Maruti Suzuki Swift: ಭರ್ಜರಿ ಮೈಲೇಜ್ ನೀಡುವ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಅನಾವರಣ

ಸುಜುಕಿ ಮೋಟಾರ್ ಕಾರ್ಪೊರೇಷನ್ ತನ್ನ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರು ಮಾದರಿಯನ್ನು ಟೋಕಿಯೊ ಮೋಟಾರ್ ಶೋನಲ್ಲಿ ಪ್ರದರ್ಶಿಸಲಿದೆ.

Maruti Suzuki Swift: ಭರ್ಜರಿ ಮೈಲೇಜ್ ನೀಡುವ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಅನಾವರಣ
ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಅನಾವರಣ
Follow us
Praveen Sannamani
|

Updated on: Oct 28, 2023 | 5:24 PM

ಭಾರತದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ(Maruti Suzuki) ತನ್ನ ಸ್ವಿಫ್ಟ್(Swift) ಹ್ಯಾಚ್ ಬ್ಯಾಕ್ ಮೂಲಕ ಹಲವಾರು ಮಾರಾಟ ದಾಖಲೆಗಳನ್ನು ನಿರ್ಮಿಸಿದ್ದು, ಇದೀಗ ಕಂಪನಿಯು ಹೊಸ ತಲೆಮಾರಿನ ಸ್ವಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಹೊಸ ಕಾರು ಬಿಡುಗಡೆಗೂ ಸುಜುಕಿ ಮೋಟಾರ್ ಕಾರ್ಪೊರೇಷನ್ ಕಂಪನಿಯು ಟೋಕಿಯೊ ಮೋಟಾರ್ ಶೋನಲ್ಲಿ ಪ್ರದರ್ಶನಗೊಳಿಸಿದ್ದು, ಶೀಘ್ರದಲ್ಲಿಯೇ ಇದು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಗೊಂಡಿದ್ದ ಸ್ವಿಫ್ಟ್ ಕಾರು ಮಾದರಿಯು ಭಾರೀ ಬೇಡಿಕೆಯೊಂದಿಗೆ ಹಲವಾರು ಮಾರಾಟ ದಾಖಲೆಗಳನ್ನು ನಿರ್ಮಿಸಿದ್ದು, ಇದೀಗ ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಹೊಸ ಸ್ವಿಫ್ಟ್ ಮಾದರಿಯು ಹಲವಾರು ಬದಲಾವಣೆಗಳೊಂದಿಗೆ ನವೀಕೃತ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಎಂಜಿನ್ ಮತ್ತು ಮೈಲೇಜ್

ಹೊಸ ತಲೆಮಾರಿನ ಸ್ವಿಫ್ಟ್ ಮಾದರಿಯು ಸಾಂಪ್ರದಾಯಿಕ ಪೆಟ್ರೋಲ್ ಎಂಜಿನ್‌ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಬಿಎಸ್6 2ನೇ ಹಂತದ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳು ಮತ್ತು ಕಾರ್ಪೊರೇಟ್ ಸರಾಸರಿ ಇಂಧನ ದಕ್ಷತೆಯ ಮಾನದಂಡಗಳನ್ನು ಪೂರೈಸಿದೆ. ಹೊಸ ಕಾರಿನಲ್ಲಿ ಮತ್ತೊಂದು ಗಮನಾರ್ಹ ಬದಲಾವಣೆ ಒಳಗೊಂಡ ಜೆಡ್ ಸೀರಿಸ್ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್ ನಲ್ಲೂ ಗ್ರಾಹಕರನ್ನು ಸೆಳೆಯಲಿದೆ.

ಇದನ್ನೂ ಓದಿ: ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಟಾಟಾ ಕರ್ವ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮೂರನೇ ತಲೆಮಾರಿನ ಸ್ವಿಫ್ಟ್ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಕೆ ಸೀರಿಸ್ ಫೋರ್ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆ ಮಾಡುತ್ತಿದ್ದು, ಹೊಸ ಎಂಜಿನ್ ಮಾದರಿಯು ಕೆ ಸೀರಿಸ್ ಗಿಂತಲೂ ಸಾಕಷ್ಟು ಹಗುರವಾಗಿರುವುದಲ್ಲದೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪಡೆದುಕೊಳ್ಳಲಿದೆ.

ಈ ಮೂಲಕ ಹೊಸ ಸ್ವಿಫ್ಟ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಟ 40 ಕಿ.ಮೀ ಮೈಲೇಜ್ ಹಿಂದಿರುಗಿಸುವ ನೀರಿಕ್ಷೆಯಲ್ಲಿದ್ದು, ಇದು ಕೇವಲ ಇಂಧನ ದಕ್ಷತೆಯಲ್ಲಿ ಮಾತ್ರವಲ್ಲದೆ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಲ್ಲೂ ಸಾಕಷ್ಟು ಬದಲಾವಣೆ ಪಡೆದುಕೊಳ್ಳಲಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಸ್ವಿಫ್ಟ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಲ್ಲಿ ಭಾರೀ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಮರುವಿನ್ಯಾಸಗೊಳಿಸಲಾದ ಬಾನೆಟ್, ಮತ್ತಷ್ಟು ಸ್ಪೋರ್ಟಿಯಾಗಿರುವ ಹನಿಕೊಬ್ ಬಂಪರ್, ಹೊಸ ವಿನ್ಯಾಸದ ಎಲ್ಇಡಿ ಹೆಡ್ ಲ್ಯಾಂಪ್ಸ್, ಹೊಸ ಫಾಗ್ ಲ್ಯಾಂಪ್ಸ್ ಮತ್ತು ಆಕರ್ಷಕವಾದ ಸೈಡ್ ಪ್ರೊಫೈಲ್ ಪಡೆದುಕೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ಐದು ಹೊಸ ಎಸ್ ಯುವಿ ಬಿಡುಗಡೆ ಮಾಡಲಿದೆ ಟೊಯೊಟಾ

ಭಾರತದಲ್ಲಿ ಯಾವಾಗ ಬಿಡುಗಡೆ?

ಸದ್ಯ ಟೋಕಿಯೊ ಮೋಟಾರ್ ಶೋನಲ್ಲಿ ಪ್ರದರ್ಶನಗೊಂಡಿರುವ ಹೊಸ ಸ್ವಿಫ್ಟ್ ಮಾದರಿಯು ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಇದು 2024ರ ಮಾರ್ಚ್ ಹೊತ್ತಿಗೆ ಬಿಡುಗಡೆಯಾಗುವ ನೀರಿಕ್ಷೆಗಳಿವೆ.