ಹೇಗಿದೆ ನೋಡಿ ಸೂಪರ್ ಫೀಚರ್ಸ್ ಹೊಂದಿರುವ ಎಥರ್ 450 ಅಪೆಕ್ಸ್ ಇವಿ ಸ್ಕೂಟರ್

ಎಥರ್ ಎನರ್ಜಿ ಕಂಪನಿಯು 450 ಸರಣಿ ಇವಿ ಸ್ಕೂಟರ್ ಮಾದರಿಯಲ್ಲಿ ಹೊಸ 450 ಅಪೆಕ್ಸ್ ಇವಿ ಸ್ಕೂಟರ್ ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಸ್ಕೂಟರಿನ ಮೊದಲ ಟೀಸರ್ ಪ್ರಕಟಿಸಿದೆ.

ಹೇಗಿದೆ ನೋಡಿ ಸೂಪರ್ ಫೀಚರ್ಸ್ ಹೊಂದಿರುವ ಎಥರ್ 450 ಅಪೆಕ್ಸ್ ಇವಿ ಸ್ಕೂಟರ್
ಎಥರ್ 450 ಅಪೆಕ್ಸ್ ಇವಿ ಸ್ಕೂಟರ್
Follow us
Praveen Sannamani
|

Updated on:Nov 30, 2023 | 10:19 PM

ಪ್ರೀಮಿಯಂ ಸ್ಕೂಟರ್ ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ಕಂಪನಿಯು ತನ್ನ ಹೊಸ 450 ಅಪೆಕ್ಸ್ (450 Apex) ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ 450ಎಕ್ಸ್ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಆವೃತ್ತಿಯಾಗಿರಲಿದೆ.

450 ಅಪೆಕ್ಸ್ ಹೊಸ ಇವಿ ಸ್ಕೂಟರ್ ಹೆಸರಿನ ಟೀಸರ್ ಬಿಡುಗಡೆಯ ನಂತರ ಆಯ್ದ ಗ್ರಾಹಕರಿಗೆ ಟ್ರ್ಯಾಕ್ ರೈಡಿಂಗ್ ಒದಗಿಸಿದ್ದ ಎಥರ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚು ಸುಧಾರಿತ ಫೀಚರ್ಸ್ ಮತ್ತು ಉನ್ನತೀಕರಿಸಿದ ಪರ್ಫಾಮೆನ್ಸ್ ಕುರಿತಾದ ಮಾಹಿತಿ ಸಂಗ್ರಹಿಸಿದೆ. ಹೊಸ ಇವಿ ಸ್ಕೂಟರ್ ರೈಡಿಂಗ್ ಮಾಡಿರುವ ಗ್ರಾಹಕರು 450 ಅಪೆಕ್ಸ್ ನಲ್ಲಿರುವ ಫೀಚರ್ಸ್ ಮತ್ತು ಪರ್ಫಾಮೆನ್ಸ್ ಬಗೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ather 450 Apex (1)

ಹೊಸ ಇವಿ ಸ್ಕೂಟರ್ ಕುರಿತಾಗಿ ಮಾತನಾಡಿರುವ ಎಥರ್ ಸಿಇಒ ತರುಣ್ ಮೆಹ್ತಾ ಅವರು 450 ಪ್ಲಾಟ್‌ಫಾರ್ಮ್‌ನಲ್ಲಿ ಇದೊಂದು ಅತ್ಯುತ್ತಮ ಇವಿ ಮಾದರಿಯಾಗಿದೆ ಎಂದಿದ್ದು, ಬೆಲೆಯಲ್ಲೂ ಗಮನಸೆಳೆಯುವ ಸುಳಿವು ನೀಡಿದ್ದಾರೆ. 450 ಅಪೆಕ್ಸ್‌ ಇವಿ ಸ್ಕೂಟರ್ ಹೆಸರಿನ ಟೀಸರ್ ಹೊರತಾಗಿ ತಾಂತ್ರಿಕ ಅಂಶಗಳನ್ನು ಗೌಪ್ಯವಾಗಿಸಿರುವ ಎಥರ್ ಕಂಪನಿಯು ಶೀಘ್ರದಲ್ಲಿಯೇ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸುವುದಾಗಿ ಮಾಹಿತಿ ನೀಡಿದ್ದು, ಇದು 450ಎಕ್ಸ್ ಮಾದರಿಗಿಂತಲೂ ತುಸು ದುಬಾರಿಯಾಗಿರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಹೋಂಡಾ ಸಿಬಿ350 ಬೈಕ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ 450ಎಕ್ಸ್ ಹೈ ಎಂಡ್ ಮಾದರಿಯು ನಮ್ಮ ಬೆಂಗಳೂರಿನಲ್ಲಿ ಆನ್ ರೋಡ್ ಪ್ರಕಾರ ರೂ. 1.52 ಲಕ್ಷ ಬೆಲೆ ಹೊಂದಿದ್ದು, ಹೊಸ 450 ಅಪೆಕ್ಸ್ ಮಾದರಿಯು ಹೆಚ್ಚಿನ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ರೂ. 1.60 ಲಕ್ಷ ಬೆಲೆ ಹೊಂದಬಹುದಾಗಿದೆ. ಇದು 2024ರ ಆರಂಭದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಬಿಡುಗಡೆಯ ನಂತರ ಪ್ರಮುಖ ಇವಿ ಸ್ಕೂಟರ್ ಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಇದರೊಂದಿಗೆ ಎಥರ್ ಕಂಪನಿಯು ಭವಿಷ್ಯದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪ್ರಾಯೋಗಿಕ ಅಂಶಗಳೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, 450 ಅಪೆಕ್ಸ್ ಮಾತ್ರವಲ್ಲದೆ ಕಡಿಮೆ ಬೆಲೆಯ ಇವಿ ಸ್ಕೂಟರ್ ಗಳನ್ನು ಸಹ ಬಿಡುಗಡೆ ಮಾಡುವುದಾಗಿದೆ ಹೇಳಿಕೊಂಡಿದೆ. ಹೊಸ ಇವಿ ಸ್ಕೂಟರ್ ಗಳಲ್ಲಿ ಈ ಬಾರಿ ಎಥರ್ ಕಂಪನಿಯು ಪ್ರಾಯೋಗಿಕವಾಗಿರುವ ಫುಟ್ ಬೋರ್ಡ್, ಅಂಡರ್ ಸೀಟ್ ಸ್ಟೋರೇಜ್ ಮತ್ತು ಹಿಂಬದಿಯ ಸವಾರರಿಗೆ ಧೀರ್ಘಕಾಲಿಕ ಪ್ರಯಾಣಕ್ಕೆ ಅನುಕೂಲಕವಾಗುವಂತಹ ವಿಸ್ತರಿತ ಆಸನ ಸೌಲಭ್ಯವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಕಡಿಮೆ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಹೊಸ ಇವಿ ಸ್ಕೂಟರ್

ಹೊಸ ಶ್ರೇಣಿಯ ಇವಿ ಸ್ಕೂಟರ್ ಗಳನ್ನು ಎಥರ್ ಕಂಪನಿಯು ಪರ್ಫಾಮೆನ್ಸ್ ಆವೃತ್ತಿಗಳ ಜೊತೆ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಬಯಸುವ ಗ್ರಾಹಕರಿಗೂ ವಿವಿಧ ಇವಿ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇವು ಪ್ರಸ್ತುತ ಮಾರುಕಟ್ಟೆಯಲ್ಲಿನ 450 ಶ್ರೇಣಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಅಗತ್ಯವಾಗಿರುವ ಕೆಲವೇ ಫೀಚರ್ಸ್ ಗಳನ್ನು ಪಡೆದುಕೊಂಡಿರಲಿವೆ. ಹೀಗಾಗಿ ಹೊಸ ಇವಿ ಸ್ಕೂಟರ್ ಗಳು ಟಿವಿಎಸ್ ಐಕ್ಯೂಬ್ ಮಾದರಿಗೆ ಉತ್ತಮ ಪೈಪೋಟಿಯಾಗಲಿದ್ದು, ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿವೆ.

Published On - 10:18 pm, Thu, 30 November 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ