ವಿಂಡ್ಸರ್ ಇವಿ ಕಾರಿನ ಸಂಪೂರ್ಣ ಬೆಲೆ ಮಾಹಿತಿ ಬಹಿರಂಗಪಡಿಸಿದ ಎಂಜಿ ಮೋಟಾರ್

MG Windsor EV: ಎಂಜಿ ಮೋಟಾರ್ ಕಂಪನಿ ಜೆ‌ಎಸ್‌ಡಬ್ಲ್ಯೂ ಜೊತೆಗೂಡಿ ತನ್ನ ಮೊದಲ ಇವಿ ಕಾರು ಮಾದರಿಯಾದ ವಿಂಡ್ಸರ್ ಇವಿ ಕಳೆದ ವಾರವಷ್ಟೇ ಬಿಡುಗಡೆ ಮಾಡಿದ್ದು, ಇದೀಗ ಹೊಸ ಕಾರಿನ ವಿವಿಧ ವೆರಿಯೆಂಟ್ ಗಳ ಸಂಪೂರ್ಣ ಬೆಲೆ ಮಾಹಿತಿಯನ್ನು ಹಂಚಿಕೊಂಡಿದೆ.

ವಿಂಡ್ಸರ್ ಇವಿ ಕಾರಿನ ಸಂಪೂರ್ಣ ಬೆಲೆ ಮಾಹಿತಿ ಬಹಿರಂಗಪಡಿಸಿದ ಎಂಜಿ ಮೋಟಾರ್
ಎಂಜಿ ವಿಂಡ್ಸರ್ ಇವಿ
Follow us
|

Updated on:Sep 22, 2024 | 9:43 PM

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಂಜಿ ಮೋಟಾರ್ (MG Motor) ಕಂಪನಿಯು ಹೊಸದಾಗಿ ಇವಿ ಕಾರುಗಳ ಮಾರಾಟ ಹೆಚ್ಚಿಸಲು ಜೆ‌ಎಸ್‌ಡಬ್ಲ್ಯೂ ಜೊತೆಗೂಡಿ ಭಾರೀ ಬಂಡವಾಳ ಹೂಡಿಕೆ ಮಾಡಿದ್ದು, ಹೊಸ ಬಂಡವಾಳ ಹೂಡಿಕೆಯ ನಂತರ ಇದೀಗ ಮೊದಲ ಇವಿ ಮಾದರಿಯಾದ ವಿಂಡ್ಸರ್ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ಮಾರಾಟ ಮಾಡುತ್ತಿರುವ ಎಂಜಿ ಕಂಪನಿ ಇದೀಗ ಮಧ್ಯಮ ಕ್ರಮಾಂಕದಲ್ಲಿ ವಿಂಡ್ಸರ್ ಇವಿ ಪರಿಚಯಿಸಿದೆ.

ವಿಂಡ್ಸರ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬ್ಯಾಟರಿ ಸಹಿತ ಮತ್ತು ಬ್ಯಾಟರಿ ರಹಿತ ಮಾದರಿಗಳಾಗಿ ಮಾರಾಟಗೊಳ್ಳಲಿದ್ದು, ಇದರಲ್ಲಿ ಬ್ಯಾಟರಿ ಜೋಡಣೆ ಹೊಂದಿರುವ ಎಕ್ಸೈಟ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.50 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಎಕ್ಸ್ ಕ್ಲೂಸಿವ್ ವೆರಿಯೆಂಟ್ ರೂ. 14.50 ಲಕ್ಷ ಮತ್ತು ಎಸೆನ್ಸ್ ವೆರಿಯೆಂಟ್ ರೂ. 15.50 ಲಕ್ಷ ಬೆಲೆ ಹೊಂದಿದೆ.

ಬ್ಯಾಟರಿ ರಹಿತ ವಿಂಡ್ಸರ್ ಇವಿ ಖರೀದಿಸುವ ಗ್ರಾಹಕರು ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷ ಆರಂಭಿಕ ಬೆಲೆ ಪಾವತಿಸಬೇಕಿದ್ದು, ಬ್ಯಾಟರಿ ಅನ್ನು ಪ್ರತಿ ತಿಂಗಳಿಗೆ ಅಥವಾ ವರ್ಷಕ್ಕೆ ಬಾಡಿಗೆ ಪಡೆದುಕೊಳ್ಳಬಹುದಾಗಿದೆ. ಬಾಡಿಗೆಗೆ ಪಡೆದುಕೊಳ್ಳಲಾಗುವ ಬ್ಯಾಟರಿಯನ್ನು ಎಂಜಿ ಕಂಪನಿಯೇ ಕಾರ್ಯನಿರ್ವಹಿಸಲಿದ್ದು, ಸಂಪೂರ್ಣ ಜವಾಬ್ದಾರಿಯೊಂದಿಗೆ ವಾರಂಟಿಯನ್ನು ನೀಡುತ್ತದೆ. ಹೊಸ ಇವಿ ಕಾರಿನ ಬ್ಯಾಟರಿಯನ್ನು ಪ್ರತಿ ಕಿ.ಮೀ ಗೆ ರೂ 3.5 ನಿಗದಿಪಡಿಸಿದ್ದು, ಮೂರು ವರ್ಷಗಳ ನಂತರವೂ ಹೊಸ ಇವಿ ಕಾರಿಗೆ ಶೇ.60 ರಷ್ಟು ಮೂಲ ಬೆಲೆಯೊಂದಿಗೆ ಬೈಬ್ಯಾಕ್ ಆಫರ್ ಸಿಗಲಿದೆ.

ವಿಂಡ್ಸರ್ ಇವಿ ಕಾರಿನಲ್ಲಿ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಮತ್ತು 38kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು 136 ಹಾರ್ಸ್ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 331 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಹೊಸ ಕಾರಿನಲ್ಲಿ ಇಕೋ ಪ್ಲಸ್, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ ಗಳಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಮೊದಲ ಒಂದು ವರ್ಷ ಉಚಿತ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಆಫರ್ ನೀಡಿದೆ.

ಇದನ್ನೂ ಓದಿ: ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಪ್ 5 ಕಾರುಗಳಿವು!

ಇನ್ನು ಹೊಸ ಇವಿ ಕಾರಿನ ಎಂಜಿ ಕಂಪನಿಯು ವಿಶಿಷ್ಟ ವಿನ್ಯಾಸ ಮತ್ತು ಆಕಾರದೊಂದಿಗೆ ಐದು ಜನ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿದ್ದು, ಇದು ಮೂಲಭೂತವಾಗಿ ದೊಡ್ಡ ಹ್ಯಾಚ್ಬ್ಯಾಕ್ ಅನ್ನು ಹೋಲುತ್ತದೆ. ಹಾಗೆಯೇ ಹೊಸ ಕಾರಿನಲ್ಲಿ ಫ್ಲಶ್ ಡೋರ್ ಹ್ಯಾಂಡಲ್‌ಗಳು, ಎರಡೂ ಬದಿಯಲ್ಲೂ ಫುಲ್ ವಿಡ್ತ್ ಎಲ್ಇಡಿ ಲೈಟ್ ಬಾರ್‌ ಗಳನ್ನು ನೀಡಲಾಗಿದ್ದು, ಬಂಪರ್‌ನಲ್ಲಿ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸುವುದರೊಂದಿಗೆ ಸ್ಟೆಪ್ಡ್ ಫ್ರಂಟ್-ಎಂಡ್ ವಿನ್ಯಾಸವನ್ನು ನೀಡಲಾಗಿದೆ. ಹಾಗೆಯೇ ವಿಶಿಷ್ಟ ವಿನ್ಯಾಸದಲ್ಲಿರುವ ಹಿಂಬದಿಯ ವಿಸ್ತೃತ ಕ್ವಾರ್ಟರ್ ಗ್ಲಾಸ್ ಗಳೊಂದಿಗೆ ಕಡಿದಾದ ಮುಂಭಾಗ ಮತ್ತು ಹಿಂಭಾಗದ ವಿಂಡ್‌ಸ್ಕ್ರೀನ್‌ ಮತ್ತು ದೊಡ್ಡದಾದ ಗ್ಲಾಸ್‌ಹೌಸ್ ಅನ್ನು ಸಹ ಪಡೆದುಕೊಂಡಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ಚಾರ್ಜ್‌ಗೆ 949 ಕಿ.ಮೀ ಪ್ರಯಾಣಿಸಿ ಗಿನ್ನಿಸ್ ದಾಖಲೆ

ಇಂಟೀರಿಯರ್‌ ಬಗೆಗೆ ಹೇಳುವುದಾದರೆ ವಿಂಡ್ಸರ್ ಇವಿ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನವು ಸಾಕಷ್ಟು ಸುಧಾರಿತವಾಗಿದೆ. ವಿಶಾಲವಾದ ಕ್ಯಾಬಿನ್ ನೊಂದಿಗೆ ದೊಡ್ಡದಾದ 15.6 ಇಂಚಿನ ಇನ್ಫೋಟೈನ್‌ಮೆಂಟ್ ಪ್ರಮುಖ ಆಕರ್ಷಣೆಯಾಗಿದೆ. ಇದಲ್ಲದೆ ಟು ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಫ್ಲೋಟಿಂಗ್ ಸೆಂಟರ್ ಕನ್ಸೋಲ್, 135 ಡಿಗ್ರಿಗಳಷ್ಟು ಒರಗಿಕೊಳ್ಳುವ ಆಸನಗಳು, ವೈರ್ ಲೆಸ್ ಚಾರ್ಜಿಂಗ್, ದೊಡ್ಡದಾದ ಪನೋರಮಿಕ್ ಸನ್‌ರೂಫ್ ಸೌಲಭ್ಯವು ಐಷಾರಾಮಿ ಡ್ರೈವ್ ಅನುಭವ ನೀಡುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ಸ್, 360 ಡಿಗ್ರಿ ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟಿಪಿಎಂಎಸ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.

Published On - 8:32 pm, Sun, 22 September 24

ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ