Royal Enfield Meteor 350: ಹೊಸ ಫೀಚರ್ಸ್ ಹೊಂದಿರುವ ರಾಯಲ್ ಎನ್ಫೀಲ್ಡ್ ಮಿಟಿಯೋರ್ 350 ಬಿಡುಗಡೆ

|

Updated on: Oct 12, 2023 | 6:46 PM

ರಾಯಲ್ ಎನ್ಫೀಡ್ ಕಂಪನಿಯು ನವೀಕೃತ ಮಿಟಿಯೋರ್ 350 ಬಿಡುಗಡೆ ಮಾಡಿದ್ದು, ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದೆ.

Royal Enfield Meteor 350: ಹೊಸ ಫೀಚರ್ಸ್ ಹೊಂದಿರುವ ರಾಯಲ್ ಎನ್ಫೀಲ್ಡ್ ಮಿಟಿಯೋರ್ 350 ಬಿಡುಗಡೆ
ರಾಯಲ್ ಎನ್ಫೀಲ್ಡ್ ಮಿಟಿಯೋರ್ 350 ಬಿಡುಗಡೆ
Follow us on

ಜನಪ್ರಿಯ ಕ್ಲಾಸಿಕ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ರಾಯಲ್ ಎನ್ಫೀಡ್ (Royal Enfield) ನವೀಕೃತ ಮಿಟಿಯೋರ್ 350 (Meteor 350)  ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ನವೀಕೃತ ಮಿಟಿಯೋರ್ 350 ಬೈಕ್ ಮಾದರಿಯು ಫೈರ್ ಬಾಲ್, ಸ್ಟೇಲಾರ್, ಅರೋರಾ ಮತ್ತು ಸೂಪರ್ ನೋವಾ ಎನ್ನುವ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2,05,900 ರಿಂದ ಟಾಪ್ ಎಂಡ್ ಮಾದರಿಯು ರೂ. 2,29,900 ಬೆಲೆ ಹೊಂದಿದೆ.

ನವೀಕೃತ ಮಿಟಿಯೋರ್ 350 ಬೈಕ್ ಮಾದರಿಯಲ್ಲಿ ರಾಯಲ್ ಎನ್ಫೀಡ್ ಕಂಪನಿಯು ಹೊಸದಾಗಿ ಅರೋರಾ ವೆರಿಯೆಂಟ್ ನೊಂದಿಗೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಹೆಚ್ಚುವರಿ ಕ್ರೋಮ್ ಮತ್ತು ಎಲ್ಇಡಿ ಹೆಡ್ ಲೈಟ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದೆ.

ಇದನ್ನೂ ಓದಿ: ಹೋಂಡಾ ಹೈನೆಸ್‌ ಸಿಬಿ350 ಲೆಗಸಿ ಮತ್ತು ಸಿಬಿ350ಆರ್‌ಎಸ್‌ ನ್ಯೂ ಹ್ಯೂ ಎಡಿಷನ್ ಬಿಡುಗಡೆ

ಅರೋರಾ ವೆರಿಯೆಂಟ್ ನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಸೇರಿದಂತೆ ವಿಂಡ್ ಸ್ಕ್ರೀನ್, ಬ್ಯಾಕ್ ರೆಸ್ಟ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಇನ್ನುಳಿದಂತೆ ಸ್ಪೋಕ್ ರಿಮ್ಸ್, ಡಿಲಕ್ಸ್ ಟೂರಿಂಗ್ ಸೀಟ್, ಟ್ರಿಪ್ಪರ್ ನ್ಯಾವಿಗೇಷನ್, ಅಲ್ಯುನಿಯಂ ಸ್ವಿಚ್ ಕ್ಯೂಬ್ಸ್ ಜೊತೆ ಗ್ರೀನ್, ಬ್ಲ್ಯೂ ಮತ್ತು ಬ್ಲ್ಯಾಕ್ ಬಣ್ಣಗಳು ರೆಟ್ರೋ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಲಿವೆ.

ಇನ್ನು ಫೈರ್ ಬಾಲ್, ಸ್ಟೇಲಾರ್ ವೆರಿಯೆಂಟ್ ಗಳಲ್ಲಿ ಟ್ರಿಪ್ಲರ್ ನ್ಯಾವಿಗೇಷನ್ ಪಾಡ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಸೂಪರ್ ನೋವಾ ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಅಲ್ಯುನಿಯಂ ಸ್ವಿಚ್ ಕ್ಯೂಬ್ ಮತ್ತು ಎಲ್ ಇಡಿ ಹೆಡ್ ಲೈಟ್ ನೊಂದಿಗೆ ಸಜ್ಜುಗೊಂಡಿದೆ.

ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್

ಎಂಜಿನ್ ಮತ್ತು ಪರ್ಫಾಮೆನ್ಸ್
ನವೀಕೃತ ಮಿಟಿಯೋರ್ 350 ಬೈಕ್ ಮಾದರಿಯಲ್ಲಿ ರಾಯಲ್ ಎನ್ಫೀಡ್ ಕಂಪನಿಯು ಹಂತ 2ನೇ ಬಿಎಸ್6 ಮಾನದಂಡ ಒಳಗೊಂಡ 350 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 20 ಹಾರ್ಸ್ ಪವರ್ ಮತ್ತು 27 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ.