ಎರಡು ವರ್ಷವಾದರೂ ಎಫ್ಟಿಎಸ್ಇ ಇಂಡೆಕ್ಸ್ ಪಟ್ಟಿಗೆ ಸೇರ್ಪಡೆಯಾಗದ ಭಾರತೀಯ ಬಾಂಡ್ಗಳು; ಏನಿದರ ಎಫೆಕ್ಟ್?
FTSE and Indian Govt Bonds: ಭಾರತೀಯ ಬಾಂಡ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಸುಧಾರಣೆ ಆಗದ ಹಿನ್ನೆಲೆಯಲ್ಲಿ ತನ್ನ ಇಂಡೆಕ್ಸ್ಗೆ ಸೇರ್ಪಡೆ ಮಾಡುವ ನಿರ್ಧಾರವನ್ನು ಸದ್ಯಕ್ಕೆ ಮುಂದಕ್ಕೆ ಹಾಕಿದೆ ಎಫ್ಟಿಎಸ್ಇ. ಆದರೆ, ಎಫ್ಟಿಎಸ್ಇಯ ವಾಚ್ಲಿಸ್ಟ್ನಲ್ಲಿ ಭಾರತದ ಬಾಂಡ್ಗಳು ಇರಲಿವೆ. ಅಂದರೆ, ಮುಂದಿನ ದಿನಗಳಲ್ಲಿ ಭಾರತೀಯ ಬಾಂಡ್ ಮಾರುಕಟ್ಟೆ ಬಗ್ಗೆ ಎಫ್ಟಿಎಸ್ಇಗೆ ವಿಶ್ವಾಸ ಮೂಡಿದರೆ ಅದರ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್ಗೆ ಭಾರತ ಸರ್ಕಾರದ ಬಾಂಡ್ಗಳನ್ನು ಒಳಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ.
ನವದೆಹಲಿ, ಸೆಪ್ಟೆಂಬರ್ 29: ಜೆಪಿ ಮಾರ್ಗನ್ ಚೇಸ್ ಸಂಸ್ಥೆ ಮುಂದಿನ ವರ್ಷ ಭಾರತೀಯ ಬಾಂಡ್ಗಳನ್ನು ತನ್ನ ಎಮರ್ಜಿಂಗ್ ಮಾರ್ಕೆಟ್ ಇಂಡೆಕ್ಸ್ನಲ್ಲಿ ಸೇರಿಸಿಕೊಳ್ಳುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮತ್ತೊಂದು ಪ್ರಮುಖ ಬಾಂಡ್ ಎಕ್ಸ್ಚೇಂಜ್ ಮಾರುಕಟ್ಟೆಯಾದ ಎಫ್ಟಿಎಸ್ಇಯಿಂದ (FTSE Russel) ನಿರಾಸೆಯ ಸುದ್ದಿ ಬಂದಿದೆ. ಎಫ್ಟಿಎಸ್ಇ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್ನಲ್ಲಿ ಭಾರತದ ಬಾಂಡ್ಗಳನ್ನು ಒಳಗೊಳ್ಳುವ ಕಾಲ ಸದ್ಯಕ್ಕೆ ಕೂಡಿ ಬಂದಿಲ್ಲ. ಭಾರತೀಯ ಬಾಂಡ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಸುಧಾರಣೆ ಆಗದ ಹಿನ್ನೆಲೆಯಲ್ಲಿ ತನ್ನ ಇಂಡೆಕ್ಸ್ಗೆ ಸೇರ್ಪಡೆ ಮಾಡುವ ನಿರ್ಧಾರವನ್ನು ಸದ್ಯಕ್ಕೆ ಮುಂದಕ್ಕೆ ಹಾಕಿದೆ ಎಫ್ಟಿಎಸ್ಇ. ಆದರೆ, ಎಫ್ಟಿಎಸ್ಇಯ ವಾಚ್ಲಿಸ್ಟ್ನಲ್ಲಿ ಭಾರತದ ಬಾಂಡ್ಗಳು ಇರಲಿವೆ. ಅಂದರೆ, ಮುಂದಿನ ದಿನಗಳಲ್ಲಿ ಭಾರತೀಯ ಬಾಂಡ್ ಮಾರುಕಟ್ಟೆ (Indian Bond Market) ಬಗ್ಗೆ ಎಫ್ಟಿಎಸ್ಇಗೆ ವಿಶ್ವಾಸ ಮೂಡಿದರೆ ಅದರ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್ಗೆ ಭಾರತ ಸರ್ಕಾರದ ಬಾಂಡ್ಗಳನ್ನು ಒಳಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ.
‘ಎಫ್ಟಿಎಸ್ಇ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್ನಲ್ಲಿ ಒಳಗೊಳ್ಳಲು ಪರಿಗಣನೆಗೆ ಭಾರತವನ್ನು ನಮ್ಮ ಗಮನದಲ್ಲಿ ಇರಿಸಿಕೊಂಡಿರುವುದನ್ನು ಮುಂದುವರಿಸಉತ್ತಿದ್ದೇವೆ’ ಎಂದು ಬ್ರಿಟನ್ ದೇಶದ ಎಫ್ಟಿಎಸ್ಇ ರಸಲ್ ಗ್ರೂಪ್ ಹೇಳಿದೆ.
2021ರಲ್ಲಿ ಫೈನಾನ್ಷಿಯಲ್ ಟೈಮ್ಸ್ ಸ್ಟಾಕ್ ಎಕ್ಸ್ಚೇಂಜ್ ಸಂಸ್ಥೆ ತನ್ನ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್ನಲ್ಲಿ ಒಳಗೊಳ್ಳಲು ಭಾರತವನ್ನು ತನ್ನ ವಾಚ್ಲಿಸ್ಟ್ಗೆ ಸೇರಿಸಿತ್ತು.
ಈ ಇಂಡೆಕ್ಸ್ನಲ್ಲಿ ಉದಯೋನ್ಮುಖ ಆರ್ಥಿಕತೆಯ ದೇಶಗಳ ಸರ್ಕಾರಿ ಬಾಂಡ್ಗಳನ್ನು ಒಳಗೊಳ್ಳಲಾಗುತ್ತದೆ. ಏಷ್ಯಾದಲ್ಲಿ ಚೀನಾ, ಫಿಲಿಪ್ಪೈನ್ಸ್ ಸೇರಿದಂತೆ ಐದಾರು ದೇಶಗಳ ಬಾಂಡ್ಗಳು ಈ ಸೂಚ್ಯಂಕದಲ್ಲಿವೆ.
ಎಫ್ಟಿಎಸ್ಇ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್ನಲ್ಲಿ ಇರುವ ದೇಶಗಳು
- ಬ್ರೆಜಿಲ್
- ಚಿಲಿ
- ಚೀನಾ
- ಕೊಲಂಬಿಯಾ
- ಹಂಗೆರಿ
- ಇಂಡೋನೇಷ್ಯಾ
- ಮೆಕ್ಸಿಕೋ
- ಮಲೇಷ್ಯಾ
- ಪೆರು
- ಫಿಲಿಪ್ಪೈನ್ಸ್
- ಪೋಲ್ಯಾಂಡ್
- ರೊಮೇನಿಯಾ
- ಸೌದಿ ಅರೇಬಿಯಾ
- ಸೌತ್ ಆಫ್ರಿಕಾ
- ಥಾಯ್ಲೆಂಡ್
- ಟರ್ಕಿ
ಇದನ್ನೂ ಓದಿ: ಚೀನಾದ ಎವರ್ಗ್ರಾಂಡೆ ದಯನೀಯ ಸ್ಥಿತಿ; ಛೇರ್ಮನ್ ಬಂಧನದ ಬೆನ್ನಲ್ಲೇ ಷೇರು ಸ್ಥಗಿತ; ಭಾರತದಿಂದ ಕಲಿಯಲಿ ಎಂದ ಉದಯ್ ಕೋಟಕ್
ಭಾರತದ ಬಾಂಡ್ ಮಾರುಕಟ್ಟೆಗೆ ನಿರಾಸೆಯಾ?
ಎಫ್ಟಿಎಸ್ಇಯ ಈ ಮೇಲಿನ ಇಂಡೆಕ್ಸ್ಗೆ ಇನ್ನೂ ಸೇರ್ಪಡೆ ಆಗದೇ ಇರುವುದು ಭಾರತಕ್ಕೆ ಹಿನ್ನಡೆಯಾ? ಎಫ್ಟಿಎಸ್ಇ ಇಂಡೆಕ್ಸ್ನಲ್ಲಿ ಒಳಗೊಳ್ಳುವ ನಿರೀಕ್ಷೆ ಸದ್ಯಕ್ಕೆ ಇರಲಿಲ್ಲ. ಹೀಗಾಗಿ, ಈ ಬೆಳವಣಿಗೆಯು ಭಾರತದ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಇದಕ್ಕಿಂತಲೂ ಜೆಪಿ ಮಾರ್ಗನ್ನ ಎಮರ್ಜಿಂಗ್ ಮಾರ್ಕೆಟ್ ಇಂಡೆಕ್ಸ್ನಲ್ಲಿ ಸೇರ್ಪಡೆಯಾಗುವುದು ಹೆಚ್ಚು ಬಂಡವಾಳ ಹರಿದುಬರಲು ಎಡೆ ಮಾಡಿಕೊಡುತ್ತದೆ ಎನ್ನುವ ಅಭಿಪ್ರಾಯಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ