Honda Gold Wing Tour: ಭರ್ಜರಿ ಫೀಚರ್ಸ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ

ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಕಂಪನಿಯು ನವೀಕೃತ ಗೋಲ್ಡ್ ವಿಂಗ್ ಟೂರ್ ಐಷಾರಾಮಿ ಕ್ರೂಸರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

Honda Gold Wing Tour: ಭರ್ಜರಿ ಫೀಚರ್ಸ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ
ಹೋಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ
Follow us
|

Updated on: Oct 02, 2023 | 6:09 PM

ಭಾರತದ ಮುಂಚೂಣಿ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ( Honda Motorcycle & Scooter India) ತನ್ನ ನವೀಕೃತ ಗೋಲ್ಡ್ ವಿಂಗ್ ಟೂರ್(Gold Wing Tour) ಐಷಾರಾಮಿ ಕ್ರೂಸರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಎಕ್ಸ್ ಶೋರೂಂ ಪ್ರಕಾರ ರೂ. 39.20 ಲಕ್ಷ ಬೆಲೆ ಹೊಂದಿದೆ.

ಹೊಸ ಗೋಲ್ಡ್ ವಿಂಗ್ ಟೂರ್ ಬಿಡುಗಡೆಯೊಂದಿಗೆ ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಹೋಂಡಾ ಬಿಗ್ ವಿಂಗ್ ಶೋರೂಂಗಳಲ್ಲಿ ಹೊಸ ಬೈಕ್ ಖರೀದಿಗೆ ಲಭ್ಯವಿರಲಿವೆ. ಬಿಗ್ ವಿಂಗ್ ಶೋರೂಂಗಳು ಹೋಂಡಾ ಐಷಾರಾಮಿ ಬೈಕ್ ಮಾರಾಟಕ್ಕಾಗಿ ತೆರೆಯಲಾದ ಪ್ರತ್ಯೇಕ ಮಾರಾಟ ಕೇಂದ್ರಗಳಾಗಿದ್ದು, ಇದರಲ್ಲಿ ಗೋಲ್ಡ್ ವಿಂಗ್ ಸೇರಿದಂತೆ 300 ಸಿಸಿಗಿಂತ ಹೆಚ್ಚಿನ ಮಟ್ಟದ ಎಂಜಿನ್ ಪ್ರೇರಿತ ಬೈಕ್ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಗೋಲ್ಡ್ ವಿಂಗ್ ಟೂರ್ ಮಾದರಿಯನ್ನು ಹೋಂಡಾ ಕಂಪನಿಯು ಭಾರತದಲ್ಲಿ ಸದ್ಯ ಸಿಬಿಯು ಆಮದು ನೀತಿಯಡಿ ಮಾರಾಟ ಮಾಡುತ್ತಿದ್ದು, ಇದು ಸಂಪೂರ್ಣವಾಗಿ ಜಪಾನ್ ನಲ್ಲಿ ತಯಾರಿಯಾದ ಆವೃತ್ತಿಯಾಗಿದೆ. ಹೀಗಾಗಿ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿದ್ದು, ವಿಶಿಷ್ಠವಾದ ತಾಂತ್ರಿಕ ಅಂಶಗಳು ಮತ್ತು ಅರಾಮದಾಯಕ ರೈಡಿಂಗ್ ಅನುಭವದೊಂದಿಗೆ ಜಾಗತಿಕ ಮಾರುಕಟ್ಟೆ ಹಲವಾರು ದಾಖಲೆಗಳನ್ನು ನಿರ್ಮಿಸಿದೆ.

Honda Gold Wing Tour

ಇದನ್ನೂ ಓದಿ: ಸ್ಪೋರ್ಟಿ ಫೀಚರ್ಸ್ ಹೊಂದಿರುವ ಬಜಾಜ್ ಪಲ್ಸರ್ ಎನ್150 ಬೈಕ್ ಬಿಡುಗಡೆ

‘ಕಿಂಗ್ ಆಫ್ ದಿ ಕಿಂಗ್’ ಖ್ಯಾತಿಯೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 50 ವರ್ಷಗಳ ಇತಿಹಾಸ ಹೊಂದಿರುವ ಗೋಲ್ಡ್ ವಿಂಗ್ ಟೂರ್ ಬೈಕ್ ಮಾದರಿಯು ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಸ್ಪೋರ್ಟಿಯಾಗಿರುವ ಸ್ಲಿಕ್ ಲೈನ್ ಗಳು ಮತ್ತು ಏರೋಡೈನಾಮಿಕ್ ವಿನ್ಯಾಸವು ಗಮನಸೆಳೆಯುತ್ತದೆ. ಈ ಮೂಲಕ ಹೊಸ ಬೈಕ್ ದೀರ್ಘ ಪ್ರಯಾಣವನ್ನು ಕೈಗೊಳ್ಳಲು ಇಷ್ಟಪಡುವವರಿಗೆ ಐಷಾರಾಮಿ ರೈಡಿಂಗ್ ಅನುಭವ ನೀಡುತ್ತದೆ.

ಹೊಸ ಬೈಕಿನಲ್ಲಿ ಸಂಪೂರ್ಣ ಎಲ್ಇಡಿ ಲೈಟಿಂಗ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುವ 7 ಇಂಚಿನ ಫುಲ್ ಕಲರ್ ಟಿಎಫ್‌ಟಿ ಡಿಸ್ಪ್ಲೇ, ಪ್ರಭಾವಶಾಲಿಯಾದ ಕಾಕ್‌ಪಿಟ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಮತ್ತು ಆಡಿಯೊ ಕಂಟ್ರೋಲ್ ಸಿಸ್ಟಂ ಸೌಲಭ್ಯವನ್ನ ನೀಡಲಾಗಿದೆ. ಜೊತೆಗೆ ಬೈಕ್ ಚಾಲನೆ ವೇಳೆ ಗಾಳಿ ರಕ್ಷಣೆಗಾಗಿ ಅತ್ಯುತ್ತಮ ವಿಸ್ತೃತ ಎಲೆಕ್ಟ್ರಾನಿಕ್ ವಿಂಡ್‌ಸ್ಕ್ರೀನ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ ಟೈಪ್-ಸಿ ಸಾಕೆಟ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು ರೈಡರ್ ಏರ್‌ಬ್ಯಾಗ್ ಸೇರಿದಂತೆ ಹಲವು ವಿಶೇಷ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್

ಎಂಜಿನ್ ಮತ್ತು ಪರ್ಫಾಮೆನ್ಸ್

ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಮಾದರಿಯಲ್ಲಿ ಶಕ್ತಿಶಾಲಿಯಾಗಿರುವ 1833 ಸಿಸಿ, ವಾಟರ್ ಕೂಲ್ಡ್, 4 ಸ್ಟ್ರೋಕ್, 24 ವಾಲ್ಟ್, ಫ್ಲಾಟ್ ಸಿಕ್ಸ್-ಸಿಲಿಂಡರ್ ಎಂಜಿನ್ ಜೋಡಣೆ ಹೊಂದಿದ್ದು, ಇದು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ನೊಂದಿಗೆ 93 ಕಿಲೋವ್ಯಾಟ್ ಪವರ್ ಮತ್ತು 170 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಇದರೊಂದಿಗೆ ಇದು ಅನುಕೂಲಕರವಾದ ಕಡಿಮೆ ವೇಗದೊಂದಿಗೆ ಕ್ರೀಪ್ ಫಾರ್ವರ್ಡ್ ಸಹ ಹೊಂದಿದ್ದು, ಟೂರ್, ಸ್ಪೋರ್ಟ್, ಇಕಾನ್ ಮತ್ತು ರೈನ್ ರೈಡಿಂಗ್ ಮೋಡ್ ಗಳನ್ನು ಪಡೆದುಕೊಂಡಿದೆ.

ಇನ್ನು ಗೋಲ್ಡ್ ವಿಂಗ್ ಟೂರ್ ಬೈಕಿನಲ್ಲಿ ಹೋಂಡಾ ಕಂಪನಿಯು ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಇದರಲ್ಲಿ ಥ್ರೊಟಲ್-ಬೈ-ವೈರ್ ಸಿಸ್ಟಮ್ ಸೇರಿದಂತೆ ಹಲವಾರು ಸುಧಾರಿತ ಎಲೆಕ್ಟ್ರಾನಿಕ್ಸ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಹೊಸ ಬೈಕ್ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಇಂಡಿಯನ್ ಮೋಟಾರ್ ಸೈಕಲ್ ಶೇಫ್ಟೈನ್ ಎಲೈಟ್ ಮತ್ತು ಹಾರ್ಲೆ ಡೇವಿಡ್ಸನ್ ರೋಡ್ ಗ್ಲೈಡ್ ಸ್ಪೆಷಲ್ ಎಡಿಷನ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ