ICOTY 2025 ವರ್ಷದ ಭಾರತೀಯ ಕಾರು ಪ್ರಶಸ್ತಿಗೆ ಹೆಸರು ಘೋಷಣೆ: ಯಾವ ಕಾರೆಲ್ಲ ಇದೆ ನೋಡಿ

ಭಾರತೀಯ ವಾಹನ ಕ್ಷೇತ್ರವು ಈ ವರ್ಷ ಹಲವು ವಿಭಾಗಗಳಲ್ಲಿ ಬಹಳಷ್ಟು ಕಾರುಗಳನ್ನು ಬಿಡುಗಡೆ ಮಾಡಿದೆ. ಸದ್ಯ ವರ್ಷಾಂತ್ಯ ಹತ್ತಿರವಾಗುತ್ತಿದ್ದಂತೆ, ವಾರ್ಷಿಕ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) ಪ್ರಶಸ್ತಿಗಳನ್ನು ನೀಡಲು ತಯಾರಾಗಿದೆ. ಈ ಪ್ರಶಸ್ತಿಗಳಲ್ಲಿ, ಉದ್ಯಮ ತಜ್ಞರು ಮೂರು ವಿಭಾಗಗಳಲ್ಲಿ ಅತ್ಯುತ್ತಮವಾದ ಮೂರು ಕಾರುಗಳನ್ನು ಗುರುತಿಸುತ್ತಾರೆ.

ICOTY 2025 ವರ್ಷದ ಭಾರತೀಯ ಕಾರು ಪ್ರಶಸ್ತಿಗೆ ಹೆಸರು ಘೋಷಣೆ: ಯಾವ ಕಾರೆಲ್ಲ ಇದೆ ನೋಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 19, 2024 | 10:28 AM

ICOTY (ವರ್ಷದ ಭಾರತೀಯ ಕಾರು) ಪ್ರಶಸ್ತಿಯ 20 ನೇ ಆವೃತ್ತಿಯ ಸ್ಪರ್ಧಿಗಳನ್ನು ಘೋಷಿಸಲಾಗಿದೆ. ಪ್ರಮುಖ ವಾಹನ ತಯಾರಕರಿಂದ ವೈವಿಧ್ಯಮಯ ಶ್ರೇಣಿಯ ವಾಹನಗಳನ್ನು ಇದರಲ್ಲಿ ಪ್ರದರ್ಶಿಸಲಾಗಿದೆ. ಈ ಲಿಸ್ಟ್​ನಲ್ಲಿ ಜನಪ್ರಿಯ ಎಸ್‌ಯುವಿಯ ಅತ್ಯಾಕರ್ಷಕ ಹೊಸ ರೂಪಾಂತರ ಮತ್ತು ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಮೇಲುಗೈ ಸಾಧಿಸಿರುವ ಕಾರುಗಳಿವೆ. ಮುಖ್ಯವಾಗಿ ಮಹೀಂದ್ರ ಥಾರ್ ರೋಕ್ಸ್, ಮಾರುತಿ ಸುಜುಕಿ ಸ್ವಿಫ್ಟ್ ಸೇರಿದಂತೆ ಕೆಲ ಕಾರುಗಳಿವೆ.

ಭಾರತೀಯ ವಾಹನ ಕ್ಷೇತ್ರವು ಈ ವರ್ಷ ಹಲವು ವಿಭಾಗಗಳಲ್ಲಿ ಬಹಳಷ್ಟು ಕಾರುಗಳನ್ನು ಬಿಡುಗಡೆ ಮಾಡಿದೆ. ಸದ್ಯ ವರ್ಷಾಂತ್ಯ ಹತ್ತಿರವಾಗುತ್ತಿದ್ದಂತೆ, ವಾರ್ಷಿಕ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) ಪ್ರಶಸ್ತಿಗಳನ್ನು ನೀಡಲು ತಯಾರಾಗಿದೆ. ಈ ಪ್ರಶಸ್ತಿಗಳಲ್ಲಿ, ಉದ್ಯಮ ತಜ್ಞರು ಮೂರು ವಿಭಾಗಗಳಲ್ಲಿ ಅತ್ಯುತ್ತಮವಾದ ಮೂರು ಕಾರುಗಳನ್ನು ಗುರುತಿಸುತ್ತಾರೆ. ಒಟ್ಟಾರೆಯಾಗಿ, ಪ್ರೀಮಿಯಂ ಕಾರು ವಿಭಾಗದಲ್ಲಿ ಮತ್ತು ಗ್ರೀನ್ ಕಾರ್ (EV) ವಿಭಾಗದಲ್ಲಿ ಆಯ್ಕೆ ಮಾಡಲಾಗುತ್ತದೆ.

ICOTY 2025 ರ ಮೂರು ವಿಭಾಗಗಳಲ್ಲಿ ಯಾವುದೆಲ್ಲ ಕಾರುಗಳಿವೆ ಎಂಬುದನ್ನು ನೋಡೋಣ:

ವರ್ಷದ ಭಾರತೀಯ ಕಾರು (ಒಟ್ಟಾರೆ):

ಮಹೀಂದ್ರ ಥಾರ್ ರೋಕ್ಸ್

ಮಾರುತಿ ಡಿಜೈರ್

ಮಾರುತಿ ಸ್ವಿಫ್ಟ್

ಎಂಜಿ ವಿಂಡ್ಸರ್ ಇವಿ

ಸಿಟ್ರೊಯೆನ್ ಬಸಾಲ್ಟ್

ಟಾಟಾ ಕರ್ವ್ & ಟಾಟಾ ಕರ್ವ್ EV

ಟಾಟಾ ಪಂಚ್ ಇವಿ

BYD eMAX 7

ಇದನ್ನೂ ಓದಿ: ಹೊಸ DND ಆ್ಯಪ್: ಕೋಟಿಗಟ್ಟಲೆ ಮೊಬೈಲ್ ಬಳಕೆದಾರರಿಗೆ ಬಿಗ್ ರಿಲೀಫ್ ನೀಡಿದ TRAI

ಪ್ರೀಮಿಯಂ ಕಾರು ಪ್ರಶಸ್ತಿ (ICOTY):

ಕಿಯಾ ಕಾರ್ನೀವಲ್

BYD ಸೀಲ್

ಮಿನಿ ಕೂಪರ್ ಎಸ್

ಮೆರ್ಸಿಡೀಸ್-ಬೆನ್ಜ್ E-ವರ್ಗ

ಮೆರ್ಸಿಡೀಸ್-ಬೆನ್ಜ್ EQS SUV & Maybach EQS SUV

BMW 5 ಸರಣಿ

BMW i5

BMW M5

ಗ್ರೀನ್ ಕಾರ್ ಪ್ರಶಸ್ತಿ (ICOTY):

ಟಾಟಾ ಪಂಚ್ ಇವಿ

ಟಾಟಾ ಕರ್ವ್ ಇವಿ

ಎಂಜಿ ವಿಂಡ್ಸರ್ ಇವಿ

BYD eMAX 7

BYD ಸೀಲ್

ಮಿನಿ ಕಂಟ್ರಿಮ್ಯಾನ್ ಇವಿ

BMW i5

ಮೆರ್ಸಿಡೀಸ್-ಬೆನ್ಜ್ EQS SUV & Maybach EQS SUV

ಟಾಟಾ, ಮೆರ್ಸಿಡೀಸ್-ಬೆನ್ಜ್ ಮತ್ತು BMW ಮೂರು ಕಂಪನಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ವಿಶೇಷ ಎಂದರೆ ಈ ಕಂಪನಿ ಮೂರು ಪಟ್ಟಿಯಲ್ಲಿದೆ. ಮಾರುತಿ, BYD ಮತ್ತು Mini ವಾರ್ಷಿಕ ಸ್ಪರ್ಧೆಯಲ್ಲಿ ತಲಾ ಎರಡು ಕಾರುಗಳೊಂದಿಗೆ ಸ್ಪರ್ಧಿಸುತ್ತಿವೆ. ಈ ವರ್ಷದ ICOTY ನಲ್ಲಿ ಮಹೀಂದ್ರಾ, ಕಿಯಾ, ಎಮ್​ಜಿ ಮತ್ತು ಸಿಟ್ರಾನ್ ತಲಾ ಒಂದು ಕಾರಿನೊಂದಿಗೆ ಸ್ಪರ್ಧಿಸುತ್ತಿದೆ.

ICOTY ವಾರ್ಷಿಕ ಈವೆಂಟ್ ಆಗಿದ್ದು, ಭಾರತದಲ್ಲಿನ ಎಲ್ಲಾ ಪ್ರಮುಖ 20 ಪತ್ರಕರ್ತರರು ತೀರ್ಪುಗಾರರಾಗಿ ಭಾಗವಹಿಸುತ್ತಾರೆ. ಇವರು ಮೂರು ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಕಾರ್ದೇಖೋದ ಪ್ರಧಾನ ಸಂಪಾದಕ, ಅಮೇಯಾ ದಾಂಡೇಕರ್ ಕೂಡ ಮೇಲೆ ತಿಳಿಸಲಾದ ಕಾರುಗಳನ್ನು ಮೌಲ್ಯಮಾಪನ ಮಾಡುವ ತೀರ್ಪುಗಾರರ ಒಂದು ಭಾಗವಾಗಿದೆ. ಬೆಲೆ, ಇಂಧನ ದಕ್ಷತೆ, ವಿನ್ಯಾಸ, ಸೌಕರ್ಯ, ಸುರಕ್ಷತೆ ಮತ್ತು ಕಾರ್ಯಕ್ಷಮತೆ ಸೇರಿದಂತೆ ಎಲ್ಲ ಅಂಶಗಳನ್ನು ಗಮನಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್
ಬೆಂಗಳೂರು: ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್
ಗೌತಮಿನ ಸ್ವಮ್ಮಿಂಗ್​ಪೂಲ್​ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
ಗೌತಮಿನ ಸ್ವಮ್ಮಿಂಗ್​ಪೂಲ್​ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ