ಮ್ಯಾನೇಜರ್ ಶಂತನು ಹೊಸ ಸಫಾರಿ ನೋಡಿ ಅಚ್ಚರಿ ವ್ಯಕ್ತಪಡಿಸಿದ ರತನ್ ಟಾಟಾ

|

Updated on: Nov 30, 2023 | 8:47 PM

ರತನ್ ಟಾಟಾ ಅವರ ಮ್ಯಾನೇಜರ್ ಶಂತನು ನಾಯ್ಡು ಇತ್ತೀಚೆಗೆ ಹೊಸ ಟಾಟಾ ಸಫಾರಿ ಎಸ್ ಯುವಿಯನ್ನು ಖರೀದಿಸಿದ್ದು, ಹೊಸ ಕಾರನ್ನು ವೀಕ್ಷಿಸಿದ ರತನ್ ಟಾಟಾ ಅವರು ಕಾರಿನಲ್ಲಿರುವ ವಿಶೇಷತೆಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಮ್ಯಾನೇಜರ್ ಶಂತನು ಹೊಸ ಸಫಾರಿ ನೋಡಿ ಅಚ್ಚರಿ ವ್ಯಕ್ತಪಡಿಸಿದ ರತನ್ ಟಾಟಾ
ಶಂತನು ನಾಯ್ಡು ಮತ್ತು ರತನ್ ಟಾಟಾ
Follow us on

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ರತನ್ ಟಾಟಾ ಅವರ ಮ್ಯಾನೇಜರ್ ಮತ್ತು ಗುಡ್‌ಫೆಲೋಸ್‌ನ ಸಂಸ್ಥಾಪಕ ಶಂತನು ನಾಯ್ಡು (Shantanu Naidu) ಅವರು ಹೊಸ ಟಾಟಾ ಸಫಾರಿ ಎಸ್‌ಯುವಿ ಖರೀದಿಸಿದ್ದು, ಹೊಸ ಸಫಾರಿ ಎಸ್‌ಯುವಿ ಚಾಲನೆ ಕುರಿತಾದ ತಮ್ಮ ಅನುಭವವನ್ನು ರತನ್ ಟಾಟಾ ಅವರೊಂದಿಗೆ ಹಂಚಿಕೊಂಡಿದ್ದಾರೆ. ಹೊಸ ಕಾರಿನಲ್ಲಿರುವ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್ ಮತ್ತು ಕಾರ್ಯನಿರ್ವಹಣೆಯ ಬಗೆಗೆ ಒಂದೊಂದಾಗಿ ಪರಿಶೀಲಿಸಿದ ರತನ್ ಟಾಟಾ ಅವರು ತಮ್ಮದೆ ಕಂಪನಿಯ ಕಾರಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವುದು ವಿಶೇಷವಾಗಿದೆ.

ಇದುವರೆಗೆ ರತನ್ ಟಾಟಾ ಅವರ ಕನಸಿನ ಕಾರು ನ್ಯಾನೋ ಬಳಕೆ ಮಾಡುತ್ತಿದ್ದ ಶಂತನು ನಾಯ್ಡು ಇದೀಗ ಹೊಸ ತಂತ್ರಜ್ಞಾನ ಪ್ರೇರಿತ ಸಫಾರಿ ಕಾರು ಖರೀದಿಸಿದ್ದು, ಹೊಸ ಕಾರಿನ ಕುರಿತಾಗಿ ರತನ್ ಟಾಟಾ ಅವರೊಂದಿಗೆ ಹಲವಾರು ತಾಂತ್ರಿಕ ವಿಚಾರಗಳನ್ನು ಚರ್ಚಿಸಿದ್ದಾರೆ. ಹೊಸ ಸಫಾರಿಯಲ್ಲಿರುವ ಅದ್ಭುತ ಫೀಚರ್ಸ್ ಗಳ ಕಾರ್ಯನಿರ್ವಹಣೆ ಬಗೆಗೆ ರತನ್ ಟಾಟಾ ಅವರ ಮಾಹಿತಿ ನೀಡಿದ ಶಂತನು ಅವರು ಇದೇ ಸಂದರ್ಭದಲ್ಲಿ ಹೊಸ ಕಾರಿಗೆ ಮತ್ತಷ್ಟು ಪೂರಿಪೂರ್ಣತೆ ನೀಡಬಹುದಾದ ಕೆಲವು ಬದಲಾವಣೆಗಳ ಅವಶ್ಯಕತೆಯ ಬಗೆಗೂ ಮಾಹಿತಿ ಹಂಚಿಕೊಂಡಿದೆ.

ಶಂತನು ನಾಯ್ಡು ಅವರು ಸಫಾರಿ ಫೇಸ್ ಲಿಫ್ಟ್ ಕಾರಿನ ಅಕಾಂಪ್ಲಿಶ್ಡ್ ಪ್ಲಸ್ ವೆರಿಯೆಂಟ್ ಖರೀದಿಸಿದ್ದು, ಹೊಸ ಕಾರಿಗೆ ‘ಯುಕಿ’ ಎಂದು ಹೆಸರಿಟ್ಟಿದ್ದಾರೆ. ಇದು ಎಕ್ಸ್ ಶೋರೂಂ ಪ್ರಕಾರ ಪ್ರಸ್ತುತ ಮಾರುಕಟ್ಟೆಯಲ್ಲಿ ರೂ. 27 ಲಕ್ಷ ಬೆಲೆ ಹೊಂದಿದ್ದು, ಇದು ಭಾರತ್ ಸೀರಿಸ್ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಸದ್ಯ ಮಾರುಕಟ್ಟೆಯಲ್ಲಿ ಹೊಸ ಸಫಾರಿ ಎಸ್ ಯುವಿ ಮಾದರಿಯು ಫೀಚರ್ಸ್ ಗಳಿಗೆ ಅನುಗುಣವಾಗಿ ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಎನ್ನುವ ನಾಲ್ಕು ವೆರಿಯೆಂಟ್ ಗಳನ್ನು ಹೊಂದಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 27.35 ಲಕ್ಷ ಬೆಲೆ ಹೊಂದಿದೆ.

6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಿರುವ ಹೊಸ ಸಫಾರಿ ಕಾರಿನಲ್ಲಿ ವಿಶೇಷವಾಗಿ ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಫ್ಲಕ್ಸ್ ವುಡ್ ಡ್ಯಾಶ್ ಬೋರ್ಡ್ ನೊಂದಿಗೆ 10.25-ಇಂಚು ಇಲ್ಲವೇ 12.3-ಇಂಚಿನ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ನೀಡಲಾಗಿದ್ದು, ಸ್ಪೋರ್ಟಿ ಡ್ರೈವ್ ಅನುಭವಕ್ಕಾಗಿ ಲೆದರ್ ಪ್ಯಾಡಿಂಗ್ ಜೊತೆಗೆ ಕಾಂಟ್ರಾಸ್ಟ್ ಸ್ವೀಚ್ ಮತ್ತು ಎಲ್ಇಡಿ ಆ್ಯಂಬಿಯೆಂಟ್ ಲೈಟಿಂಗ್ಸ್ ಮತ್ತು ಮೂರು ಡ್ರೈವ್ ಮೋಡ್ ಗಳನ್ನು ಹೊಂದಿದೆ.

ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಬೆಂಬಲಿಸುವ 10.25 ಇಂಚಿನ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದ್ದು, ಒಂದನೇ ಮತ್ತು ಎರಡನೇ ಸಾಲಿನ ಆಸನಗಳಲ್ಲಿ ವೆಂಟೆಲೆಷನ್, ಪನೊರಮಿಕ್ ಸನ್ ರೂಫ್, ವೈರ್ ಲೇಸ್ ಚಾರ್ಜರ್ ಸೇರಿದಂತೆ ಸುರಕ್ಷತೆಗಾಗಿ ಎಡಿಎಎಸ್, 7 ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಗಳಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ

ಇನ್ನು ಹೊಸ ಕಾರಿನಲ್ಲಿ 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ವಿವಿಧ ಡ್ರೈವ್ ಮೋಡ್ ಗಳ ಮೂಲಕ 170 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಸಫಾರಿ ಕಾರಿನ ಇಂಧನ ದಕ್ಷತೆ ಕೂಡಾ ಸಾಕಷ್ಟು ಸುಧಾರಿಸಿದ್ದು, ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಗೆ 16.30 ಕಿ.ಮೀ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಆವೃತ್ತಿಯು 14.50 ಕಿ.ಮೀ ಮೈಲೇಜ್ ನೀಡಲಿದೆ.

Published On - 4:59 pm, Thu, 30 November 23