್ ಯುವಿ400 ಎಲೆಕ್ಟ್ರಿಕ್

ಮಹೀಂದ್ರಾ ಎಕ್ಸ್ ಯುವಿ400 ಎಲೆಕ್ಟ್ರಿಕ್ ಎಸ್ ಯುವಿ ಕಾರಿನ ಮೇಲೆ ಹೆಚ್ಚಿನ ಮಟ್ಟದ ಆಫರ್ ನೀಡುತ್ತಿದ್ದು, ಇವಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಭರ್ಜರಿ ಆಫರ್ ಸಿಗಲಿದೆ. ಎಕ್ಸ್ ಯುವಿ400 ಕಾರು ಖರೀದಿಸುವ ಗ್ರಾಹಕರಿಗೆ ರೂ. 50 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಒಟ್ಟು ರೂ. 1.25 ಲಕ್ಷ ಮೌಲ್ಯದ ವಿವಿಧ ಆಫರ್ ಲಭ್ಯವಿದ್ದು, ಆಫರ್ ಹಿನ್ನಲೆಯಲ್ಲಿ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಜೋಡಣೆ ಲಭ್ಯವಿರುವುದಿಲ್ಲ. ಆಫರ್ ಮೇಲೆ ಹೊಸ ಕಾರು ಖರೀದಿಸುವ ಗ್ರಾಹಕರು ಆಕ್ಸೆಸರಿಸ್ ಪ್ಯಾಕೇಜ್ ಖರೀದಿಗಾಗಿ ಪ್ರತ್ಯೇಕವಾಗಿ ದರ ಪಾವತಿಸಬೇಕಿದ್ದು, ಎಕ್ಸ್ ಯುವಿ400 ಕಾರು ಸದ್ಯ ಇಸಿ ಮತ್ತು ಇಎಲ್ ಎನ್ನುವ ಎರಡು ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 15.99 ಲಕ್ಷದಿಂದ ರೂ. 19.19 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಹೊಸ ಅಲೆ ಸೃಷ್ಟಿಸಿದ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್..

ಎಕ್ಸ್ ಯುವಿ300

ಮಹೀಂದ್ರಾ ಕಂಪನಿ ಎಕ್ಸ್ ಯುವಿ300 ಕಂಪ್ಯಾಕ್ಟ್ ಎಸ್ ಯುವಿ ಖರೀದಿ ಮೇಲೆ ರೂ. 90 ಸಾವಿರದಷ್ಟು ಆಫರ್ ನೀಡುತ್ತಿದೆ. ಎಕ್ಸ್ ಯುವಿ300 ಕಾರಿನ ಪೆಟ್ರೋಲ್ ಆವೃತ್ತಿಯ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 4 ಸಾವಿರ ರಿಂದ ರೂ. 90 ಸಾವಿರದಷ್ಟು ಆಫರ್ ಲಭ್ಯವಿದ್ದರೆ ಡೀಸೆಲ್ ಕಾರಿನ ವಿವಿಧ ವೆರಿಯೆಂಟ್ ಗಳ ಮೇಲೆ ರೂ. 45 ಸಾವಿರದಿಂದ ರೂ. 90 ಸಾವಿರದಷ್ಟು ಆಫರ್ ಅನ್ವಯಿಸಲಿದೆ.

ಮರಾಜೋ ಎಂಪಿವಿ

ಮರಾಜೋ ಎಂಪಿವಿ ಆವೃತ್ತಿಯ ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಮರಾಜೋ ಕಾರು ಖರೀದಿಸುವ ಗ್ರಾಹಕರು ರೂ. 73,300 ಮೌಲ್ಯದ ಆಫರ್ ದೊರೆಯಲಿದೆ. ರೂ. 73 ಸಾವಿರದಲ್ಲಿ ರೂ.58 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 15 ಸಾವಿರದಷ್ಟು ಆಕ್ಸೆಸರಿಸ್ ನೀಡಲಾಗಿದ್ದು, ಇದು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಇದನ್ನೂ ಓದಿ: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ

ಬೊಲೆರೊ

ಬೊಲೆರೊ ಎಸ್ ಯುವಿ ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ವಿವಿಧ ವೆರಿಯೆಂಟ್ ಗಳ ಮೇಲೆ ರೂ. 35 ಸಾವಿರದಿಂದ ರೂ. 70 ಸಾವಿರದಷ್ಟು ಆಫರ್ ನೀಡುತ್ತಿದ್ದು, ರೂ. 70 ಸಾವಿರ ಮೌಲ್ಯದ ಆಫರ್ ನಲ್ಲಿ ಕ್ಯಾಶ್ ಡಿಸ್ಕೌಂಟ್ ಮತ್ತು ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಬೊಲೆರೊ ನಿಯೋ

ಸಬ್ ಕಂಪ್ಯಾಕ್ಟ್ ಎಸ್ ಯುವಿ ಬೊಲೆರೊ ನಿಯೋ ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿ ರೂ. 50 ಸಾವಿರ ಆಫರ್ ನೀಡುತ್ತಿದೆ. ರೂ. 50 ಸಾವಿರ ಮೌಲ್ಯದ ಆಫರ್ ನಲ್ಲಿ ರೂ. 30 ಸಾವಿರ ಕ್ಯಾಶ್ ಡಿಸ್ಕೌಂಟ್ ಒಳಗೊಂಡು ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಸಿಗಲಿದೆ.

Published On - 7:21 pm, Sun, 8 October 23