AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ಚಾರ್ಜ್‌ಗೆ 949 ಕಿ.ಮೀ ಪ್ರಯಾಣಿಸಿ ಗಿನ್ನಿಸ್ ದಾಖಲೆ

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಜಂಟಿಯಾಗಿ ಇವಿ ಕಾರುಗಳ ಕ್ಷೇತ್ರದಲ್ಲಿ ಗಿನ್ನೆಸ್‌ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.

ಎಲೆಕ್ಟ್ರಿಕ್ ಕಾರಿನಲ್ಲಿ ಒಂದೇ ಚಾರ್ಜ್‌ಗೆ 949 ಕಿ.ಮೀ ಪ್ರಯಾಣಿಸಿ ಗಿನ್ನಿಸ್ ದಾಖಲೆ
ಒಂದು ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ
Praveen Sannamani
|

Updated on:Sep 09, 2024 | 8:14 PM

Share

ಐಷಾರಾಮಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮರ್ಸಿಡಿಸ್ ಬೆಂಝ್ (Mercedes-Benz) ಕಂಪನಿಯು ಇತ್ತೀಚೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಹೊಸ ಸಂಚಲನಕ್ಕೆ ಕಾರಣವಾಗಿದೆ. ತನ್ನ ಹೊಸ ಇಕ್ಯೂಎಸ್ 580 ಎಲೆಕ್ಟ್ರಿಕ್ ಸೆಡಾನ್ ಮೂಲಕ ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ್ದು, ಒಂದು ಚಾರ್ಜ್‌ಗೆ ಬರೋಬ್ಬರಿ 949 ಕಿ.ಮೀ ಸಂಚರಿಸುವ ಮೂಲಕ ಅಚ್ಚರಿ ಮೂಡಿಸಿದೆ.

ಒಂದೇ ಚಾರ್ಜ್ ನಲ್ಲಿ ಈ ಹಿಂದೆ ಯುಕೆಯಲ್ಲಿ ಫೋರ್ಡ್‌ ಮಸ್ಟಂಗ್‌ ಮ್ಯಾಚ್‌ ಇ ನಿರ್ಮಿಸಿದ್ದ 916.74 ಕಿ.ಮೀ ದೂರದ ಪ್ರಯಾಣದ ದಾಖಲೆಯನ್ನು ಇದೀಗ ಇಕ್ಯೂಎಸ್ 580 ಎಲೆಕ್ಟ್ರಿಕ್ ಸೆಡಾನ್ ಮುರಿದಿದ್ದು, ಫೋರ್ಡ್‌ ಮಸ್ಟಂಗ್‌ ಮ್ಯಾಚ್‌ ಇ ಕಾರಿಗಿಂತಲೂ 32.6 ಕಿ.ಮೀ ಹೆಚ್ಚು ಕ್ರಮಿಸಿ ಹೊಸ ಮೈಲಿಗಲ್ಲು ಸಾಧಿಸಿದೆ.

ಆಟೋಕಾರ್ ಇಂಡಿಯಾ ಸಂಸ್ಥೆಯೊಂದಿಗೆ ಜಂಟಿಯಾಗಿ ಹೊಸ ದಾಖಲೆ ನಿರ್ಮಿಸಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಇವಿ ಕಾರುಗಳ ಕ್ಷೇತ್ರದಲ್ಲಿ ಹೊಸ ಮುನ್ನಡೆ ಬರೆದಿದ್ದು, ಹಲವು ಅಡೆತಡೆಗಳ ನಡುವೆಯೂ ನಮ್ಮ ಬೆಂಗಳೂರಿನಿಂದ ಆರಂಭಗೊಂಡಿದ್ದ ಪ್ರಯಾಣವು ಬರೋಬ್ಬರಿ 20 ಗಂಟೆಗಳ ಪ್ರಯಾಣದೊಂದಿಗೆ ನವೀ ಮುಂಬೈ ತಲುಪಿದೆ.

ಗಿನ್ನಿಸ್ ದಾಖಲೆಯ ವೇಳೆ ಇಕ್ಯೂಎಸ್ 580 ಕಾರು ಪ್ರಮಾಣೀಕೃತ ರೇಂಜ್‌ಗಿಂತಲೂ ಶೇಕಡಾ 10ಕ್ಕಿಂತ ಹೆಚ್ಚು ಮೈಲೇಜ್ ನೀಡಿದೆ. 107.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಇಕ್ಯೂಎಸ್ 580 ಕಾರು ಮಾದರಿಯು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಧಿಕೃತ ರೇಂಜ್ ನೀಡುವ ಕಾರು ಆವೃತ್ತಿಯಾಗಿ ಹೊರಹೊಮ್ಮಿದ್ದು, ಇದು ಎಆರ್‌ಎಐ ಪ್ರಕಾರ 857 ಕಿ.ಮೀ ರೇಂಜ್ ನೀಡುತ್ತದೆ. ಆದರೆ ಪ್ರಮಾಣೀಕೃತ ರೇಂಜ್‌ಗಿಂತಲೂ ಶೇಕಡಾ 10ಕ್ಕಿಂತ ಹೆಚ್ಚು ಮೈಲೇಜ್ ಪಡೆಯಲಾಗಿದ್ದು, ಪ್ರಯಾಣದ ಉದ್ದಕ್ಕೂ ಎಕಾನಮಿ ಮೋಡ್ ನಲ್ಲಿಯೇ ಪ್ರಯಾಣಿಸಲಾಗಿದೆ.

ಇದನ್ನೂ ಓದಿ: ಸನ್‌ರೂಫ್‌ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!

ಪ್ರಯಾಣದ ವೇಳೆ ರೇಂಜ್ ಹೆಚ್ಚಿಸುವ ಉದ್ದೇಶದಿಂದ ಹೆದ್ದಾರಿಯಲ್ಲಿ ಪ್ರತಿ ಗಂಟೆಗೆ ಸರಾಸರಿ 50ರಿಂದ60 ಕಿ.ಮೀ ವೇಗವನ್ನು ಕಾಯ್ದುಕೊಳ್ಳಲಾಗಿತ್ತು. ಅದೇ ರೀತಿ ಬ್ಯಾಟರಿ ಪ್ಯಾಕ್‌ ನೆರವಿನಿಂದ ಕೊನೆಯ ಕಿಲೋಮೀಟರ್ ತನಕ ಪ್ರಯಾಣಿಸಲು ಕಾರಿನಲ್ಲಿರುವ ಎಲ್ಲಾ ಮೂರು ಹಂತದ ರೀಜೆನ್ ಅನ್ನು ಬಳಸಲಾಗಿದ್ದು, ಈ ಎಲ್ಲ ಯೋಜನೆಗಳು ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿ ಪಡೆಯಲು ನೆರವಾಗಿದೆ.

ಕಾರು ಚಾಲನೆ ಸಂದರ್ಭದಲ್ಲಿ ಬೆಂಗಳೂರಿನಿಂದ ನವೀ ಮುಂಬೈಗೆ ಹೋಗುವ ಮಾರ್ಗದುದ್ದಕ್ಕೂ ಧಾರಾಕಾರ ಮಳೆಯೂ ನಡುವೆಯೂ ಇಕ್ಯೂಎಸ್ 580 ಬ್ಯಾಟರಿ ರೇಂಜ್ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಜೊತೆಗೆ ಮಳೆಯಿಂದಾಗಿ ಮಾರ್ಗದುದ್ದಕ್ಕೂ ಅನೇಕ ಕಡೆ ರಸ್ತೆ ಬದಲಾವಣೆಗಳನ್ನು ಮಾಡಿದ್ದ ಇಕ್ಯೂಎಸ್ 580 ಕಾರು ಕೊನೆಯ ಹಂತದಲ್ಲಿರುವ ಆಘಾತಕಾರಿ ಎಂಬಂತೆ ಕಾರಿನ ಹಿಂಬದಿಯ ಟಯರ್ ಪಂಚರ್ ಕೂಡಾ ಸಂಭವಿಸಿತ್ತು. ಆದರೆ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಮೂಲಕ ಪ್ರಯಾಣ ಮುಂದುವರಿಸಿ ನಿರೀಕ್ಷಿತ ಗುರಿ ಮುಟ್ಟಲಾಗಿದೆ.

ಇದನ್ನೂ ಓದಿ: ಹೊಸ ಕಾರು ಖರೀದಿಸುವಾಗ ಯಾವ ವೆರಿಯೆಂಟ್ ಗಳು ಖರೀದಿಗೆ ಬೆಸ್ಟ್?

ಇನ್ನು ಮೇಡ್ ಇನ್ ಇಂಡಿಯಾ ಖ್ಯಾತಿಯ ಇಕ್ಯೂಎಸ್ ಸೆಡಾನ್ ಕಾರು ಮಾದರಿಯು ಸದ್ಯ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಇದು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 1.62 ಕೋಟಿ ಬೆಲೆಯೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್ ಹೊಂದಿದೆ. 750 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ಇದು ಫೋರ್ ಮ್ಯಾಟಿಕ್ ಡ್ರೈವ್ ಸಿಸ್ಟಂನೊಂದಿಗೆ ಹಲವಾರು ಸೇಫ್ಟಿ ಫೀಚರ್ಸ್ ಜೋಡಣೆ ಹೊಂದಿದೆ.

Published On - 7:26 pm, Mon, 9 September 24