Ather 450S HR: ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್

ಎಥರ್ ಎನರ್ಜಿ ಕಂಪನಿಯು ಶೀಘ್ರದಲ್ಲಿಯೇ ಹೊಸ 450ಎಸ್ ಹೆಚ್ಆರ್ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಇವಿ ಸ್ಕೂಟರ್ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕೇಜ್ ಜೋಡಣೆ ಹೊಂದಿದೆ.

Ather 450S HR: ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್
ಎಥರ್ 450ಎಸ್ ಹೈ ರೇಂಜ್ ವರ್ಷನ್
Follow us
|

Updated on: Sep 24, 2023 | 3:59 PM

ಎಥರ್ ಎನರ್ಜಿ(Ather Energy) ಕಂಪನಿಯು ಶೀಘ್ರದಲ್ಲಿಯೇ ಹೊಸ 450ಎಸ್ ಹೆಚ್ಆರ್(450S HR) ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಇವಿ ಸ್ಕೂಟರ್ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕೇಜ್ ಜೋಡಣೆ ಹೊಂದಿದೆ.

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು 2024ರ ಏಪ್ರಿಲ್ ವೇಳೆಗೆ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಇವಿ ಸ್ಕೂಟರ್ ನಲ್ಲಿ 450ಎಸ್ ಹೈ ರೇಂಜ್ ವರ್ಷನ್ ಕೂಡಾ ಒಂದಾಗಿದೆ. ಹೊಸ ಇವಿ ಸ್ಕೂಟರ್ ಮಾದರಿಯು ಎಥರ್ ನಿರ್ಮಾಣದ ಇದುವರೆಗಿನ ಇವಿ ಸ್ಕೂಟರ್ ಗಳಲ್ಲಿಯೇ ಅತಿ ಹೆಚ್ಚು ಮೈಲೇಜ್ ನೊಂದಿಗೆ ಹಲವಾರು ಹೊಸ ಫೀಚರ್ಸ್ ಗಳನ್ನು ಹೊಂದಿರಲಿದೆ.

ಎಥರ್ ಕಂಪನಿಯು ಕೇಂದ್ರ ಸಾರಿಗೆ ಇಲಾಖೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ಹೊಸ 450ಎಸ್ ಹೈ ರೇಂಜ್ ವರ್ಷನ್ ಗೆ ಸಂಬಂಧಿಸಿದ ಹಲವು ತಾಂತ್ರಿಕ ಅಂಶಗಳ ಮಾಹಿತಿ ಸೋರಿಕೆಯಾಗಿದ್ದು, ಮುಂದಿನ ಕೆಲವೇ ತಿಂಗಳಿನಲ್ಲಿ ಹೊಸ ಇವಿ ಸ್ಕೂಟರ್ ಅಧಿಕೃತವಾಗಿ ಬಿಡುಗಡೆಯಾಗುವುದು ಬಹತೇಕ ಖಚಿತವಾಗಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಇವಿ ಸ್ಕೂಟರ್ ಗಳಿವು!

ಹೊಸ ಬ್ಯಾಟರಿ ಪ್ಯಾಕ್ ಜೋಡಣೆ ಬಿಡುಗಡೆಗೆ ಸಿದ್ದವಾಗಿರುವ 450ಎಸ್ ಹೈ ರೇಂಜ್ ವರ್ಷನ್ ನಲ್ಲಿ ಎಥರ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ನೀಡುತ್ತಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ 3.7 ಕೆವಿಹೆಚ್ ಬ್ಯಾಟರಿಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಹೊಸ ಬ್ಯಾಟರಿ ಪ್ರತಿ ಚಾರ್ಜ್ ಗೆ ಬರೋಬ್ಬರಿ 156 ಕಿ.ಮೀ ನೀಡಬಹುದಾಗಿದ್ದು, ಇದು 450ಎಕ್ಸ್ 3ನೇ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚುವರಿಯಾಗಿ 10 ಕಿ.ಮೀ ಮೈಲೇಜ್ ನೀಡಲಿದೆ.

ಹೆಚ್ಚಿನ ಮಟ್ಟದ ಮೈಲೇಜ್ ಬ್ಯಾಟರಿ ಪ್ಯಾಕ್ ಹೊಂದಿರುವ 450ಎಸ್ ಹೈ ರೇಂಜ್ ವರ್ಷನ್ ನಲ್ಲಿ ಎಥರ್ ಕಂಪನಿಯು ಇಕೋ, ಸ್ಮಾರ್ಟ್ ಇಕೋ ಮತ್ತು ರೈಡ್ ಎನ್ನುವ ಮೂರು ರೈಡಿಂಗ್ ಮೋಡ್ ಗಳನ್ನು ನೀಡಲಾಗಿದ್ದು, ಇದು ಪ್ರತಿ ಗಂಟೆಗೆ 80 ಕಿ.ಮೀ ಟಾಪ್ ಸ್ಪೀಡ್ ಸಾಧಿಸಬಲ್ಲದು. ಆದರೆ ಹೊಸ ಸ್ಕೂಟರಿನಲ್ಲಿ 450ಎಸ್, 450ಎಕ್ಸ್ ಆವೃತ್ತಿಯಲ್ಲಿರುವಂತೆಯೇ ಪಿಎಂಎಸ್ ಮೋಟಾರ್ ಜೋಡಣೆ ಮಾಡಲಾಗಿದ್ದು, ಮೈಲೇಜ್ ಹೆಚ್ಚಳಕ್ಕಾಗಿ ಟಾಪ್ ಸ್ಪೀಡ್ ತುಸು ಇಳಿಕೆ ಮಾಡಲಾಗಿದೆ. 450ಎಸ್, 450ಎಕ್ಸ್ ಆವೃತ್ತಿಗಳು ಪ್ರತಿ ಗಂಟೆಗೆ 90 ಕಿ.ಮೀ ಮೈಲೇಜ್ ಹೊಂದಿದ್ದು, ಮೋಟಾರ್ ಮಾತ್ರ ಒಂದೇ ಆಗಿರಲಿವೆ.

ಈ ಮೂಲಕ ಎಥರ್ ಹೊಸ ಸ್ಕೂಟರ್ ಪ್ರತಿಸ್ಪರ್ಧಿ ಓಲಾ ಎಸ್1 ಪ್ರೊ ಹೊಸ ಆವೃತ್ತಿಗೆ ಮತ್ತಷ್ಟು ಪೈಪೋಟಿ ನೀಡುವ ಸುಳಿವು ನೀಡಿದ್ದು, ಫೀಚರ್ಸ್ ಗಳಲ್ಲೂ ಗ್ರಾಹಕರನ್ನು ಸೆಳೆಯಲಿದೆ. ಹೊಸ ಸ್ಕೂಟರಿನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಬ್ಲ್ಯೂಟೂಥ್ ಕನೆಕ್ಟಿವಿಟಿ, ಮಲ್ಟಿ ರೈಡಿಂಗ್ ಮೋಡ್ ಗಳು ಸೇರಿದಂತೆ ಹಲವು ಫೀಚರ್ಸ್ ಗಳಿದ್ದು, ಹೊಸ ಇವಿ ಸ್ಕೂಟರ್ ಒಟ್ಟು 243 ಕೆ.ಜಿ ತೂಕ ಹೊಂದಿರಲಿದೆ.

ಇದನ್ನೂ ಓದಿ: ಹೊಸ ಫೀಚರ್ಸ್ ಗಳೊಂದಿಗೆ 2023ರ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಥರ್ ನಿರ್ಮಾಣದ ಇತರೆ ಇವಿ ಸ್ಕೂಟರ್ ಗಳಿಂತಲೂ ತುಸು ಭಾರವಾಗಿರುವ ಹೊಸ ಸ್ಕೂಟರ್ 1,837 ಎಂಎಂ ಉದ್ದ, 739 ಎಂಎಂ ಅಗಲ, 1,114 ಎಂಎಂ ಎತ್ತರ ಮತ್ತು 1,296 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಹಿಂಬದಿಯ ಆಸನವು ಈ ಮತ್ತಷ್ಟು ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಿರಲಿದೆ ಎನ್ನಲಾಗಿದೆ. ಇದರೊಂದಿಗೆ ಹೊಸ ಇವಿ ಸ್ಕೂಟರ್ ಬೆಲೆಯಲ್ಲಿ ತುಸು ದುಬಾರಿಯಾಗಿರಲಿದ್ದು, 450ಎಕ್ಸ್ ಹೊಸ ಮಾದರಿಗಿಂತಲೂ ರೂ. 10 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಬಹುದಾಗಿದೆ.

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು