Tata Nexon CNG: ಸಖತ್ ಮೈಲೇಜ್ ನೀಡುವ ಟಾಟಾ ನೆಕ್ಸಾನ್ ಸಿಎನ್‌ಜಿ ಬಿಡುಗಡೆ

|

Updated on: Sep 24, 2024 | 4:37 PM

Tata Nexon CNG: ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ನೆಕ್ಸಾನ್ ಸಿಎನ್‌ಜಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Tata Nexon CNG: ಸಖತ್ ಮೈಲೇಜ್ ನೀಡುವ ಟಾಟಾ ನೆಕ್ಸಾನ್ ಸಿಎನ್‌ಜಿ ಬಿಡುಗಡೆ
ಟಾಟಾ ನೆಕ್ಸಾನ್ ಸಿಎನ್‌ಜಿ
Follow us on

ಆಕರ್ಷಕ ಬೆಲೆಯೊಂದಿಗೆ ಸುರಕ್ಷಿತ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಇದೀಗ ಹೊಸ ನೆಕ್ಸಾನ್ ಸಿಎನ್‌ಜಿ (Nexon CNG) ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 8.99 ಲಕ್ಷದಿಂದ ರೂ. 14.59 ಲಕ್ಷ ಬೆಲೆ ಹೊಂದಿದೆ.

ನೆಕ್ಸಾನ್ ಸಿಎನ್‌ಜಿಯು ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್‌ ಎಸ್, ಪ್ಯೂರ್, ಪ್ಯೂರ್ ಎಸ್, ಕ್ರಿಯೆಟಿವ್, ಕ್ರಿಯೆಟಿವ್ ಪ್ಲಸ್, ಫಿಯರ್ ಲೆಸ್ ಪ್ಲಸ್ ಪಿಎಸ್ ವೆರಿಯೆಂಟ್ ಗಳನ್ನು ಹೊಂದಿದ್ದು, ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಸಿಎನ್‌ಜಿ ವೆರಿಯೆಂಟ್ ಗಳು ಹೆಚ್ಚುವರಿಯಾಗಿ ರೂ. 1 ಲಕ್ಷದಷ್ಟು ದುಬಾರಿಯಾಗಿರಲಿವೆ.

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಸಿಎನ್ ಜಿ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪ್ರೇರಿತ 1.2 ಲೀಟರ್ ಪೆಟ್ರೋಲ್ ತ್ರಿ ಸಿಲಿಂಡರ್ ಎಂಜಿನ್ ಜೊತೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಜೋಡಣೆ ಮಾಡಲಾಗಿದ್ದು, ಇದು ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 24 ಕಿ.ಮೀ ಮೈಲೇಜ್ ನೀಡಲಿದೆ. ಹೊಸ ಕಾರಿನಲ್ಲಿ ಹೆಚ್ಚಿನ ಮೈಲೇಜ್ ಗಾಗಿ ಹಾರ್ಸ್ ಪವರ್ ಅನ್ನು 130 ರಿಂದ 110ಕ್ಕೆ ಇಳಿಕೆ ಮಾಡಲಾಗಿದ್ದು, ದೂರದ ಪ್ರಯಾಣಕ್ಕೆ ಅನುಕೂಲಕರವಾಗುವಂತೆ 60 ಕೆಜಿ ತೂಕದ ಡ್ಯುಯಲ್ ಸಿಎನ್ ಜಿ ಸಿಲಿಂಡರ್ ನೀಡಲಾಗಿದೆ.

ಇದನ್ನೂ ಓದಿ: ವಿಂಡ್ಸರ್ ಇವಿ ಕಾರಿನ ಸಂಪೂರ್ಣ ಬೆಲೆ ಮಾಹಿತಿ ಬಹಿರಂಗಪಡಿಸಿದ ಎಂಜಿ ಮೋಟಾರ್

ಡ್ಯುಯಲ್ ಸಿಎನ್ ಜಿ ಸಿಲಿಂಡರ್ ಮೂಲಕ ಉತ್ತಮ ಬೂಟ್ ಸ್ಪೆಸ್ ಹೆಚ್ಚಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ವೆರಿಯೆಂಟ್ ಗಿಂತಲೂ 61 ಲೀಟರ್ ನಷ್ಟು ಬೂಟ್ ಸ್ಪೆಸ್ ಇಳಿಕೆ ಮಾಡಿದ್ದರೂ ಕೂಡಾ 321 ಲೀಟರ್ ಬೂಟ್ ಸ್ಪೆನ್ ನೀಡಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಇದರ ಹೊರತಗಾಗಿ ಹೊಸ ನೆಕ್ಸಾನ್ ಸಿಎನ್ ಜಿ ಮಾದರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿರುವಂತೆ ಹಲವು ತಾಂತ್ರಿಕ ಸೌಲಭ್ಯಗಳನ್ನು ಮುಂದುವರಿಸಲಾಗಿದ್ದು, ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಸೇರಿದಂತೆ ಆಟೋ ಹೆಡ್ ಲೈಟ್ಸ್ ಮತ್ತು ವೈರರ್ಸ್, ಪನೊರಮಿಕ್ ಸನ್ ರೂಫ್, 10.25 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಫ್ರಂಟ್ ವೆಂಟಿಲೆಟೆಡ್ ಸೀಟುಗಳು, ಫೋರ್ ಸ್ಪೀಕರ್ಸ್ ಮತ್ತು ಟ್ವಿಟರ್ಸ್ ಮತ್ತು ಲೆದರ್ ಆಸನಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಹೊಸ ಸಿಎನ್ ಜಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್ ಗಳು ಮತ್ತು ಇಎಸ್ ಪಿ ಜೊತೆಗೆ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 360 ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಆಟೋ ಡಿಮ್ಮಿಂಗ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.