Honda: ಹೋಂಡಾ ಹೈನೆಸ್ ಸಿಬಿ350 ಲೆಗಸಿ ಮತ್ತು ಸಿಬಿ350ಆರ್‌ಎಸ್ ನ್ಯೂ ಹ್ಯೂ ಎಡಿಷನ್ ಬಿಡುಗಡೆ
ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಹೈನೆಸ್ ಸಿಬಿ350 ಲೆಗಸಿ ಮತ್ತು ಸಿಬಿ350ಆರ್‌ಎಸ್ ನ್ಯೂ ಹ್ಯೂ ಎಡಿಷನ್ ಬಿಡುಗಡೆ ಮಾಡಿದೆ.
ದೇಶದ ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ(Honda Motorcycle & Scooter India) ಹಬ್ಬದ ಋತು ಹಿನ್ನಲೆಯಲ್ಲಿ ಹೈನೆಸ್ ಸಿಬಿ350 ಲೆಗಸಿ (CB350Legacy Edition) ಮತ್ತು ಸಿಬಿ350ಆರ್‌ಎಸ್ ನ್ಯೂ ಹ್ಯೂ ಎಡಿಷನ್ (CB350RS New Hue Edition) ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ. 2,16,356 ಮತ್ತು ರೂ. 2,19,357 ಬೆಲೆ ಹೊಂದಿವೆ.
ಹಬ್ಬಗಳ ಸಂದರ್ಭದಲ್ಲಿ ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಹೊಸ ವಾಹನ ಮಾದರಿಗಳ ಜೊತೆಗೆ ವಿಶೇಷ ಆವೃತ್ತಿಗಳನ್ನು ಪರಿಚಯಿಸುತ್ತಿವೆ. ಹೋಂಡಾ ದ್ವಿಚಕ್ರ ವಾಹನ ಕಂಪನಿ ಕೂಡಾ ಇದೀಗ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾದರಿಗಳಲ್ಲಿ ಲೆಗಸಿ ಮತ್ತು ನ್ಯೂ ಹ್ಯೂ ಎಡಿಷನ್ ಪರಿಚಯಿಸಿದ್ದು, ಇವು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಕೆಲವು ಹೆಚ್ಚುವರಿ ಫೀಚರ್ಸ್ ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲಿವೆ.
ಹೊಸ ಹೈನೆಸ್ ಸಿಬಿ350 ಲೆಗಸಿ ಮತ್ತು ಸಿಬಿ350ಆರ್‌ಎಸ್ ನ್ಯೂ ಹ್ಯೂ ಎಡಿಷನ್ ಗಳ ಖರೀದಿಗಾಗಿ ಹೋಂಡಾ ಬಿಗ್ ವಿಂಗ್ ಶೋರೂಂಗಳಲ್ಲಿ ಈಗಾಗಲೇ ಬುಕಿಂಗ್ ಸಹ ಆರಂಭವಾಗಿದ್ದು, ಹೊಸ ಬೈಕ್ ವಿತರಣೆಯು ಶೀಘ್ರದಲ್ಲಿಯೇ ಆರಂಭವಾಗಲಿದೆ.
ಇದನ್ನೂ ಓದಿ: ಬರೋಬ್ಬರಿ ನೂರು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಈ ಮಹಾಶಯ ತೆತ್ತ ದಂಡವೆಷ್ಟು ನೋಡಿ..
ಹೊಸ ಆವೃತ್ತಿಗಳ ವಿಶೇಷತೆಗಳೇನು?
ಹೋಂಡಾ ಕಂಪನಿಯು ಹೈನೆಸ್ ಸಿಬಿ350 ಲೆಗಸಿ ಮತ್ತು ಸಿಬಿ350ಆರ್‌ಎಸ್ ನ್ಯೂ ಹ್ಯೂ ಎಡಿಷನ್ ಗಳಲ್ಲಿ ಸಂಪೂರ್ಣ ಎಲ್ ಇಡಿ ಲೈಟಿಂಗ್ಸ್ ಜೊತೆಗೆ ರೆಟ್ರೋ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುತ್ತಿದೆ. ಜೊತೆಗೆ ಹೊಸ ಬೈಕ್ ಮಾದರಿಗಳಲ್ಲಿ ಪರ್ಲ್ ಸೈರೆನ್ ಬ್ಲ್ಯೂ, ಸ್ಪೋರ್ಟ್ಸ್ ರೆಡ್ ಮತ್ತು ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಬಣ್ಣದ ಆಯ್ಕೆಯೊಂದಿಗೆ ಟ್ಯಾಂಕ್, ವ್ಹೀಲ್ ಮತ್ತು ಫೆಂಡರ್ ಮೇಲೆ ಆಕರ್ಷಕ ಗ್ರಾಫಿಕ್ಸ್ ನೀಡಲಾಗಿದೆ. ಹೊಸ ಬಣ್ಣದ ಆಯ್ಕೆಯು ಹಿಂಬದಿಯ ಗ್ರ್ಯಾಬ್ ಹ್ಯಾಂಡಲ್‌ಗಳು ಮತ್ತು ಹೆಡ್‌ಲೈಟ್ ಕವರ್ ಹೊಂದಾಣಿಕೆಯಾಗಲಿದ್ದು, ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಗಮನಸೆಳೆಯಲಿವೆ.
ಹೊಸ ಬೈಕ್ ಮಾದರಿಗಳಲ್ಲಿ ಹೋಂಡಾ ಕಂಪನಿಯು ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಡಿಜಿಟಲ್ ಅನಲಾಗ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಮಾರ್ಟ್‌ಫೋನ್ ಧ್ವನಿ ನಿಯಂತ್ರಣ ವ್ಯವಸ್ಥೆ ಹೊಂದಿದ್ದು, ಪ್ರಯಾಣದ ವೇಳೆ ಹಿಂಬದಿ ಚಕ್ರದ ಘರ್ಷಣೆಯನ್ನು ನಿರ್ವಹಿಸಲು ಸೆಲೆಕ್ಟೇಬಲ್ ಟಾರ್ಕ್ಯೂ ಕಂಟ್ರೋಲ್ (ಎಚ್‌ಎಸ್‌ಟಿಸಿ) ವ್ಯವಸ್ಥೆಯನ್ನು ಸಹ ಒಳಗೊಂಡಿವೆ.
ಇದನ್ನೂ ಓದಿ: ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್ ಬಿಡುಗಡೆ
ಎಂಜಿನ್ ಮತ್ತು ಸಾಮರ್ಥ್ಯ
ಹೊಸ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾದರಿಗಳಲ್ಲಿ ಹೆಚ್ಚುವರಿ ಫೀಚರ್ಸ್ ಹೊರತಾಗಿ ಎಂಜಿನ್ ಆಯ್ಕೆಯನ್ನು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಇವು 348.36ಸಿಸಿ, ಏರ್-ಕೂಲ್ಡ್, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇವು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 5,500 ಆರ್‌ಪಿಎಂನಲ್ಲಿ 15.5 ಹಾರ್ಸ್ ಪವರ್ ಮತ್ತು 3,000 ಆರ್‌ಪಿಎಂನಲ್ಲಿ 30 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತವೆ.
ವಿಶೇಷ ವಾರಂಟಿ ಘೋಷಣೆ
ಹೊಸ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾದರಿಗಳ ಖರೀದಿ ಮೇಲೆ ಗ್ರಾಹಕರಿಗೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ 7 ವರ್ಷಗಳ ವಿಸ್ತರಿತ ವಾರಂಟಿ ಸಹ ಸಿಗಲಿದೆ.
Published On - 9:25 pm, Tue, 10 October 23