Ola Electric: ಓಲಾ ಎಸ್1 ಸರಣಿ ಇವಿ ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ

|

Updated on: Mar 04, 2024 | 9:56 PM

ಓಲಾ ಎಲೆಕ್ಟ್ರಿಕ್ ಕಂಪನಿಯು ಇವಿ ಸ್ಕೂಟರ್ ಗಳ ಮೇಲಿನ ಆಫರ್ ಗಳ ಅವಧಿಯನ್ನು ವಿಸ್ತರಿಸಿದ್ದು, ಮಾರ್ಚ್ ಅಂತ್ಯದ ತನಕ ಹೊಸ ಆಫರ್ ಗಳು ಅನ್ವಯಿಸಲಿವೆ.

Ola Electric: ಓಲಾ ಎಸ್1 ಸರಣಿ ಇವಿ ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳು
Follow us on

ಪ್ರೀಮಿಯಂ ಸ್ಕೂಟರ್ ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಯು ತನ್ನ ಹೊಸ ಎಸ್1 ಇವಿ ಸ್ಕೂಟರ್ ಮೇಲಿನ ಆಫರ್ ಗಳ ಅವಧಿಯನ್ನು ವಿಸ್ತರಿಸಿದ್ದು, ಎಸ್1 ಇವಿ ಸರಣಿ ಸ್ಕೂಟರ್ ಗಳ ಮೇಲೆ ಹಲವಾರು ಡಿಸ್ಕೌಂಟ್ ಘೋಷಣೆ ಮಾಡಿದೆ. ಹೊಸ ಆಫರ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಗರಿಷ್ಠ ರೂ. 25 ಸಾವಿರ ತನಕ ಆಫರ್ ನೀಡುತ್ತಿದ್ದು, ಇವಿ ಸ್ಕೂಟರ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಹೊಸ ಆಫರ್ ಗಳಲ್ಲಿ ಓಲಾ ಕಂಪನಿಯು ಎಸ್1 ಪ್ರೊ ಜೆನ್ 2 ಆವೃತ್ತಿಯ ಮೇಲೆ ರೂ. 17 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ ನಂತರ ಎಸ್1 ಜೆನ್ 2 ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1,29,999 ಬೆಲೆ ನಿಗದಿಪಡಿಸಲಾಗಿದೆ. ಹಾಗೆಯೇ ಎಸ್1 ಏರ್ ಆವೃತ್ತಿಯ ಮೇಲೆ ಓಲಾ ಕಂಪನಿಯು ರೂ. 15 ಸಾವಿರದಷ್ಟು ಆಫರ್ ನೀಡುತ್ತಿದ್ದು, ಆಫರ್ ನಂತರ ಎಸ್1 ಏರ್ ರೂ.1,04,999 ಬೆಲೆ ಹೊಂದಿದೆ.

ಇನ್ನು ಎಸ್1 ಏರ್ ಎಕ್ಸ್ ಪ್ಲಸ್ ಆವೃತ್ತಿಯ ಮೇಲೆ ಓಲಾ ಎಲೆಕ್ಟ್ರಿಕ್ ಕಂಪನಿಯು ಗರಿಷ್ಠ ರೂ. 25 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ ನಂತರ ಎಸ್1 ಏರ್ ಎಕ್ಸ್ ಪ್ಲಸ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 84,999 ಬೆಲೆ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಇವಿ ಸ್ಕೂಟರ್ ಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಸಹ ನೀಡಲಾಗಿದ್ದು, ಗ್ರಾಹಕರು 80 ಸಾವಿರ ಕಿ.ಮೀ ಅಥವಾ 8 ವರ್ಷಗಳ ವಾರಂಟಿ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಕೈನೆಟಿಕ್ ಇ-ಲೂನಾ ಮೊಪೆಡ್ ಬಿಡುಗಡೆ

ಇದರೊಂದಿಗೆ ಇವಿ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಕಳೆದ ತಿಂಗಳು ಬರೋಬ್ಬರಿ 35 ಸಾವಿರ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಇವಿ ಸ್ಕೂಟರ್ ಮಾರುಕಟ್ಟೆಯ ಶೇ. 42 ಪಾಲನ್ನು ಓಲಾ ತನ್ನದಾಗಿಸಿಕೊಂಡಿದ್ದು, ಹೊಸ ಆಫರ್ ಗಳೊಂದಿಗೆ ಈ ತಿಂಗಳು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಎಸ್1 ಪ್ರೊ, ಎಸ್1 ಏರ್, ಎಸ್1 ಎಕ್ಸ್ ಪ್ಲಸ್, ಎಸ್1 ಎಕ್ಸ್(2ಕೆವಿಹೆಚ್), ಎಸ್1 ಎಕ್ಸ್(3ಕೆವಿಹೆಚ್) ಮತ್ತು ಎಸ್1 ಎಕ್ಸ್(4ಕೆವಿಹೆಚ್) ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮಾರಾಟ ಹೆಚ್ಚಳದೊಂದಿಗೆ ಸರ್ವಿಸ್ ಸೆಂಟರ್ ಗಳ ಸಂಖ್ಯೆಯನ್ನು ಸಹ ಗಮನಾರ್ಹವಾಗಿ ಹೆಚ್ಚಿಸಿದೆ.

ಇದನ್ನೂ ಓದಿ: ಬಿಡುಗಡೆಯಾಗಲಿರುವ ಹೊಸ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದ ನಂತರ ಗ್ರಾಹಕರ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಓಲಾ ಕಂಪನಿಯು ಸದ್ಯ ದೇಶಾದ್ಯಂತ 414 ಸರ್ವಿಸ್ ಸೆಂಟರ್ ಗಳನ್ನು ತೆರೆದಿದ್ದು, 2024ರ ಏಪ್ರಿಲ್ ಅಂತ್ಯಕ್ಕೆ ಒಟ್ಟು 600 ಸರ್ವಿಸ್ ಸೆಂಟರ್ ಗಳನ್ನು ಹೊಂದಿರುವುದಾಗಿ ಭರವಸೆ ನೀಡಿದೆ. ಹೀಗಾಗಿ ಗ್ರಾಹಕರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಯ್ಕೆಗೆ ಮುಗಿಬಿಗಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಸ್ಕೂಟರ್ ಮತ್ತು ಇವಿ ಬೈಕ್ ಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.