ಆಟೋ ಚಾಲಕನ ಖಾತೆಗೆ 9,000 ಕೋಟಿ ರೂ ಹಾಕಿದ್ದಕ್ಕೆ ತಮಿಳುನಾಡು ಬ್ಯಾಂಕಿನ ಸಿಇಒ ರಾಜೀನಾಮೆ ಕೊಟ್ಟರಾ?

Tamilnad Mercantile Bank CEO Resigns: ಚೆನ್ನೈನ ತಮಿಳ್ನಾಡು ಮರ್ಕಂಟೈಲ್ ಬ್ಯಾಂಕ್ ವಾರದ ಹಿಂದೆ ಟ್ಯಾಕ್ಸಿ ಚಾಲಕನ ಖಾತೆಗೆ 9,000 ಕೋಟಿ ರೂ ವರ್ಗಾವಣೆ ಮಾಡಿತ್ತು. ಇದೀಗ ಬ್ಯಾಂಕ್​ನ ಎಂಡಿ ಮತ್ತು ಸಿಇಒ ರಾಜೀನಾಮೆ ನೀಡಿದ್ದಾರೆ. ಹಣ ವರ್ಗಾವಣೆ ವಿಚಾರವಾಗಿ ಅವರು ರಾಜೀನಾಮೆ ನೀಡಿದರಾ ಎಂಬುದು ಗೊತ್ತಿಲ್ಲ. ಆದರೆ, ರಾಜೀನಾಮೆ ನೀಡಲು ವೈಯಕ್ತಿಕ ಕಾರಣ ಉಲ್ಲೇಖಿಸಿದರೆಂದು ಹೇಳಲಾಗುತ್ತಿದೆ. ಆರ್​ಬಿಐ ಸೂಚನೆ ಬರುವವರೆಗೂ ಅವರು ಟಿಎಂಬಿಯ ಸಿಇಒ ಆಗಿ ಮುಂದುವರಿಯಲಿದ್ದಾರೆ.

ಆಟೋ ಚಾಲಕನ ಖಾತೆಗೆ 9,000 ಕೋಟಿ ರೂ ಹಾಕಿದ್ದಕ್ಕೆ ತಮಿಳುನಾಡು ಬ್ಯಾಂಕಿನ ಸಿಇಒ ರಾಜೀನಾಮೆ ಕೊಟ್ಟರಾ?
ತಮಿಳುನಾಡು ಮರ್ಕಂಟೈಲ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2023 | 2:55 PM

ಚೆನ್ನೈ, ಸೆಪ್ಟೆಂಬರ್ 29: ತೂತ್ತುಕುಡಿ ಮೂಲದ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್​ನ (TMB- Tamilnad Mercantile Bank) ಸಿಇಒ ಮತ್ತು ಎಂಡಿ ಎಸ್ ಕೃಷ್ಣನ್ ರಾಜೀನಾಮೆ ನೀಡಿದ್ದಾರೆ. ಒಂದು ವಾರದ ಹಿಂದಷ್ಟೇ ಈ ಬ್ಯಾಂಕ್​ನಿಂದ 9,000 ಕೋಟಿ ರೂ ಹಣ ಟ್ಯಾಕ್ಸಿ ಚಾಲಕನ ಖಾತೆಗೆ ವರ್ಗಾವಣೆ ಆದ ಸುದ್ದಿ ದೇಶಾದ್ಯಂತ ವೈರಲ್ ಆಗಿತ್ತು. ಆ ಕಾರಣಕ್ಕೆ ಸಿಇಒ ರಾಜೀನಾಮೆ ನೀಡಿದರಾ ಎಂಬುದು ಗೊತ್ತಿಲ್ಲ. ಆದರೆ, ಖಾಸಗಿ ಕಾರಣದಿಂದ ಎಸ್ ಕೃಷ್ಣನ್ ಅವರು ಟಿಎಂಬಿಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದರೆಂದು ಬ್ಯಾಂಕ್ ಹೇಳಿದೆ. ಎಸ್ ಕೃಷ್ಣನ್ ಅವರು 2022ರ ಸೆಪ್ಟೆಂಬರ್ 4ರಂದು ತಮಿಳ್ನಾಡ್ ಮೆರ್ಕಂಟೈಲ್ ಬ್ಯಾಂಕ್​ಗೆ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿ ನೇಮಕವಾಗಿದ್ದರು.

‘ಬ್ಯಾಂಕ್​ನ ಎಂಡಿ ಮತ್ತು ಸಿಇಒ ಎಸ್ ಕೃಷ್ಣನ್ ವೈಯಕ್ತಿಕ ಕಾರಣ ನೀಡಿ ಸೆಪ್ಟೆಂಬರ್ 28ರಂದು ರಾಜೀನಾಮೆ ನೀಡಿದ್ದಾರೆ. ಬ್ಯಾಂಕ್​ನ ಮಂಡಳಿ ಸಭೆಯಲ್ಲಿ ಅವರ ರಾಜೀನಾಮೆ ಅಂಗೀಕರಿಸಲಾಗಿದ್ದು, ಅದನ್ನು ಆರ್​ಬಿಐಗೆ ಕಳುಹಿಸಿಕೊಡಲಾಗಿದೆ. ರಿಸರ್ವ್ ಬ್ಯಾಂಕ್​ನಿಂದ ಮುಂದಿನ ಸಲಹೆ ಅಥವಾ ಮಾರ್ಗದರ್ಶನ ಬರುವವರೆಗೂ ಕೃಷ್ಣನ್ ಅವರು ಎಂಡಿ ಮತ್ತು ಸಿಇಒ ಆಗಿ ಮುಂದುವರಿಯುತ್ತಾರೆ…’ ಎಂದು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಟಿಎಂಬಿ ತಿಳಿಸಿದೆ.

ಇದನ್ನೂ ಓದಿ: ಎರಡು ವರ್ಷವಾದರೂ ಎಫ್​ಟಿಎಸ್​ಇ​ ಇಂಡೆಕ್ಸ್ ಪಟ್ಟಿಗೆ ಸೇರ್ಪಡೆಯಾಗದ ಭಾರತೀಯ ಬಾಂಡ್​ಗಳು; ಏನಿದರ ಎಫೆಕ್ಟ್?

ರಾಜೀನಾಮೆ ಪತ್ರದಲ್ಲಿ ಕೃಷ್ಣನ್ ಹೇಳಿದ್ದೇನು?

‘ನನ್ನ ಅಧಿಕಾರಾವಧಿ ಇನ್ನೂ ಮುಕ್ಕಾಲು ಭಾಗ ಇದೆಯಾದರೂ ವೈಯಕ್ತಿಕ ಕಾರಣಗಳಿಗಾಗಿ ಬ್ಯಾಂಕ್​ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಬ್ಯಾಂಕ್​ನಲ್ಲಿ ಪೂರ್ಣಾವಧಿ ನಿರ್ದೇಶಕರು ಇರುವುದು ಒಬ್ಬರೇ ಆದ್ದರಿಂದ ಈ ಬಗ್ಗೆ ಆರ್​ಬಿಐನ ಮಾರ್ಗದರ್ಶನ ಕೋರುವೆ,’ ಎಂದು ಸಿಇಒ ಎಸ್ ಕೃಷ್ಣನ್ ಹೇಳಿದ್ದಾರೆ.

ಎಸ್ ಕೃಷ್ಣನ್ ಅವರು ತಮಿಳುನಾಡ್ ಮರ್ಕಂಟೈಲ್ ಬ್ಯಾಂಕ್​ಗೆ ಸಿಇಒ ಆಗಿ ನೇಮಕವಾಗುವ ಮುನ್ನ ಬೇರೆ ಕೆಲ ಬ್ಯಾಂಕುಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್​ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ 2017ರಿಂದ 2020ರವರೆಗೂ ಕೆಲಸ ಮಾಡಿದ್ದರು. ಅದಾದ ಬಳಿಕ ಕೆನರಾ ಬ್ಯಾಂಕ್​ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ, ಮತ್ತು ಪಂಜಾಬ್ ಅಂಡ್ ಸಿಂದ್ ಬ್ಯಾಂಕ್​ನಲ್ಲಿ ಸಿಇಒ ಆಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್​ಲೈನ್ ವಿಸ್ತರಣೆ; ಅಕ್ಟೋಬರ್​ವರೆಗೂ ಕಾಲಾವಕಾಶ ಸಿಗುವ ಸಾಧ್ಯತೆ

ಆಟೋರಿಕ್ಷಾ ಚಾಲಕನ ಖಾತೆಗೆ 9,000 ಕೋಟಿ ರೂ ಹಾಕಿದ್ದ ಬ್ಯಾಂಕ್

ಕಳೆದ ವಾರ ತಮಿಳುನಾಡು ಮರ್ಸಂಟೈಲ್ ಬ್ಯಾಂಕ್​ನ ಚೆನ್ನೈ ಶಾಖೆಯಿಂದ ಅಚಾನಕ್ಕಾಗಿ ಟ್ಯಾಕ್ಸಿ ಚಾಲಕರೊಬ್ಬರ ಖಾತೆಗೆ 9,000 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕಿಂಗ್ ವಲಯಕ್ಕೆ ಇದು ಅಕ್ಷರಶಃ ಶಾಕ್ ಕೊಟ್ಟ ಘಟನೆಯಾಗಿತ್ತು. ತಾಂತ್ರಿಕ ದೋಷದಿಂದ ಈ ಪ್ರಮಾದ ಆಯಿತು ಎಂದು ಟಿಎಂಬಿ ಆ ವಹಿವಾಟಿನ ವಿವರ ನೀಡಿತು. ಸದ್ಯ, ಆ ತಪ್ಪು ಬೇಗನೇ ಗಮನಕ್ಕೆ ಬಂದು, ಚಾಲಕನ ಖಾತೆಯಿಂದ ಅಷ್ಟೂ ಹಣವನ್ನು ವಾಪಸ್ ಪಡೆದುಕೊಳ್ಳಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ