ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್​ಗೆ ನಾಮಿನಿ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Know How To Nominate For Mutual Funds: ಮ್ಯುಚುವಲ್ ಫಂಡ್ ಇರುವ ಡೀಮ್ಯಾಟ್ ಖಾತೆಗೆ ನಾಮಿನೇಶನ್ ಡಿಕ್ಲೇರ್ ಮಾಡಲು ಜನವರಿ 1ರವರೆಗೆ ಸೆಬಿ ಕಾಲಾವಕಾಶ ವಿಸ್ತರಿಸಿದೆ. ಗಡುವಿನೊಳಗೆ ಆ ಕಾರ್ಯ ಮಾಡದೇ ಹೋದರೆ ನಿಮ್ಮ ಮ್ಯುಚುವಲ್ ಫಂಡ್ ಅಥವಾ ಷೇರು ಆಸ್ತಿ ಸ್ಥಗಿತಗೊಳ್ಳಬಹುದು. ನೀವು ನಾಮಿನಿ ಹೆಸರಿಸಲು ಇಚ್ಛಿಸದಿದ್ದರೆ ಅದನ್ನೂ ಕೂಡ ಘೋಷಣೆ ಮಾಡಿ ಖಚಿಪಡಿಸಬೇಕು. ನಾಮಿನೇಶನ್ ಹೇಗೆ ಅಪ್​ಡೇಟ್ ಮಾಡುವುದು ಎಂಬ ವಿವರ ಈ ಲೇಖನದಲ್ಲಿದೆ.

ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್​ಗೆ ನಾಮಿನಿ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಮ್ಯುಚುವಲ್ ಫಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2023 | 10:56 AM

ಡೀಮ್ಯಾಟ್ ಅಕೌಂಟ್ ಹೊಂದಿರುವವರು ನಾಮಿನಿ ಘೋಷಣೆ ಘೋಷಿಸಲು (nomination) ಸೆಪ್ಟೆಂಬರ್ 30ಕ್ಕೆ ಇದ್ದ ಗಡುವನ್ನು (deadline) ಜನವರಿ 1ಕ್ಕೆ ವಿಸ್ತರಿಸಲಾಗಿದೆ. ಈ ಡೆಡ್​ಲೈನ್​ನೊಳಗೆ ನಾಮಿನಿಯನ್ನು ಘೋಷಿಸುವುದು ಕಡ್ಡಾಯ. ಅಥವಾ ನಾಮಿನಿ ಬೇಡ ಎಂದಾದರೆ ಘೋಷಣಾ ಪತ್ರದ ಮೂಲಕ ಅದನ್ನು ಸ್ಪಷ್ಟಪಡಿಸಬೇಕು ಎಂದು ಸೆಬಿ ಹೇಳಿದೆ. ನಾಮಿನಿ ಘೋಷಣೆಯನ್ನು ಸೆಬಿ ಕಳೆದ ವರ್ಷ, 2022ರ ಜೂನ್ 15ರಂದೇ ಹೊರಡಿಸಿದ ಸುತ್ತೋಲೆಯಲ್ಲಿ (circular) ತಿಳಿಸಿದೆ. ಒಂದು ವೇಳೆ ನಾಮಿನಿ ಸೇರಿಸಿಲ್ಲವಾದರೆ ನಿಮ್ಮ ಫೋಲಿಯೋಗಳನ್ನು (ಷೇರು ಮತ್ತಿತರ ಹಣಕಾಸು ಆಸ್ತಿ) ಫ್ರೀಜ್ ಮಾಡಲಾಗುತ್ತದೆ.

ಡೀಮ್ಯಾಟ್ ಖಾತೆಗೆ ನಾಮಿನೇಟ್ ಮಾಡುವುದು ಹೇಗೆ? ಇಲ್ಲಿದೆ ಕ್ರಮಗಳು

ಆಫ್​ಲೈನ್ ಮತ್ತು ಆನ್​ಲೈನ್ ಎರಡೂ ಮಾರ್ಗಗಳಲ್ಲಿ ಡೀಮ್ಯಾಟ್ ಖಾತೆಗೆ ನಾಮಿನಿ ಅಪ್​ಡೇಟ್ ಮಾಡಬಹುದು.

ಆಫ್​ಲೈನ್​ನಲ್ಲಿ ಮಾಡುವುದು: ನಿಮ್ಮ ಡೀಮ್ಯಾಟ್ ಅಕೌಂಟ್ ಇರುವ ಡೆಪಾಸಿಟರಿ ಪಾರ್ಟಿಸಿಪೆಂಟ್ ಏಜೆನ್ಸಿಗಳ ಕಚೇರಿಗೆ (ಡಿಪಿ ಆಫೀಸ್) ಹೋಗಿ ಅಲ್ಲಿ ನಾಮಿನೇಶನ್ ಅರ್ಜಿ ಸಲ್ಲಿಸುವ ಮೂಲಕ ನಾಮಿನಿ ಅಪ್​ಡೇಟ್ ಮಾಡಬಹುದು.

ಇದನ್ನೂ ಓದಿ: ಒಂದು ನೋಟು ಮುದ್ರಿಸಲು 4 ರೂ; 2,000 ರೂಗಳ 370 ಕೋಟಿ ನೋಟುಗಳನ್ನು ಪಡೆಯಲು ಸರಕಾರದಿಂದ 1,300 ಕೋಟಿ ರೂ ವೆಚ್ಚ

ಆನ್​ಲೈನ್​ನಲ್ಲಿ ನಾಮಿನೇಶನ್ ಸಲ್ಲಿಸುವ ಕ್ರಮಗಳು:

  • ಎನ್​ಎಸ್​ಡಿಎಲ್ ಪೋರ್ಟಲ್​ಗೆ ಹೋಗಿ: nsdl.co.in
  • ಹೋಮ್ ಪೇಜ್​ನಲ್ಲಿ ‘ನಾಮಿನೇಟ್ ಆನ್ಲೈನ್’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಡಿಪಿ ಐಡಿ, ಕ್ಲೈಂಟ್ ಐಡಿ, ಪ್ಯಾನ್ ನಂಬರ್ ನಮೂದಿಸಿ. ಬಳಿಕ ಒಟಿಪಿ ಪಡೆದು ಅದನ್ನೂ ಸಲ್ಲಿಸಿ.
  • ನಾಮಿನೇಟ್ ಮಾಡುತ್ತೇವೆ ಮತ್ತು ನಾಮಿನೇಟ್ ಮಾಡುವುದಿಲ್ಲ ಎಂಬ ಎರಡು ಆಯ್ಕೆಗಳಿರುತ್ತವೆ.
  • ನಾಮಿನೇಟ್ ಮಾಡುವುದಾದರೆ ಆ ಆಯ್ಕೆ ಆರಿಸಿಕೊಂಡರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಾಮಿನಿ ವಿವರ ಭರ್ತಿ ಮಾಡಿ.
  • ಇಸೈನ್ ಸರ್ವಿಸ್ ಪ್ರೊವೈಡರ್​ನ ಪೇಜ್ ಮೇಲೆ ಚೆಕ್ ಬಾಕ್ಸ್ ಅನ್ನು ಎನೇಬಲ್ ಮಾಡಿ. ಬಳಿಕ ಪ್ರೊಸೀಡ್ ಕ್ಲಿಕ್ ಮಾಡಿ.

ಇದಾದ ಬಳಿಕ ಒಟಿಪಿ ಬರುತ್ತದೆ. ಆ ನಂಬರ್ ಹಾಕಿದ ಬಳಿಕ ಡೆಪಾಸಿಟರಿ ಪಾರ್ಟಿಸಿಪೆಂಟ್ ಏಜೆನ್ಸಿಯಿಂದ ದೃಢೀಕರಣ ಬರಬಹುದು. ಅದಾದರೆ ನಿಮ್ಮ ಡೀಮ್ಯಾಟ್ ಅಕೌಂಟ್​ಗೆ ನಾಮಿನೇಶನ್ ಅಪ್​ಡೇಟ್ ಮಾಡಿದಂತಾಗುತ್ತದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನಿ ಹೆಸರಿಸಲು ಡೆಡ್​ಲೈನ್ ಜನವರಿ 1ಕ್ಕೆ ವಿಸ್ತರಣೆ

ನಾಮಿನೇಶನ್ ವಿಚಾರವಾಗಿ ಇತರ ಕೆಲ ಮಾಹಿತಿ

  • ಖಾತೆದಾರ ಒಂದು ವೇಳೆ ಮೃತಪಟ್ಟಲ್ಲಿ ಅವರ ಆಸ್ತಿಗಳಿಗೆ ವಾರಸುದಾರರು ಇರಬೇಕು. ಯಾರು ಆ ವಾರಸುದಾರರು ಎಂದು ತಿಳಿಸುವುದೇ ನಾಮಿನೇಶನ್.
  • ಡೀಮ್ಯಾಟ್ ಅಕೌಂಟ್​ಗೆ ನಾವು ಗರಿಷ್ಠ 3 ಮಂದಿಯನ್ನು ನಾಮಿನಿಗಳಾಗಿ ಹೆಸರಿಸಬಹುದು.
  • ನೀವು ಒಮ್ಮೆ ನಾಮಿನಿ ಹೆಸರಿಸಿದಾಕ್ಷಣ ಅದೇ ಅಂತಿಮ ಎಂದೇನಿಲ್ಲ. ಯಾವುದೇ ಸಮಯದಲ್ಲೂ ಖಾತೆದಾರ ತನ್ನ ನಾಮಿನಿ ಬದಲಿಸಬಹುದು.
  • ಪ್ರಾಪ್ತ ವಯಸ್ಸಿನ ಡೀಮ್ಯಾಟ್ ಖಾತೆದಾರರು ಮಾತ್ರವೇ ನಾಮಿನಿಯನ್ನು ಘೋಷಿಸಬಹುದು. ಅಪ್ರಾಪ್ತರಿಗೆ ಈ ಅವಕಾಶ ಇರುವುದಿಲ್ಲ. ಆದರೆ, ಅಪ್ರಾಪ್ತರು ನಾಮಿನಿಗಳಾಗಬಹುದು.
  • ಟ್ರಸ್ಟ್, ಕಾರ್ಪೊರೇಟ್ ಕಂಪನಿ, ಪಾರ್ಟ್ನರ್​ಶಿಪ್ ಕಂಪನಿ ಇತ್ಯಾದಿಗಳು ನಾಮಿನಿಗಳನ್ನು ಘೋಷಿಸುವಂತಿಲ್ಲ. ಅಥವಾ ಇವರನ್ನೂ ನಾಮಿನಿಗಳಾಗಿ ಮಾಡುವಂತಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!