ಫೇವರಿಟ್ ನಂಬರ್ ನೊಂದಿಗೆ ಐಷಾರಾಮಿ ಆಫ್ ರೋಡ್ ಕಾರು ಖರೀದಿಸಿದ ಎಂಎಸ್ ಧೋನಿ
ಭಾರತೀಯ ಕ್ರಿಕೆಟ್ ರಂಗದಲ್ಲಿ ತಮ್ಮದೆ ಆದ ಜನಪ್ರಿಯತೆ ಹೊಂದಿದ್ದ ಮಹೀಂದ್ರ ಸಿಂಗ್ ಧೋನಿ ಬ್ರೇಕ್ ಮತ್ತು ಕಾರುಗಳ ಚಾಲನೆಯಲ್ಲೂ ಸಾಕಷ್ಟು ಕ್ರೇಜ್ ಹೊಂದಿದ್ದಾರೆ. ವಿವಿಧ ಸಂದರ್ಭಗಳಲ್ಲಿ ಹಲವಾರು ಬಾರಿ ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳಲ್ಲಿ ಕಾಣಿಸಿಕೊಂಡಿರುವ ಧೋನಿ ಈ ಬಾರಿ ದುಬಾರಿ ಬೆಲೆಯ ಆಫ್ ರೋಡ್ ಎಸ್ ಯುವಿ ಖರೀದಿಸಿರುವುದು ದೃಡವಾಗಿದೆ.
ಮಹೇಂದ್ರ ಸಿಂಗ್ ಧೋನಿಗೆ (MS Dhoni) ಹೊಸ ವಾಹನಗಳ ಕ್ರೇಜ್ ಎಷ್ಟಿದೆ ಎನ್ನುವುದು ಕ್ರಿಕೆಟ್ ಪ್ರೇಮಿಗಳಿಗೆ ಹಳೆಯ ವಿಚಾರ ಎನ್ನಬಹುದು. ಅವರು ತಮ್ಮ ಇಷ್ಟದ ವಾಹನಗಳ ಸಂಗ್ರಹಕ್ಕಾಗಿಯೇ ದೊಡ್ಡದಾದ ಗ್ಯಾರೇಜ್ ಅನ್ನೇ ಆರಂಭಿಸಿದ್ದು, ಇದರಲ್ಲಿ ಹತ್ತಾರು ಬಗೆಯ ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕ್ ಗಳನ್ನು ಸಂಗ್ರಹಿಸಿದ್ದಾರೆ. ಸಂದರ್ಭಕ್ಕೆ ಅನುಗುಣವಾಗಿ ವಿವಿಧ ಮಾದರಿಯ ಬೈಕ್ ಮತ್ತು ಕಾರುಗಳನ್ನು ಬಳಸುವ ಧೋನಿ ಇದೀಗ ಬಲಿಷ್ಠವಾಗಿರುವ ಆಫ್ ರೋಡ್ ಎಸ್ ಯುವಿ ಮರ್ಸಿಡಿಸ್-ಎಎಂಜಿ ಜಿ63 ಖರೀದಿಸಿದ್ದು, ಇದು ಆಫ್ ರೋಡ್ ಕೌಶಲ್ಯತೆಯಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದೆ.
ವಿಶ್ವಾದ್ಯಂತ ಖರೀದಿಗೆ ಲಭ್ಯವಿರುವ ವಿವಿಧ ಆಫ್ ರೋಡ್ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಮರ್ಸಿಡಿಸ್-ಎಎಂಜಿ ಜಿ63 ಮಾದರಿಯು ಭಾರತದಲ್ಲೂ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಎಂಎಸ್ ಧೋನಿ ಸಹ ಇತ್ತೀಚೆಗೆ ಖರೀದಿಸಿದ್ದಾರೆ. ಜಾರ್ಖಂಡ್ ನೋಂದಣಿ ಹೊಂದಿರುವ ಧೋನಿ ಹೊಸ ಮರ್ಸಿಡಿಸ್ ಕಾರಿನಲ್ಲಿ ಲಕ್ಕಿ ನಂಬರ್ ಪ್ಲೇಟ್ ‘0007’ ಜೋಡಣೆ ಮಾಡಲಾಗಿದ್ದು, ಕ್ರಿಕೆಟ್ ನಲ್ಲಿ ಧೋನಿ ಜೆರ್ಸಿ ನಂಬರ್ ಕೂಡ ‘7’ ಎಂಬುದು ವಿಶೇಷವಾಗಿದೆ.
ಟೆನಿಸ್ ಚಾಂಪಿಯನ್‌ಶಿಪ್ ಪಾಲುದಾರ ಸುಮೀತ್ ಕುಮಾರ್ ಬಜಾಜ್ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಧೋನಿ ಹೊಸ ಕಾರಿನ ವಿಡಿಯೋ ಹಂಚಿಕೊಂಡಿದ್ದು, ಸಫಾರಿಯೊಂದಕ್ಕೆ ತೆರಳಲು ಆಫ್ ರೋಡ್ ಕಿಂಗ್ ಮರ್ಸಿಡಿಸ್-ಎಎಂಜಿ ಜಿ63 ಬಳಕೆ ಮಾಡಿದ್ದಾರೆ. ಮರ್ಸಿಡಿಸ್ ಬೆಂಝ್ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಜಿ-ವ್ಯಾಗನ್ ಎಸ್ ಯುವಿಯು ಭಾರತದಲ್ಲಿ ಈಗಾಗಲೇ ಹಲವಾರು ಸೆಲೆಬ್ರಿಟಿಗಳ ಬಳಿ ಸ್ಥಾನ ಪಡೆದುಕೊಂಡಿದ್ದು, ಇದು ಆಫ್ ರೋಡ್ ನಲ್ಲಿ ತನ್ನ ಬಲಿಶಾಲಿ ಪರ್ಫಾಮೆನ್ಸ್ ಮೂಲಕ ಸಾಕಷ್ಟು ಜನಪ್ರಿಯವಾಗಿದೆ.
View this post on Instagram
ಇದನ್ನೂ ಓದಿ: ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ
ಹೊಸ ಮರ್ಸಿಡಿಸ್-ಎಎಂಜಿ ಜಿ63 ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು 4.0 ಲೀಟರ್(3982 ಸಿಸಿ) ವಿ8 ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮೂಲಕ 585 ಹಾರ್ಸ್ ಪವರ್ ಮತ್ತು 850 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಹೊಸ ಕಾರು ವಿಶೇಷವಾಗಿ ಆಫ್ ರೋಡ್ ಕೌಶಲ್ಯತೆಗಾಗಿ ಅಭಿವೃದ್ದಿಗೊಂಡಿದ್ದು, ಇದು ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಮೂಲಕ ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲೂ ಸಹ ಸಲೀಸಾಗಿ ನುಗ್ಗಬಲ್ಲದು.
ಬಲಿಷ್ಠವಾಗಿ ಎಂಜಿನ್ ಸಾಮರ್ಥ್ಯದೊಂದಿಗೆ ಮರ್ಸಿಡಿಸ್-ಎಎಂಜಿ ಜಿ63 ಕಾರಿನಲ್ಲಿ ಹಲವಾರು ಐಷಾರಾಮಿ ಫೀಚರ್ಸ್ ನೀಡಲಾಗಿದ್ದು, ಇದು ಭಾರತದಲ್ಲಿ ಸದ್ಯ ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 2.45 ಕೋಟಿಯಿಂದ ರೂ. 3.30 ಕೋಟಿ ಬೆಲೆ ಹೊಂದಿದೆ. ಸದ್ಯಕ್ಕೆ ಮರ್ಸಿಡಿಸ್ ಕಂಪನಿಯು ಎಎಂಜಿ ಜಿ63 ಕಾರಿನ ಮಾರಾಟವನ್ನು ಕಳೆದ ಕೆಲ ದಿನಗಳಿಂದ ಭಾರತದಲ್ಲಿ ನಿಲ್ಲಿಸಲಾಗಿದ್ದು, ಇದು ಮುಂಬರುವ 2024ರ ಆರಂಭದಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮರು ಬಿಡುಗಡೆಗಾಗಿ ಸಿದ್ದವಾಗುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!
ಸುರಕ್ಷತೆಗಾಗಿ ಐಕಾನಿಕ್ ಆಫ್-ರೋಡರ್ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಹಲವಾರು ಫೀಚರ್ಸ್ ನೀಡಿದ್ದು, ಇದರಲ್ಲಿ ಆರಾಮದಾಯಕ ಆಸನಗಳೊಂದಿಗೆ ಬರೋಬ್ಬರಿ ಎಂಟು ಏರ್‍ಬ್ಯಾಗ್‍ಗಳು ,ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಇಎಸ್‍ಸಿ, ಎಲೆಕ್ಟ್ರಾನಿಕ್ ಟ್ರ್ಯಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರ್, ಎಂಜಿನ್ ಚೆಕ್ ವಾರ್ನಿಂಗ್, ಕ್ರ್ಯಾಶ್ ಸೆನ್ಸಾರ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್ ಸೌಲಭ್ಯಗಳನ್ನು ನೀಡಲಾಗಿದೆ.