ಅತ್ತ ವಾಹನಗಳ ಮಾರಾಟ ಹೆಚ್ಚಳ; ಇತ್ತ ಪೆಟ್ರೋಲ್ ಡೀಸೆಲ್ ಬಳಕೆಯಲ್ಲಿ ಹೆಚ್ಚಳ

Car Sales and Petrol Consumption: ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಹೊಸ ದಾಖಲೆ ಪ್ರಮಾಣದಲ್ಲಿ ಪ್ಯಾಸಂಜರ್ ವಾಹನಗಳ ಮಾರಾಟವಾಗಿದೆ. ಅದೇ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲೂ ಹೆಚ್ಚಳವಾಗಿದೆ. ಪೆಟ್ರೋಲ್ ಬಳಕೆ ಹೆಚ್ಚಲು ಇರುವ ಕಾರಣಗಳಲ್ಲಿ ವಾಹನಗಳ ಮಾರಾಟ ಹೆಚ್ಚಳವೂ ಒಂದಿರಬಹುದು. ಹಾಗೆಯೇ, ಆರ್ಥಿಕ ಚಟುವಟಿಕೆ ಗರಿಗೆದರಿರುವುದರಿಂದಲೂ ಪೆಟ್ರೋಲ್ ಬಳಕೆ ಹೆಚ್ಚಲು ಕಾರಣವಾಗಿರಬಹುದು.

ಅತ್ತ ವಾಹನಗಳ ಮಾರಾಟ ಹೆಚ್ಚಳ; ಇತ್ತ ಪೆಟ್ರೋಲ್ ಡೀಸೆಲ್ ಬಳಕೆಯಲ್ಲಿ ಹೆಚ್ಚಳ
ಪೆಟ್ರೋಲ್
Follow us
|

Updated on: Oct 03, 2023 | 12:15 PM

ನವದೆಹಲಿ, ಅಕ್ಟೋಬರ್ 3: ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ (Petrol and Diesel sales) ಕ್ರಮವಾಗಿ ಶೇ. 5.6 ಮತ್ತು ಶೇ. 2.5ರಷ್ಟು ಹೆಚ್ಚಿವೆ. ಇದಕ್ಕೆ ಹಲವು ಕಾರಣಗಳಿವೆಯಾದರೂ ಪ್ರಮುಖವಾಗಿ ಕಾರುಗಳ ಮಾರಾಟದಲ್ಲಿ (car sales) ಗಣನೀಯವಾಗಿ ಹೆಚ್ಚಿರುವುದು ಗಮನಾರ್ಹ ಎನಿಸಿದೆ. ಹಾಗೆಯೇ, ಆರ್ಥಿಕ ಚಟುವಟಿಕೆ (economic activity) ತೀವ್ರಗೊಂಡಿರುವುದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಹೆಚ್ಚಲು ಕಾರಣವಾಗಿರಬಹುದು. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಡೀಸೆಲ್ ಬಳಕೆ ಶೇ. 3ರಷ್ಟು ಕಡಿಮೆ ಆಗಿದೆಯಾದರೂ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ. 2.5ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.

ಕಾರುಗಳ ಮಾರಾಟದಲ್ಲಿ ಹೊಸ ದಾಖಲೆ

ಹಬ್ಬದ ಸೀಸನ್ ಶುರುವಾದ ಸೆಪ್ಟೆಂಬರ್ ತಿಂಗಳಲ್ಲಿ ವಾಹನಗಳ ಮಾರಾಟದಲ್ಲಿ ಭರ್ಜರಿ ಏರಿಕೆ ಆಗಿದೆ. ಅದರಲ್ಲೂ ಪ್ರಯಾಣಿಕ ವಾಹನಗಳಂತೂ ಬಿಸಿದೋಸೆಯಂತೆ ಸೇಲ್ ಆಗಿವೆ. ಸೆಪ್ಟೆಂಬರ್ 2023ರಲ್ಲಿ 3,63,000 ಪ್ಯಾಸಂಜರ್ ವಾಹನಗಳು ಮಾರಾಟ ಆಗಿವೆ. ಆಗಸ್ಟ್ ತಿಂಗಳಲ್ಲಿ 3,59,648 ವಾಹನಗಳು ಸೇಲ್ ಆಗಿದ್ದವು.

ಇದನ್ನೂ ಓದಿ: ಭಾರತದಲ್ಲಿ ಎಚ್​ಪಿಯಿಂದ ಗೂಗಲ್ ಕ್ರೋಮ್​ಬುಕ್​ಗಳ ತಯಾರಿಕೆ; ಬಹಳ ಕಡಿಮೆಬೆಲೆಗೆ ಸಿಗಲಿವೆ ಲ್ಯಾಪ್​ಟಾಪ್

ಪ್ಯಾಸಂಜರ್ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಹಿಡಿತ ಅರ್ಧದಷ್ಟಿದೆ. ಆದರೆ, ಸೆಪ್ಟೆಂಬರ್​ನಲ್ಲಿ ವಾಹನ ಮಾರಾಟದಲ್ಲಿ ಗಣನೀಯ ಹೆಚ್ಚಳ ಕಂಡಿರುವುದು ಟೊಯೊಟಾ, ಮಹೀಂದ್ರ, ಹೊಂಡಾ, ಎಂಜಿ ಮೋಟಾರ್​ನ ಕಾರುಗಳು.

ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಕಂಪನಿಗಳು ಪ್ಯಾಂಜರ್ ವಾಹನಗಳ ಮಾರಾಟದಲ್ಲಿ ಮೊದಲ ಮೂರು ಸ್ಥಾನ ಉಳಿಸಿಕೊಂಡಿವೆ.

ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಹೆಚ್ಚಳ

ವಾಹನ ಮಾರಾಟದಲ್ಲಿ ಹೆಚ್ಚಳವಾಗುತ್ತಿರುವಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯಲ್ಲೂ ಹೆಚ್ಚಳವಾಗಿದೆ. ಆಗಸ್ಟ್​ಗೆ ಹೋಲಿಸಿದರೆ ಡೀಸೆಲ್ ಬಳಕೆ ಸೆಪ್ಟೆಂಬರ್​ನಲ್ಲಿ ಕಡಿಮೆ ಆಗಿದೆಯಾದರೂ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಳಕೆ ಹೆಚ್ಚಿದೆ. ಆದರೆ, ಪೆಟ್ರೋಲ್ ಬಳಕೆ ಎರಡೂ ಮಾನದಂಡಗಳಲ್ಲೂ ಹೆಚ್ಚಾಗಿದೆ.

ಇದನ್ನೂ ಓದಿ: RBI MPC Meet October 2023: ಅಕ್ಟೋಬರ್ 4ರಿಂದ ಮೂರು ದಿನ ಆರ್​ಬಿಐ ಎಂಪಿಸಿ ಸಭೆ; ಬಡ್ಡಿದರ ನಿರ್ಧಾರ ಶುಕ್ರವಾರ ಪ್ರಕಟ

ಟ್ರಕ್​ಗಳು ಮತ್ತು ಟ್ರಾಕ್ಟರ್​ಗಳಿಂದ ಡೀಸೆಲ್ ಬಳಕೆ ಹೆಚ್ಚುತ್ತದೆ. ಮುಂಗಾರು ಋತುವಿನಲ್ಲಿ ಕೃಷಿ ವಲಯದಲ್ಲಿ ಟ್ರಾಕ್ಟರ್ ಬಳಕೆ ಕಡಿಮೆ ಇರುತ್ತದೆ. ಹೀಗಾಗಿ, ಡೀಸೆಲ್ ಬಳಕೆ ಈ ಅವಧಿಯಲ್ಲಿ ತುಸು ಕೆಳಗೆಯೇ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ