ಭಾರತದಲ್ಲಿ ಎಚ್ಪಿಯಿಂದ ಗೂಗಲ್ ಕ್ರೋಮ್ಬುಕ್ಗಳ ತಯಾರಿಕೆ; ಬಹಳ ಕಡಿಮೆಬೆಲೆಗೆ ಸಿಗಲಿವೆ ಲ್ಯಾಪ್ಟಾಪ್
HP Manufacturing Google Chromebooks in India: ಭಾರತದಲ್ಲಿ ಗೂಗಲ್ ಕ್ರೋಮ್ಬುಕ್ ಲ್ಯಾಪ್ಟಾಪ್ಗಳು ಸಿದ್ಧಗೊಳ್ಳುತ್ತಿದ್ದು, 15,500 ರೂನಿಂದ ಅದರ ಬೆಲೆ ಆರಂಭವಾಗುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಕ್ರೋಮ್ಬುಕ್ಗಳನ್ನು ಎಚ್ಪಿ ಸಂಸ್ಥೆ ತನ್ನ ಚೆನ್ನೈ ಘಟಕದಲ್ಲಿ ತಯಾರಿಸಲು ಆರಂಭಿಸಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಈ ಸಂಬಂಧ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ಭಾರತದಲ್ಲಿ ಗೂಗಲ್ನ ಕ್ರೋಮ್ಬುಕ್ ಲ್ಯಾಪ್ಟಾಪ್ಗಳು ತಯಾರಾಗುತ್ತಿರುವುದು ಇದೇ ಮೊದಲು.
ನವದೆಹಲಿ, ಅಕ್ಟೋಬರ್ 3: ಗೂಗಲ್ ಕಂಪನಿಯ ಕ್ರೋಮ್ಬುಕ್ ಲ್ಯಾಪ್ಟಾಪ್ಗಳು (Google chromebook laptops) ಭಾರತದಲ್ಲೇ ತಯಾರಾಗುತ್ತಿವೆ. ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಕೇಂದ್ರ ತಂದಿರುವ ಪಿಎಲ್ಐ ಸ್ಕೀಮ್ ಅಡಿಯಲ್ಲಿ ಈ ಲ್ಯಾಪ್ಟಾಪ್ಗಳನ್ನು ತಯಾರಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಹೆಚ್ಪಿ ಸಂಸ್ಥೆ ಜೊತೆ ಗೂಗಲ್ ಒಪ್ಪಂದ (google and hp partnership) ಮಾಡಿಕೊಂಡಿದೆ. ಚೆನ್ನೈನಲ್ಲಿರುವ ಎಚ್ಪಿ ಘಟಕದಲ್ಲಿ ಗೂಗಲ್ನ ಕ್ರೋಮ್ಬುಕ್ ಲ್ಯಾಪ್ಟಾಪ್ಗಳು ಸಿದ್ಧಗೊಳ್ಳಲಿವೆ. ಇದರೊಂದಿಗೆ ಭಾರತದಲ್ಲಿ ಕ್ರೋಮ್ಬುಕ್ ಲ್ಯಾಪ್ಟಾಪ್ಗಳು ಬಹಳ ಕಡಿಮೆ ಬೆಲೆಗೆ ಸಿಗಲಿವೆ.
‘ಭಾರತದಲ್ಲಿ ಕ್ರೋಮ್ಬುಕ್ಗಳನ್ನು ತಯಾರಿಸಲು ಎಚ್ಪಿ ಜೊತೆ ನಾವು ಪಾಲುದಾರಿಕೆಯಲ್ಲಿದ್ದೇವೆ. ಭಾರತದಲ್ಲಿ ನಿರ್ಮಾಣವಾಗಿರುವ ಮೊದಲ ಕ್ರೋಮ್ಬುಕ್ಗಳಿವು. ಭಾರತೀಯ ವಿದ್ಯಾರ್ಥಿಗಳಿಗೆ ಬಹಳ ಅಗ್ಗದ ಮತ್ತು ಸುರಕ್ಷಿತ ಕಂಟ್ಯೂಟಿಂಗ್ ಸಾಧನೆ ಸಿಗುತ್ತದೆ,’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
We’re partnering with HP to manufacture Chromebooks in India – These are the first Chromebooks to be made in India and will make it easier for Indian students to have access to affordable and secure computing. https://t.co/PuzZnck1wo
— Sundar Pichai (@sundarpichai) October 2, 2023
ವರದಿಗಳ ಪ್ರಕಾರ ಭಾರತದಲ್ಲಿ ತಯಾರಾಗುತ್ತಿರುವ ಗೂಗಲ್ ಕ್ರೋಮ್ಬುಕ್ ಲ್ಯಾಪ್ಟಾಪ್ ಬೆಲೆ 15,990 ರೂನಿಂದ ಶುರುವಾಗುತ್ತದೆ. ಭಾರತದ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಡೆಲ್, ಏಸಸ್ ಮೊದಲಾದ ಕಂಪನಿಗಳೊಂದಿಗೆ ಗೂಗಲ್ ಪೈಪೋಟಿ ನಡೆಸಲು ಕ್ರೋಮ್ಬುಕ್ ಸಹಾಯವಾಗಬಹುದು.
ಗೂಗಲ್ನ ಕ್ರೋಮ್ಬುಕ್ಗಳು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ವಿಶ್ವಾದ್ಯಂತ 5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕ್ರೋಮ್ಬುಕ್ ಲ್ಯಾಪ್ಟಾಪ್ಗಳನ್ನು ಬಳಸುತ್ತಾರೆ.
ಇದನ್ನೂ ಓದಿ: ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್ಗೆ ನಾಮಿನಿ ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಎಚ್ಪಿ ಹೆಜ್ಜೆಗುರುತು ಇನ್ನೂ ದಟ್ಟ
ಹ್ಯೂಲೆಟ್ ಪ್ಯಾಕಾರ್ಡ್ (ಎಚ್ಪಿ) ಮೂರು ವರ್ಷಗಳಿಂದ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ತಯಾರಿಸುವ ಕೆಲಸ ಮಾಡುತ್ತಿದೆ. ಇಲೈಟ್ ಬುಕ್ಸ್, ಪ್ರೋಬುಕ್ಸ್, ಜಿ8 ಸೀರೀಸ್ ನೋಟ್ಬುಕ್ ಸೇರಿದಂತೆ ವಿವಿಧ ರೀತಿಯ ಲ್ಯಾಪ್ಟಾಪ್ಗಳನ್ನು ಭಾರತದಲ್ಲಿ ತಯಾರಿಸುತ್ತಿದೆ. ವಿವಿಧ ಡೆಸ್ಕ್ಟಾಪ್ ಕಂಪ್ಯೂಟರ್ಗಳನ್ನೂ (ಪಿಸಿ) ಅದು ಭಾರತದಲ್ಲಿ ತಯಾರಿಸುತ್ತಿದೆ. ಚೆನ್ನೈನಲ್ಲಿರುವ ತನ್ನ ಫ್ಲೆಕ್ಸ್ ಫೆಸಿಲಿಟಿಯಲ್ಲಿ ಅದರ ಘಟಕಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ