AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್ ಬಿಡುಗಡೆ

ಕ್ಲಾಸಿಕ್ ಲೆಜೆಂಡ್ ಕಂಪನಿಯು ನವೀಕೃತ ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್ ಬಿಡುಗಡೆ
ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್ ಬಿಡುಗಡೆ
Follow us
Praveen Sannamani
|

Updated on:Oct 04, 2023 | 7:12 PM

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್(Classic Legends) ಕಂಪನಿಯು ನವೀಕೃತ ಜಾವಾ 42(Jawa 42) ಮತ್ತು ಯೆಜ್ಡಿ ರೋಡ್‌ಸ್ಟರ್(Yezdi Roadster) ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಳು ಕ್ರಮವಾಗಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.98 ಲಕ್ಷ ಮತ್ತು ರೂ. 2.08 ಲಕ್ಷ ಆರಂಭಿಕ ಬೆಲೆ ಹೊಂದಿವೆ.

ಭಾರತದಲ್ಲಿ ಕ್ಲಾಸಿಕ್ ಬೈಕ್ ಖರೀದಿದಾರರ ಬೇಡಿಕೆ ಆಧರಿಸಿ ಜಾವಾ ಮತ್ತು ಯೆಜ್ಡಿ ಬೈಕ್ ಆವೃತ್ತಿಗಳನ್ನು ಮರುಬಿಡುಗಡೆ ಮಾಡಿರುವ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಉತ್ತಮ ಬೇಡಿಕೆ ದಾಖಲಿಸುತ್ತಿದ್ದು, ಇದೀಗ ಕಂಪನಿಯು ಸುಧಾರಿತ ಪ್ರೀಮಿಯಂ ಫೀಚರ್ಸ್ ಹೊಂದಿರುವ ನವೀಕೃತ ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಹೊಸ ಜಾವಾ 42

ಜಾವಾ 42 ನವೀಕೃತ ಆವೃತ್ತಿಯು ಡ್ಯುಯಲ್‌ ಟೋನ್‌ ರೂಪಾಂತರದೊಂದಿಗೆ ಸ್ಪಷ್ಟವಾದ ಲೆನ್ಸ್ ಇಂಡಿಕೇಟರ್‌ಗಳು, ಶಾರ್ಟ್-ಹ್ಯಾಂಗ್‌ ಫೆಂಡರ್‌ಗಳು ಮತ್ತು ಹೊಸ ಡಿಂಪಲ್ ಫ್ಯೂಲ್ ಟ್ಯಾಂಕ್ ಅನ್ನು ಹೊಂದಿದ್ದು, ಪ್ರೀಮಿಯಂ ಲುಕ್ ನೀಡುವುದಕ್ಕಾಗಿ ಹೊಸ ಬೈಕಿನಲ್ಲಿ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇದಲ್ಲದೆ ಹೊಸ ಬೈಕ್ ಕಾಸ್ಮಿಕ್ ರಾಕ್, ಇನ್ಫಿನಿಟಿ ಬ್ಲ್ಯಾಕ್, ಸ್ಟಾರ್‌ಶಿಪ್‌ ಬ್ಲೂ ಮತ್ತು ಸೆಲೆಸ್ಟಿಯಲ್ ಕಾಪರ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಡ್ಯುಯಲ್ ಬಣ್ಣಗಳಿಗೆ ಪೂರಕವಾಗಿ ಎಂಜಿನ್ ಮತ್ತು ಎಕ್ಸಾಸ್ಟ್ ಘಟಕಗಳಿಗೆ ರಾವೆನ್ ಟೆಕ್ಸ್‌ಚರ್‌ ಫಿನಿಶ್‌ ನೀಡಲಾಗಿದ್ದು, ಸ್ಪೋರ್ಟಿಯರ್ ವಿನ್ಯಾಸಕ್ಕಾಗಿ ಹೊಂದಿಕೆಯಾಗುವಂತೆ ಮರುವಿನ್ಯಾಸಗೊಳಿಸಲಾದ ಆಸನ, ಬ್ಯಾಶ್ ಪ್ಲೇಟ್, ಹ್ಯಾಂಡಲ್‌ಬಾರ್ ಮೌಂಟೆಡ್ ಮಿರರ್‌ಗಳು ಮತ್ತು ಹ್ಯಾಂಡಲ್‌ಬಾರ್‌ ಗ್ರಿಪ್‌ಗಳನ್ನು ನೀಡಲಾಗಿದೆ.

Jawa 42 Dual Tone

ಇದನ್ನೂ ಓದಿ: ಭರ್ಜರಿ ಫೀಚರ್ಸ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ

ಇನ್ನು ಜಾವಾ 42 ಬೈಕ್ ಮಾದರಿಯಲ್ಲಿ 294.7 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಲಾಗಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 27.3 ಹಾರ್ಸ್ ಪವರ್ ಮತ್ತು 26.8 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಬೈಕಿನಲ್ಲಿ 5,750ಆರ್ ಪಿಎಂನಲ್ಲಿ ಗರಿಷ್ಠ ಟಾರ್ಕ್ ಲಭ್ಯವಿದ್ದು, ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್ ನೀಡಲಾಗಿದೆ.

ಹೊಸ ಯೆಜ್ಡಿ ರೋಡ್‌ಸ್ಟರ್

ನವೀಕೃತ ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಯು ಈ ಬಾರಿ ಗುರುತರವಾದ ವಿನ್ಯಾಸ ನವೀಕರಣಗಳನ್ನು ಹೊಂದಿದ್ದು, ಸ್ಪೋರ್ಟಿಯರ್ ಲುಕ್ ನೊಂದಿಗೆ ಮೊಣಕಾಲಿಗೆ ಆಯಾಸವಾಗದಂತೆ ಅರಾಮದಾಯಕವಾದ ವಿರಾಮಕ್ಕಾಗಿ ಪಟ್ಟಿ ನೀಡಲಾಗಿದೆ. ಜೊತೆಗೆ ಪ್ರೀಮಿಯಂ ಆಗಿರುವ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು ಮತ್ತು ಎಂಜಿನ್ ಮತ್ತು ಎಕ್ಸಾಸ್ಟ್ ಮೇಲೆ ರಾವೆನ್ ಟೆಕ್ಸ್‌ಚರ್‌ ಫಿನಿಶ್‌ ಸೇರಿಸಲಾಗಿದೆ. ಹೀಗಾಗಿ ಈ ಹೊಸ ಬೈಕ್ ಗ್ರಾಹಕರ ಬೇಡಿಕೆ ಆಧರಿಸಿ ಸುಧಾರಣೆ ಮಾಡಲಾದ ಆವೃತ್ತಿಯಾಗಿದ್ದು, ಮರುವಿನ್ಯಾಸಗೊಳಿಸಲಾದ ಹ್ಯಾಂಡಲ್‌ಬಾರ್ ಗ್ರಿಪ್‌ಗಳು, ಹ್ಯಾಂಡಲ್‌ಬಾರ್-ಮೌಂಟೆಡ್ ಮಿರರ್‌ಗಳು, ಸ್ಪೋರ್ಟಿಯಾಗಿರುವ ಎಕ್ಸಾಸ್ಟ್‌ ಸಹ ಹೊಂದಿದೆ. ಜೊತೆಗೆ ಹೊಸ ಬೈಕಿನಲ್ಲಿ ರಶ್ ಅವರ್ ರೆಡ್, ಫಾರೆಸ್ಟ್ ಗ್ರೀನ್ ಮತ್ತು ಲೂನಾರ್ ವೈಟ್ ಎಂಬ ಮೂರು ಡ್ಯುಯಲ್ ಟೋನ್ ಮತ್ತು ಒಂದು ಸಿಂಗಲ್ ಟೋನ್ ಬಣ್ಣಗಳ ಆಯ್ಕೆ ಲಭ್ಯವಿದೆ.

Yezdi

ಇದನ್ನೂ ಓದಿ: ಸ್ಪೋರ್ಟಿ ಫೀಚರ್ಸ್ ಹೊಂದಿರುವ ಬಜಾಜ್ ಪಲ್ಸರ್ ಎನ್150 ಬೈಕ್ ಬಿಡುಗಡೆ

ಇನ್ನು ಹೊಸ ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಯಲ್ಲಿ 334 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 29.5 ಹಾರ್ಸ್ ಪವರ್ ಮತ್ತು 28.9 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಇದು 1440 ಎಂ.ಎಂ ವ್ಹೀಲ್ ಬೇಸ್ ನೊಂದಿಗೆ ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕವಾದ ಆವೃತ್ತಿಯಾಗಿದೆ.

Published On - 7:05 pm, Wed, 4 October 23