ಭಾರತದಲ್ಲಿ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಪವರ್‌ಫುಲ್ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು
ನಿಸ್ಸಾನ್ ಇಂಡಿಯಾ ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಕ್ಸ್-ಟ್ರಯಲ್ ಎಸ್ ಯುವಿ ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಪವರ್‌ಫುಲ್ ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವಾರು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ.
ಭಾರತದಲ್ಲಿ ಹೊಸ ಕಾರುಗಳ ಮೂಲಕ ಗಮನಸೆಳೆಯುತ್ತಿರುವ ನಿಸ್ಸಾನ್ (Nissan) ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಕ್ಸ್-ಟ್ರಯಲ್ (X-Trail) ಎಸ್ ಯುವಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಈ ವರ್ಷದ ಅಗಸ್ಟ್ ವೇಳೆಗೆ ಅಧಿಕೃತವಾಗಿ ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ. ಹೊಸ ಎಕ್ಸ್-ಟ್ರಯಲ್ ಕಾರನ್ನು ಮೊದಲ ಬಾರಿಗೆ 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದ ನಿಸ್ಸಾನ್ ಕಂಪನಿ ಇದೀಗ ಬಿಡುಗಡೆ ಮಾಡುತ್ತಿದ್ದು, ಇದು ಆರಂಭಿಕ ಐಷಾರಾಮಿ ಎಸ್ ಯುವಿ ಆವೃತ್ತಿಯಾಗಿ ಮಾರಾಟವಾಗಲಿದೆ.
ಹೊಸ ಎಕ್ಸ್-ಟ್ರಯಲ್ ಕಾರು ಈಗಾಗಲೇ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಸಾಕಷ್ಟು ಬೇಡಿಕೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ. ಹೊಸ ಕಾರಿನಲ್ಲಿ ಫೀಚರ್ಸ್ ಮತ್ತು ಎಂಜಿನ್ ಪರ್ಫಾಮೆನ್ಸ್ ಆಯ್ಕೆ ಕುರಿತಾದ ಮಾಹಿತಿಗಳು ಬಹಿರಂಗವಾಗಿದ್ದು, ಇದು ಸಂಪೂರ್ಣವಾಗಿ ಆಮದು (ಸಿಬಿಯು) ಮಾದರಿಯಾಗಿ ಮಾರಾಟಗೊಳ್ಳಲಿದೆ.
ಸಿಬಿಯು ಆಮದು ನೀತಿ ಅಡಿಯಲ್ಲಿ ಸದ್ಯ ಭಾರತದಲ್ಲಿರುವ ವಿದೇಶಿ ಕಾರು ಉತ್ಪಾದನಾ ಕಂಪನಿಗಳು ಯಾವುದೇ ಹೆಚ್ಚುವರಿ ತೆರಿಗೆಗಳಲ್ಲಿದೆ ವಾರ್ಷಿಕವಾಗಿ 2500 ಕಾರುಗಳನ್ನು ಆಮದು ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ನಿಸ್ಸಾನ್ ಕೂಡಾ ವಿದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಎಕ್ಸ್-ಟ್ರಯಲ್ ಮಾದರಿಯನ್ನು ಭಾರತಕ್ಕೆ ಪರಿಚಯಿಸಲು ಮುಂದಾಗಿದೆ.
ಇದನ್ನೂ ಓದಿ: ಆಕರ್ಷಕ ಆಕ್ಸೆಸರಿಸ್ ನಲ್ಲಿ ಮಿಂಚಿದ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಎಪಿಕ್ ಎಡಿಷನ್
ಸದ್ಯಕ್ಕೆ ಆಮದು ನೀತಿಯಡಿ ಅವಕಾಶವಿರುವ ಯುನಿಟ್ ಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧಿಸಿರುವ ನಿಸ್ಸಾನ್ ಕಂಪನಿಯು ಹೊಸ ಕಾರನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ ಬಿಡುಗಡೆ ಮಾಡುತ್ತಿದೆ. ಈ ಮೊದಲು ಹೊಸ ಕಾರನ್ನು ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ನಿಸ್ಸಾನ್ ಇದೀಗ ಹೊಸ ಕಾರನ್ನು ಸದ್ಯಕ್ಕೆ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೊಸ ಕಾರಿನ ಪೆಟ್ರೋಲ್ ಮಾದರಿಗಳ ಬೇಡಿಕೆ ಆಧರಿಸಿ ಹೈಬ್ರಿಡ್ ಆವೃತ್ತಿ ಕೂಡಾ ಬಿಡುಗಡೆಯಾಗಲಿದೆ.
ಹೊಸ ಕಾರಿನಲ್ಲಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಮ್ಯಾನವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳ ಆಯ್ಕೆಯೊಂದಿಗೆ ಗರಿಷ್ಠ 204 ಹಾರ್ಸ್ ಪವರ್ ಮತ್ತು 305 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ. ಇದರೊಂದಿಗೆ ಹೊಸ ಕಾರು ಆಲ್ ವ್ಹೀಲ್ ಡ್ರೈವ್ ಮತ್ತು ಫ್ರಂಟ್ ವ್ಹೀಲ್ ಡ್ರೈವ್ ಆಯ್ಕೆಯೊಂದಿಗೆ ಐಶಾರಾಮಿ ಕಾರು ಚಾಲನಾ ಅನುಭವ ನೀಡಲಿದ್ದು, ಇದು 7 ಸೀಟರ್ ಸೌಲಭ್ಯದೊಂದಿಗೆ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಜೊತೆಗೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು ತನ್ನ ಬಲಿಷ್ಠ ವಿನ್ಯಾಸದೊಂದಿಗೆ ಗಮನಸೆಳೆಯುತ್ತಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 40 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದೆ. ಈ ಮೂಲಕ ಇದು 7 ಸೀಟರ್ ಸೌಲಭ್ಯದ ಹ್ಯುಂಡೈ ಟುಸಾನ್, ಜೀಪ್ ಮೆರೆಡಿಯನ್, ಸಿಟ್ರನ್ ಸಿ5 ಏರ್ ಕ್ರಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಇದರೊಂದಿಗೆ ಹೊಸ ಕಾರು ದುಬಾರಿ ಬೆಲೆ ಹೊಂದಿರುವ ಟೊಯೊಟಾ ಫಾರ್ಚೂನ್ ಕಾರು ಖರೀದಿಗೂ ಪರ್ಯಾಯ ಆವೃತ್ತಿಯಾಗಲಿದೆ.
Published On - 7:07 pm, Sun, 26 May 24