Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್​ಲೈನ್ ವಿಸ್ತರಣೆ; ಅಕ್ಟೋಬರ್​ವರೆಗೂ ಕಾಲಾವಕಾಶ ಸಿಗುವ ಸಾಧ್ಯತೆ

Rs. 2,000 Notes Update: ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಒಂದು ತಿಂಗಳು ವಿಸ್ತರಿಸಿರುವುದು ತಿಳಿದುಬಂದಿದೆ. ಅನಿವಾಸಿ ಭಾರತೀಯರು ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಬಳಿ ಕೆಲವಿಷ್ಟು 2,000 ರೂ ನೋಟುಗಳಿರಬಹುದು. ಅವರು ಮರಳಿಸಲು ಅಥವಾ ವಿನಿಮಯ ಮಾಡಲು ಹೆಚ್ಚಿನ ಕಾಲಾಕಾಶ ಬೇಕಾಗಬಹುದು. ಹೀಗಾಗಿ, ಆರ್​ಬಿಐ ಸೆಪ್ಟೆಂಬರ್ 30ರ ಗಡುವನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಲು ನಿರ್ಧರಿಸಿರಬಹುದು ಎಂದು ಹೇಳಲಾಗುತ್ತಿದೆ.

ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್​ಲೈನ್ ವಿಸ್ತರಣೆ; ಅಕ್ಟೋಬರ್​ವರೆಗೂ ಕಾಲಾವಕಾಶ ಸಿಗುವ ಸಾಧ್ಯತೆ
2,000 ರೂ ನೋಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2023 | 10:43 AM

ನವದೆಹಲಿ, ಸೆಪ್ಟೆಂಬರ್ 29: ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು (Deadline) ಒಂದು ತಿಂಗಳು ವಿಸ್ತರಿಸಿರುವುದು ತಿಳಿದುಬಂದಿದೆ. ಮನಿಕಂಟ್ರೋಲ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಅಕ್ಟೋಬರ್ 31ರವರೆಗೂ 2,000 ರೂ ನೋಟುಗಳನ್ನು ವಿನಿಮಯ ಮಾಡಲು ಅವಕಾಶ ನೀಡಲಾಗುತ್ತದೆಯಂತೆ. ಆದರೆ, ಈ ಬಗ್ಗೆ ಯಾವುದೇ ಅಧಿಸೂಚನೆಯನ್ನಾಗಲೀ ಅಥವಾ ಪ್ರಕಟಣೆಯನ್ನಾಗಲೀ ಆರ್​ಬಿಐ ನೀಡಿಲ್ಲ. ಇಂದು ಅಥವಾ ನಾಳೆ ಆರ್​ಬಿಐ (RBI) ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಹೊರಡಿಸಬಹುದು ಎಂದು ನಿರೀಕ್ಷಿಸಬಹುದು.

ಚಲಾವಣೆಯಲ್ಲಿದ್ದ ಎರಡು ಸಾವಿರ ರೂ ಮುಖಬೆಲೆಯ ನೋಟುಗಳ ಪೈಕಿ ಶೇ. 90ಕ್ಕೂ ಹೆಚ್ಚು ನೋಟುಗಳು ಬ್ಯಾಂಕುಗಳಿಗೆ ಮರಳಿವೆ. ಸೆಪ್ಟೆಂಬರ್ 1ರಂದು ಆರ್​ಬಿಐ ಮಾಹಿತಿ ನೀಡಿದ ಪ್ರಕಾರ ಶೇ. 93ರಷ್ಟು ನೋಟುಗಳು, ಅಂದರೆ ಸುಮಾರು 3.32 ಲಕ್ಷಕೋಟಿ ರೂ ಮೌಲ್ಯದ ನೋಟುಗಳು ಮರಳಿವೆ. ಇತ್ತೀಚಿನ ದಿನಗಳಲ್ಲಿ ವಿನಿಮಯವಾದ ನೋಟುಗಳ ಪ್ರಮಾಣ ತುಸು ಹೆಚ್ಚಿದೆ. ಶೇ. 95ಕ್ಕಿಂತಲೂ ಹೆಚ್ಚು ನೋಟುಗಳು ಆರ್​ಬಿಐಯನ್ನು ತಲುಪಿರಬಹುದು.

ಇದನ್ನೂ ಓದಿ: ಸರ್ಕಾರಕ್ಕೆ ಕಾವೇರಿ ಬಲ; ಒಂದೇ ದಿನದಲ್ಲಿ 26 ಸಾವಿರಕ್ಕೂ ಹೆಚ್ಚು ಸ್ವತ್ತುಗಳ ನೊಂದಣಿ; 312 ಕೋಟಿ ರೂ ಆದಾಯ; ಏನಿದು ಹೊಸ ವ್ಯವಸ್ಥೆ?

ಅನಿವಾಸಿ ಭಾರತೀಯರು ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಬಳಿ ಕೆಲವಿಷ್ಟು 2,000 ರೂ ನೋಟುಗಳಿರಬಹುದು. ಅವರು ಮರಳಿಸಲು ಅಥವಾ ವಿನಿಮಯ ಮಾಡಲು ಹೆಚ್ಚಿನ ಕಾಲಾಕಾಶ ಬೇಕಾಗಬಹುದು. ಹೀಗಾಗಿ, ಆರ್​ಬಿಐ ಸೆಪ್ಟೆಂಬರ್ 30ರ ಗಡುವನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಲು ನಿರ್ಧರಿಸಿರಬಹುದು ಎಂದು ಮನಿಕಂಟ್ರೋಲ್ ತನ್ನ ಅಧಿಕೃತ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಕೆಲ ಬ್ಯಾಂಕರ್​ಗಳ ಪ್ರಕಾರ, ಪ್ರತಿಯೊಂದು ನೋಟು ಕೂಡ ಮರಳುವ ನಿಟ್ಟಿನಲ್ಲಿ ಆರ್​ಬಿಐ ವಿವಿಧ ಮಾರ್ಗೋಪಾಯಗಳನ್ನು ಮಾಡುವ ಸಾಧ್ಯತೆ ಇದೆ. ನಿಗದಿತ ಕಾಲದಲ್ಲಿ 2,000 ರೂ ನೋಟುಗಳನ್ನು ಡೆಪಾಸಿಟ್ ಮಾಡಲಾಗದವರಿಗೆ ಗಡುವು ವಿಸ್ತರಣೆ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಅವಕಾಶಗಳನ್ನು ಆರ್​ಬಿಐ ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 30ರ ಗಡುವನ್ನು ಅಕ್ಟೋಬರ್ ಕೊನೆಯವರೆಗೂ ವಿಸ್ತರಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಮನೆ ಬಾಗಿಲಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಪಡೆಯಿರಿ: ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ

2016ರಲ್ಲಿ ಸರ್ಕಾರ ನೋಟ್ ಬ್ಯಾನ್ ಕ್ರಮ ಕೈಗೊಂಡು 1,000 ರೂ ಮತ್ತು 500 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು. ಅದಕ್ಕೆ ಬದಲಾಗಿ 2,000 ರೂ ನೋಟುಗಳನ್ನು ಮುದ್ರಿಸಿತು. 2018ರಲ್ಲಿ ಆರ್​ಬಿಐ 2,000 ರೂ ನೋಟುಗಳ ಮುದ್ರಣ ನಿಲ್ಲಿಸಿತೆಂದು ಹೇಳಲಾಗುತ್ತಿದೆ. ಆಗಲೇ 2,000 ರೂ ನೋಟುಗಳನ್ನು ಅಮಾನ್ಯಗೊಳಿಸಬಹುದು ಎಂದು ನಂಬಲಾಗಿತ್ತು. ಆದರೆ, 2023ರ ಮೇ 19ರಂದು ಆರ್​​ಬಿಐ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಘೋಷಿಸಿತು. ಆದರೆ, ಅದನ್ನು ಅಮಾನ್ಯ ಮಾಡಿಲ್ಲ.

ಈವರೆಗೆ ಮರಳಿರುವ 2,000 ರೂ ನೋಟುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಸ್ಥೆಗಳಿಂದ ಡೆಪಾಸಿಟ್ ಆಗಿರುವಂಥವು. ವೈಯಕ್ತಿಕ ಗ್ರಾಹಕರಿಂದ ಹೆಚ್ಚಿನ ಪ್ರಮಾಣದಲ್ಲಿ 2,000 ರೂ ನೋಟುಗಳು ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು