ಒಂದು ನೋಟು ಮುದ್ರಿಸಲು 4 ರೂ; 2,000 ರೂಗಳ 370 ಕೋಟಿ ನೋಟುಗಳನ್ನು ಪಡೆಯಲು ಸರಕಾರದಿಂದ 1,300 ಕೋಟಿ ರೂ ವೆಚ್ಚ

RBI Spends Rs 1,300 Cr For Rs 2,000 Notes: ಒಟ್ಟು 7.40 ಲಕ್ಷಕೋಟಿ ರೂ ಮೊತ್ತವೆನಿಸುವ 370 ಕೋಟಿಗೂ ಹೆಚ್ಚು ನೋಟುಗಳನ್ನು ಪಡೆಯಲು ಸರ್ಕಾರ 1,300 ಕೋಟಿ ರೂ ಖರ್ಚು ಮಾಡಿರುವ ವಿಚಾರವನ್ನು ಆರ್​ಟಿಐ ಅಡಿಯಲ್ಲಿ ಆರ್​ಬಿಐ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. ಆರ್​ಬಿಐ ಮೂರು ಹಂತಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳನ್ನು ಪಡೆದಿದೆ. 2016-17ರಲ್ಲಿ 350.4 ಕೋಟಿ ನೋಟುಗಳು, 2017-18ರಲ್ಲಿ 15.1 ಕೋಟಿ ನೋಟುಗಳು, ಹಾಗು 2018-19ರಲ್ಲಿ 4.7 ಕೋಟಿ ನೋಟುಗಳನ್ನು ಆರ್​ಬಿಐ ಪಡೆದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ ಸಂಸ್ಥೆ ಈ ನೋಟುಗಳನ್ನು ಆರ್​ಬಿಐಗೆ ಮುದ್ರಿಸಿ ಕೊಟ್ಟಿತ್ತು.

ಒಂದು ನೋಟು ಮುದ್ರಿಸಲು 4 ರೂ; 2,000 ರೂಗಳ 370 ಕೋಟಿ ನೋಟುಗಳನ್ನು ಪಡೆಯಲು ಸರಕಾರದಿಂದ 1,300 ಕೋಟಿ ರೂ ವೆಚ್ಚ
ಆರ್​ಬಿಐ
Follow us
|

Updated on: Sep 29, 2023 | 6:18 PM

ನವದೆಹಲಿ, ಸೆಪ್ಟೆಂಬರ್ 29: ಸರ್ಕಾರ 2016ರಲ್ಲಿ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ 2,000 ರೂ ನೋಟುಗಳನ್ನು ಮುದ್ರಿಸಿತ್ತು. ಈಗ ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳಿಗೆ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬ ಪ್ರಶ್ನೆಗೆ ಆರ್​ಬಿಐ ಉತ್ತರ ನೀಡಿದೆ. ಒಟ್ಟು 7.40 ಲಕ್ಷಕೋಟಿ ರೂ ಮೊತ್ತವೆನಿಸುವ 370 ಕೋಟಿಗೂ ಹೆಚ್ಚು ನೋಟುಗಳನ್ನು ಪಡೆಯಲು ಸರ್ಕಾರ 1,300 ಕೋಟಿ ರೂ ಖರ್ಚು ಮಾಡಿರುವ ವಿಚಾರವನ್ನು ಆರ್​ಟಿಐ ಅಡಿಯಲ್ಲಿ ಆರ್​ಬಿಐ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. ದಿ ಹಿಂದೂ ಬಿಸಿನಿಸ್​ಲೈನ್ ಪತ್ರಿಕೆ ಪ್ರಕಟಿಸಿದ ವರದಿಯಲ್ಲಿ ಇದರ ವಿವರಗಳಿವೆ.

ಆರ್​ಬಿಐ ಮೂರು ಹಂತಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳನ್ನು ಪಡೆದಿದೆ. 2016-17ರಲ್ಲಿ 350.4 ಕೋಟಿ ನೋಟುಗಳು, 2017-18ರಲ್ಲಿ 15.1 ಕೋಟಿ ನೋಟುಗಳು, ಹಾಗು 2018-19ರಲ್ಲಿ 4.7 ಕೋಟಿ ನೋಟುಗಳನ್ನು ಆರ್​ಬಿಐ ಪಡೆದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ ಸಂಸ್ಥೆ ಈ ನೋಟುಗಳನ್ನು ಆರ್​ಬಿಐಗೆ ಮುದ್ರಿಸಿ ಕೊಟ್ಟಿತ್ತು.

ಇದನ್ನೂ ಓದಿ: ಎರಡು ವರ್ಷವಾದರೂ ಎಫ್​ಟಿಎಸ್​ಇ​ ಇಂಡೆಕ್ಸ್ ಪಟ್ಟಿಗೆ ಸೇರ್ಪಡೆಯಾಗದ ಭಾರತೀಯ ಬಾಂಡ್​ಗಳು; ಏನಿದರ ಎಫೆಕ್ಟ್?

ಸಾವಿರ ನೋಟುಗಳ ಮುದ್ರಣಕ್ಕೆ 4,180 ರೂ ಖರ್ಚು?

ನೋಟು ಮುದ್ರಣ ಸಂಸ್ಥೆಯು 2,000 ರೂ ಮುಖಬೆಲೆಯ ಒಂದು ಸಾವಿರ ನೋಟುಗಳನ್ನು 4,180 ರೂಗಳಿಗೆ ಆರ್​ಬಿಐಗೆ ಮುದ್ರಿಸಿ ಕೊಟ್ಟಿದೆ. 2016-17ರಲ್ಲಿ ಒಂದು ಸಾವಿರ ನೋಟುಗಳಿಗೆ 3,540 ರೂ ಬೆಲೆಯಂತೆ ಆರ್​ಬಿಐಗೆ 350.4 ಕೋಟಿ ನೋಟುಗಳನ್ನು ಕೊಟ್ಟಿದೆ. 2017-18 ಮತ್ತು 2018-19ರಲ್ಲಿ ಕ್ರಮವಾಗಿ 4,180 ರೂ ಮತ್ತು 3,530 ರೂ ಬೆಲೆಯಲ್ಲಿ ಸಾವಿರ ನೋಟುಗಳನ್ನು ಮುದ್ರಿಸಿ ಕೊಡಲಾಗಿದೆ. ಅಂದರೆ ಸುಮಾರು 3.50 ರೂನಿಂದ 4.18 ರೂ ಬೆಲೆಗೆ ಒಂದು ನೋಟನ್ನು ಪಡೆಯಲಾಗಿದೆ.

ಈಗೆಷ್ಟಿದೆ 2,000 ರೂ ನೋಟುಗಳು?

ಆರ್​ಬಿಐನಿಂದ ಬಿಡುಗಡೆ ಆಗಿದ್ದ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೊತ್ತ 7.40 ಲಕ್ಷ ಕೋಟಿ ರೂಗೂ ಹೆಚ್ಚು ಇತ್ತು. ಕ್ರಮೇಣವಾಗಿ ನೋಟುಗಳನ್ನು ಚಲಾವಣೆಯಿಂದ ಆರ್​ಬಿಐ ಹಿಂಪಡೆದುಕೊಳ್ಳುತ್ತಾ ಹೋಗಿತ್ತು. 2023ರ ಮಾರ್ಚ್ ತಿಂಗಳಲ್ಲಿ 3.62 ಲಕ್ಷ ಕೋಟಿ ರೂ ಮೊತ್ತದ 2,000 ರೂ ನೋಟುಗಳು ಚಲಾವಣೆಯಲ್ಲಿದ್ದವು.

ಇದನ್ನೂ ಓದಿ: ಕಾಲೇಜಲ್ಲಿ ಸಂಜೆ ಬ್ಯಾಚ್ ಮಾಡಿದ್ರೆ ಯಾರಿಗೆ ಲಾಭ?; ಷೇರುಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅವಧಿ ವಿಸ್ತರಿಸುವ ಪ್ರಸ್ತಾಪಕ್ಕೆ ವ್ಯಂಗ್ಯ

ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಮೇ ತಿಂಗಳಲ್ಲಿ ಪ್ರಕಟಿಸಿದ ಬಳಿಕ ಶೇ. 93ರಷ್ಟು ನೋಟುಗಳು ಆರ್​ಬಿಐಗೆ ಹಿಂದಿರುಗಿವೆ. ಈ ನೋಟುಗಳನ್ನು ಮರಳಿಸಲು ಆರ್​ಬಿಐ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಇದನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ