ವೇದಾಂತವನ್ನು 6 ಕಂಪನಿಗಳಾಗಿ ವಿಭಜನೆ ಮಾಡಲು ನಿರ್ಧಾರ; ಇದರ ಕ್ರಮ ಹೇಗೆ?

Vedanta Demerger: ವೇದಾಂತ ರಿಸೋರ್ಸಸ್ ಲಿ ಸಂಸ್ಥೆ ತನ್ನ ವೇದಾಂತ ಲಿಯ ಡೀಮರ್ಜ್ ಮಾಡಲಿದ್ದು, ಆರು ಕಂಪನಿಗಳು ಹೊರಹೊಮ್ಮಲಿವೆ. ವೇದಾಂತ ಅಲೂಮಿನಿಯಮ್, ವೇದಾಂತ ಆಯಿಲ್ ಅಂಡ್ ಗ್ಯಾಸ್, ವೇದಾಂತ ಪವರ್, ವೇದಾಂತ ಸ್ಟೀಲ್ ಅಂಡ್ ಫೆರಸ್ ಮೆಟೀರಿಯಲ್ಸ್, ವೇದಾಂತ ಬೇಸ್ ಮೆಟಲ್ಸ್ ಮತ್ತು ವೇದಾಂತ ಲಿಮಿಟೆಡ್ ಎಂಬ ಕಂಪನಿಗಳು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರಲಿವೆ. ಷೇರುಪೆಟೆಯಲ್ಲಿ ಇವು ಪ್ರತ್ಯೇಕವಾಗಿ ಲಿಸ್ಟ್ ಆಗಲಿವೆ.

ವೇದಾಂತವನ್ನು 6 ಕಂಪನಿಗಳಾಗಿ ವಿಭಜನೆ ಮಾಡಲು ನಿರ್ಧಾರ; ಇದರ ಕ್ರಮ ಹೇಗೆ?
ವೇದಾಂತ ಲಿಮಿಟೆಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2023 | 12:59 PM

ನವದೆಹಲಿ, ಅಕ್ಟೋಬರ್ 1: ಭಾರತದ ಅತಿದೊಡ್ಡ ಉದ್ಯಮಸಮೂಹಗಳಲ್ಲಿ ಒಂದಾದ ವೇದಾಂತ ಲಿ ಸಂಸ್ಥೆ (Vedanta Ltd) ಆರು ಪ್ರತ್ಯೇಕ ಕಂಪನಿಗಳಾಗಿ ವಿಭಜನೆ (demerger) ಹೊಂದಲು ನಿರ್ಧರಿಸಿದೆ. ವೇದಾಂತ ಲಿ ಸಂಸ್ಥೆಯಿಂದ ಐದು ಹೊಸ ಕಂಪನಿಗಳು ಪ್ರತ್ಯೇಕಗೊಳ್ಳಲಿವೆ. ತನ್ನ ಬೇರೆ ಬೇರೆ ವಿಭಾಗಗಳನ್ನು ಪ್ರತ್ಯೇಕ ಕಂಪನಿಯಾಗಿ ಮಾಡಿ ವ್ಯವಹಾರ ವೃದ್ಧಿಸುವುದು ವೇದಾಂತ ರಿಸೋರ್ಸಸ್ ಲಿಮಿಟೆಡ್​ನ ಆಲೋಚನೆ. ವೇದಾಂತ ಲಿ ಸಂಸ್ಥೆ ಈಗಾಗಲೇ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿ. ಇದರಿಂದ ಡೀಮರ್ಜ್ ಆಗುವ ಇತರ ಐದು ಕಂಪನಿಗಳನ್ನೂ ಷೇರುಪೇಟೆಯಲ್ಲಿ ಲಿಸ್ಟ್ ಮಾಡಲು ಚಿಂತಿಸಲಾಗಿದೆ.

ವೇದಾಂತದ ಪ್ರಸ್ತಾವಿತ 6 ಕಂಪನಿಗಳು ಮತ್ತು ಸಿಇಒಗಳು

  1. ವೇದಾಂತ ಲಿಮಿಟೆಡ್
  2. ವೇದಾಂತ ಅಲೂಮಿನಿಯಮ್, ಸಿಇಒ ಜಾನ್ ಸ್ಲಾವನ್
  3. ವೇದಾಂತ ಆಯಿಲ್ ಅಂಡ್ ಗ್ಯಾಸ್, ಸಿಇಒ ಸ್ಟೀವ್ ಮೂರ್
  4. ವೇದಾಂತ ಪವರ್, ಸಿಇಒ ವಿಭವ್ ಅಗರ್ವಾಲ್
  5. ವೇದಾಂತ ಸ್ಟೀಲ್ ಅಂಡ್ ಫೆರಸ್ ಮೆಟೀರಿಯಲ್ಸ್, ಸಿಇಒ ನವೀನ್ ಜಾಜು
  6. ವೇದಾಂತ ಬೇಸ್ ಮೆಟಲ್ಸ್, ಸಿಇಒ ಕ್ರಿಸ್ ಗ್ರಿಫಿತ್

ಇದನ್ನೂ ಓದಿ: ಬೆಂಗಳೂರಲ್ಲಿ ಕಾರ್​ಪೂಲಿಂಗ್ ನಿಷೇಧಕ್ಕೆ ಸಾರಿಗೆ ಇಲಾಖೆ ಮುಂದು; 10,000 ರೂ ವರೆಗೆ ದಂಡ ವಿಧಿಸುವ ಸಾಧ್ಯತೆ

ತನ್ನ ವ್ಯವಹಾರಗಳನ್ನು ಸ್ವತಂತ್ರವಾಗಿ ಬೆಳೆಸುವ ಉದ್ದೇಶದಿಂದ ವೇದಾಂತ ರಿಸೋರ್ಸಸ್ ಲಿ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ವಿವಿಧ ರೇಟಿಂಗ್ ಸಂಸ್ಥೆಗಳು ವೇದಾಂತ ಬಗ್ಗೆ ಋಣಾತ್ಮಕವಾಗಿ ರೇಟಿಂಗ್ ಕೊಟ್ಟಿರುವ ಸಂದರ್ಭದಲ್ಲೇ ಡೀಮರ್ಜಿಂಗ್ ಮಾಡುವ ನಿರ್ಧಾರ ಹೊರಬಂದಿರುವುದು ಗಮನಾರ್ಹ.

ವೇದಾಂತ ಷೇರುದಾರರಿಗೆ ಸುಗ್ಗಿಯಾ?

ಡೀಮರ್ಜಿಂಗ್ ಪ್ರಸ್ತಾಪದ ಪ್ರಕಾರ, ವೇದಾಂತ ಲಿ ಸಂಸ್ಥೆಯ ಷೇರುಗಳನ್ನು ಆರು ಷೇರುಗಳಾಗಿ ವಿಭಜಿಸಲಾಗುತ್ತದೆ. ಈಗ ಅದರ ಷೇರುಬೆಲೆ 222 ರೂ ಇದೆ. ಆರು ಷೇರುಗಳಾಗಿ ವಿಭಜಿಸಿದರೆ ಪ್ರತೀ ಷೇರಿನ ಬೆಲೆ 37 ರೂ ಆಗುತ್ತದೆ. ಈಗಾಗಲೇ ಇರುವ ವೇದಾಂತದ ಷೇರುದಾರರಿಗೆ ಇತರ ಐದು ಸಂಸ್ಥೆಯ ಷೇರುಗಳು ಉಚಿತವಾಗಿ ಸಿಗುತ್ತದೆ. ಅಂತಿಮವಾಗಿ ಅವರ ಷೇರುಮೌಲ್ಯದಲ್ಲಿ ಏರುಪೇರಾಗುವುದಿಲ್ಲ. ಆದರೆ, ಆರು ಕಂಪನಿಗಳು ಉತ್ತಮ ಲಾಭ ಕಂಡರೆ ಷೇರುಬೆಲೆ ಏರುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಷೇರುದಾರರಿಗೆ ಲಾಭವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್​ಗೆ ನಾಮಿನಿ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಅನಿಲ್ ಅಗರ್ವಾಲ್ ಮಾಲಕತ್ವದ ವೇದಾಂತ ಲಿ ಸಂಸ್ಥೆಯ ವ್ಯವಹಾರಗಳು ಬಹುತೇಕ ಗಣಿಗಾರಿಕೆಗೆ ಸಂಬಂಧಿಸಿದವು. ಭೂಮಿಯಿಂದ ಜಿಂಕ್, ಅಲೂಮಿನಿಯಮ್ ಇತ್ಯಾದಿ ಖನಿಜಗಳನ್ನು ಹೆಕ್ಕಿ ತಯಾರಿಸುತ್ತದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಇತರ ಕೆಲ ದೇಶಗಳಲ್ಲೂ ಇದರ ಕಾರ್ಯಾಚರಣೆ ಇದೆ.

ಇದರ ಅಂಗಸಂಸ್ಥೆಯಾದ ಹಿಂದೂಸ್ತಾನ್ ಜಿಂಕ್ ವಿಶ್ವದಲ್ಲೇ ಅತಿದೊಡ್ಡ ಜಿಂಕ್ ಗಣಿಯನ್ನು ನಿರ್ವಹಿಸುತ್ತಿದೆ. ತಾಮ್ರದ ಉತ್ಪಾದನೆಯಲ್ಲಿ ವೇದಾಂತ ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದು. ಇದೀಗ ಸೆಮಿಕಂಡಕ್ಟರ್ ತಯಾರಿಕೆಗೆ ವೇದಾಂತ ಲಗ್ಗೆಹಾಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ