Tata Altroz Racer: ಪರ್ಫಾಮೆನ್ಸ್ ಪ್ರಿಯರಿಗಾಗಿ ಬಿಡುಗಡೆಯಾಗಲಿದೆ ಟಾಟಾ ಆಲ್ಟ್ರೊಜ್ ರೇಸರ್..

|

Updated on: Oct 30, 2023 | 6:59 PM

ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿ ಅಲ್ಟ್ರೊಜ್ ಕಾರಿನ ಪರ್ಫಾಮೆನ್ಸ್ ಆವೃತ್ತಿ ಬಿಡುಗಡೆಗೆ ಸಿದ್ದವಾಗುತ್ತಿದೆ.

Tata Altroz Racer: ಪರ್ಫಾಮೆನ್ಸ್ ಪ್ರಿಯರಿಗಾಗಿ ಬಿಡುಗಡೆಯಾಗಲಿದೆ ಟಾಟಾ ಆಲ್ಟ್ರೊಜ್ ರೇಸರ್..
ಟಾಟಾ ಆಲ್ಟ್ರೊಜ್ ರೇಸರ್
Follow us on

ಹೊಸ ಕಾರುಗಳಲ್ಲಿ ಇತ್ತೀಚೆಗೆ ಗ್ರಾಹಕರು ಪರ್ಫಾಮೆನ್ಸ್ ಕಾರು ಆವೃತ್ತಿಗಳ ಖರೀದಿಗೆ ಆದ್ಯತೆ ನೀಡುತ್ತಿರುವುದರಿಂದ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಅಲ್ಟ್ರೊಜ್ ಕಾರಿನ ರೇಸರ್ ಆವೃತ್ತಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯ ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ನಡೆಸುತ್ತಿದೆ.

ಹೊಸ ಕಾರು ಆಲ್ಟ್ರೊಜ್ ರೇಸರ್ ಪರ್ಫಾಮೆನ್ಸ್ ಆವೃತ್ತಿಯನ್ನ 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ಕೆಲವೇ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಇದು ಹ್ಯುಂಡೈ ಐ20 ಎನ್-ಲೈನ್ ಪರ್ಫಾಮೆನ್ಸ್ ಆವೃತ್ತಿಗೆ ಭರ್ಜರಿ ಪೈಪೋಟಿ ನೀಡಲಿದೆ.

Tata Altroz Racer (3)

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಅನಾವರಣ

ಹೊಸ ಕಾರುಗಳಲ್ಲಿ ಇತ್ತೀಚೆಗೆ ಪರ್ಫಾಮೆನ್ಸ್ ಎಡಿಷನ್ ಗಳ ಮಾರಾಟವು ಹೆಚ್ಚುತ್ತಿರುವುದರಿಂದ ಆಲ್ಟ್ರೊಜ್ ಕಾರಿನಲ್ಲಿ ಈ ಹಿಂದೆ ಟರ್ಬೊ ಎಡಿಷನ್ ಪರಿಚಯಿಸಿದ್ದ ಟಾಟಾ ಕಂಪನಿಯು ಇದೀಗ ಇನ್ನು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಹೊಂದಿರುವ ಮತ್ತು ವಿನೂತನ ಸ್ಪೋರ್ಟಿ ಫಿರ್ಚಸ್ ಒಳಗೊಂಡಿರುವ ರೇಸರ್ ಎಡಿಷನ್ ಅಭಿವೃದ್ದಿಪಡಿಸಿದೆ. ಹೊಸ ಆವೃತ್ತಿಯು ಸಾಮಾನ್ಯ ಕಾರು ಮಾದರಿಗಿಂತಲೂ ಹೆಚ್ಚು ಪವರ್ ಫುಲ್ ಎಂಜಿನ್ ಮತ್ತು ಸ್ಪೋರ್ಟಿಯಾಗಿರುವ ಫೀಚರ್ಸ್ ಹೊಂದಿರಲಿದೆ.

ಆಲ್ಟ್ರೊಜ್ ರೇಸರ್ ಕಾರು ಮಾದರಿಯಲ್ಲಿ 1.2 ಲೀಟರ್ ತ್ರಿ ಸಿಲಿಂಡರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದ್ದು, ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಅಥವಾ ಡ್ಯುಯಲ್ ಕ್ಲಚ್ ಆಟೋ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದೆ. ಈ ಮೂಲಕ ಇದು 118.3 ಹಾರ್ಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

ಇನ್ನು ಹೊಸ ಆಲ್ಟ್ರೊಜ್ ರೇಸರ್ ಕಾರು ಸಾಮಾನ್ಯ ಆಲ್ಟ್ರೊಜ್ ಮಾದರಿಗಿಂತಲೂ ತುಸು ಭಿನ್ನವಾಗಿರಲಿದ್ದು, ಡ್ಯುಯಲ್-ಟೋನ್ ಬಣ್ಣದ ಆಯ್ಕೆಯಿಂದಾಗಿ ಸ್ಪ್ರೋಟಿ ಲುಕ್ ಹೊಂದಿರಲಿದೆ. ಕೆಂಪು ಮತ್ತು ಕಪ್ಪು ಬಣ್ಣಗಳು ಆಕರ್ಷಕವಾಗಿದ್ದು, ಸ್ಪೋರ್ಟಿ ಬಂಪರ್, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳು, ಬಾಡಿ ಡಿಕಾಲ್ ಗಳು ಮತ್ತು ರೇಸರ್ ಬ್ಯಾಡ್ಜಿಂಗ್ ಒಳಗೊಂಡಿದೆ.

ಇದನ್ನೂ ಓದಿ: ಮಹೀಂದ್ರಾ ಹೊಸ ಕಾರುಗಳ ಖರೀದಿ ಮೇಲೆ ರೂ. 1.25 ಲಕ್ಷ ಆಫರ್ ಘೋಷಣೆ

ಇದರೊಂದಿಗೆ ಹೊಸ ಕಾರಿನ ಕ್ಯಾಬಿನ್‌ನ ಒಳಭಾಗವು ಕೂಡಾ ಆಕರ್ಷಕವಾಗಿದ್ದು, ಸಂಪೂರ್ಣವಾಗಿ ಬ್ಲ್ಯಾಕ್ ಬಣ್ಣದೊಂದಿಗೆ ರೆಡ್ ಕಾಂಟ್ರಾಸ್ಟ್ ಹೊಂದಿರುವ ಆಸನಗಳು ಮತ್ತು ರೇಸರ್ ಬ್ಯಾಡ್ಜಿಂಗ್ ಗಮನಸೆಳೆಯುತ್ತದೆ. ಇದರೊಂದಿಗೆ ಪ್ರೀಮಿಯಂ ಕಾರು ಚಾಲನಾ ಅನುಭವಕ್ಕಾಗಿ ಹರ್ಮನ್ ಆಡಿಯೋ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಡ್ರೈವರ್ ಡಿಸ್ ಪ್ಲೇ, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಫ್ರಂಟ್ ವೆಂಟೆಲೆಟೆಡ್ ಸೀಟುಗಳು, ಏರ್ ಪ್ಯೂರಿಫೈರ್, ಸೇರಿದಂತೆ ಹಲವಾರು ಹೊಸ ಫೀಚರ್ಸ್ ಗಳಿರಲಿವೆ. ಇದರೊಂದಿಗೆ ಹೊಸ ಕಾರು ಮಾದರಿಯು ಸಾಮಾನ್ಯ ಮಾದರಿಗಿಂತ ರೂ. 1 ಲಕ್ಷದಿಂದ ರೂ. 1.50 ಲಕ್ಷದಷ್ಟು ದುಬಾರಿಯಾಗಿರಲಿದೆ.

Published On - 6:41 pm, Mon, 30 October 23