ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್(Royal Enfield) ಕಂಪನಿಯು ತನ್ನ ಸರಣಿ ಬೈಕ್ ಮಾದರಿಗಳನ್ನು ಹೆಚ್ಚಿಸಲು ಸಿದ್ದವಾಗುತ್ತಿದ್ದು, ಹೊಸ ಸೂಪರ್ ಮಿಟಿಯೊರ್ 650(Super Meteor 650) ಮಾದರಿಯನ್ನು ಇದೇ ತಿಂಗಳು 8ರಂದು ಇಟಲಿಯಲ್ಲಿ ನಡೆಯಲಿರುವ 2022ರ EICMA(ಅಂತಾರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಆಕ್ಸೆಸರಿಸ್ ಎಕ್ಸಿಬಿಷನ್) ನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಿದೆ. ಇಐಸಿಎಂಎ ನಲ್ಲಿ ಅನಾವರಣಗೊಂಡ ನಂತರ ಹೊಸ ಬೈಕ್ ಮಾದರಿಯು ಭಾರತದಲ್ಲಿ ಇದೇ ತಿಂಗಳು 18ರಿಂದ 20ರ ತನಕ ನಡೆಯಲಿರುವ 2022ರ ರೈಡರ್ ಮೆನಿಯಾದಲ್ಲಿ ಪ್ರದರ್ಶನಗೊಳ್ಳಲಿದೆ.
ಸ್ಟ್ಯಾಂಡರ್ಡ್ ಮಿಟಿಯೊರ್ 650 ಆಧರಿಸಿರುವ ಸೂಪರ್ ಮಿಟಿಯೊರ್ 650 ಬೈಕ್ ಮಾದರಿಯು ಹೊಸ ವಿನ್ಯಾಸ ಪ್ರೇರಣೆ ಹೊಂದಿದ್ದು, ಪ್ರಮುಖ ತಾಂತ್ರಿಕ ಅಂಶಗಳನ್ನು ಮಿಟಿಯೊರ್ 350 ಮಾದರಿಯಿಂದ ಮತ್ತು ಕಾಂಟಿನೆಂಟಲ್ ಜಿಟಿ 650 ಮಾದರಿಯ ಎಂಜಿನ್ ಬಳಕೆ ಮಾಡಲಾಗಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಸೂಪರ್ ಮಿಟಿಯೊರ್ 650 ಬೈಕ್ ಮಾದರಿಯು ಕಾಂಟಿನೆಂಟಲ್ ಜಿಟಿಯಲ್ಲಿರುವ 650 ಸಿಸಿ ಪ್ಯಾರಾಲೆಲ್-ಟ್ವಿನ್ ಎಂಜಿನ್ ಹೊಂದಿರಲಿದ್ದು, ಇದು 6 ಸ್ಪೀಡ್ ಗೇರ್ ಬಾಕ್ಸ್ ಮೂಲಕ 47 ಬಿಎಚ್ ಪಿ ಮತ್ತು 52 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ ಸುರಕ್ಷತೆಗಾಗಿ ಗರಿಷ್ಠ ಫೀಚರ್ಸ್ ನೀಡಲಾಗಿದ್ದು, ಟೆಲಿಸ್ಕೊಫಿಕ್ ಫೋರ್ಕ್ಸ್ ಬ್ರೇಕ್ಸ್, ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ವರ್ ನೀಡಲಾಗಿದೆ.
ಇದನ್ನೂ ಓದಿ: ಹಬ್ಬದ ಋತುವಿನಲ್ಲಿ ಭರ್ಜರಿ ಬೇಡಿಕೆಯೊಂದಿಗೆ ನಂ.1 ಸ್ಥಾನ ಕಾಯ್ದುಕೊಂಡ ಹೀರೋ ಮೋಟೊಕಾರ್ಪ್
ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು 20 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ನೀಡಲಾಗಿದ್ದು, ಇದು ಇತರೆ ರಾಯಲ್ ಎನ್‌ಫೀಲ್ಡ್ ಬೈಕ್ ಗಳಿಂತಲೂ ದೊಡ್ಡ ಗಾತ್ರ ಹೊಂದಿದೆ. ಜೊತೆಗೆ ಹಾಲೋಜೆನ್ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ಸ್ಲಿಪ್ ಅಂಡ್ ಅಸಿಸ್ಟ್ ಕ್ಲಚ್, ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ಸೌಲಭ್ಯಗಳಿವೆ.
ನೀರಿಕ್ಷಿತ ಬೆಲೆ(ಎಕ್ಸ್ ಶೋರೂಂ)
ಹಾರ್ಲೆ ಡೇವಿಡ್ಸನ್ ಆರಂಭಿಕ ಬೈಕ್ ಮಾದರಿಗಳಿಗೆ ಪೈಪೋಟಿಯಾಗಿ ಪವರ್ ಫುಲ್ ಕ್ರೂಸರ್ ಬೈಕ್ ಬಿಡುಗಡೆ ಮಾಡುತ್ತಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಸೂಪರ್ ಮಿಟಿಯೊರ್ 650 ಆವೃತ್ತಿಯನ್ನು ಆಕರ್ಷಕ ಬೆಲೆಯಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಹೊಸ ಬೈಕ್ ಮಾದರಿಯು ಮಾರುಕಟ್ಟೆಯಲ್ಲಿ ಇತರೆ ರಾಯಲ್ ಎನ್‌ಫೀಲ್ಡ್ ಇತರೆ ಬೈಕ್ ಮಾದರಿಗಳಿಂತಲೂ ತುಸು ದುಬಾರಿ ಎನ್ನಿಸಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 3.40 ಲಕ್ಷದಿಂದ ರೂ. 3.60 ಲಕ್ಷ ಬೆಲೆ ಹೊಂದಿರಲಿದೆ.
Published On - 12:08 pm, Fri, 4 November 22