Car Variants: ಹೊಸ ಕಾರು ಖರೀದಿಸುವಾಗ ಯಾವ ವೆರಿಯೆಂಟ್ ಗಳು ಖರೀದಿಗೆ ಬೆಸ್ಟ್?

ವಾಹನಗಳ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಖರೀದಿ ಭರಾಟೆ ಜೋರಾಗಿದ್ದು, ಹೊಸ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಗಳನ್ನು ಹೊಂದಿರುತ್ತವೆ. ಹಾಗಾದ್ರೆ ವಿವಿಧ ವೆರಿಯೆಂಟ್ ಗಳಲ್ಲಿ ಯಾವ ವೆರಿಯೆಂಟ್ ಖರೀದಿಗೆ ಸೂಕ್ತ ಎನ್ನವ ಕುರಿತಾಗಿ ಇಲ್ಲಿ ಚರ್ಚಿಸಲಾಗಿದೆ.

Car Variants: ಹೊಸ ಕಾರು ಖರೀದಿಸುವಾಗ ಯಾವ ವೆರಿಯೆಂಟ್ ಗಳು ಖರೀದಿಗೆ ಬೆಸ್ಟ್?
ಹೊಸ ಕಾರು ಖರೀದಿಸುವಾಗ ಯಾವ ವೆರಿಯೆಂಟ್ ಗಳು ಖರೀದಿಗೆ ಬೆಸ್ಟ್?
Follow us
|

Updated on: Aug 29, 2024 | 7:39 PM

ಹೊಸ ಕಾರುಗಳ (New Cars) ಖರೀದಿ ಸಂದರ್ಭದಲ್ಲಿ ಬಹುತೇಕ ಗ್ರಾಹಕರಿಗೆ ಎದುರಾಗುವ ಪ್ರಶ್ನೆಯೆಂದರೆ ಅದು ಯಾವ ವೆರಿಯೆಂಟ್ ಖರೀದಿ ಮಾಡಿದ್ರೆ ಸೂಕ್ತ ಎನ್ನುವುದು. ಯಾಕೆಂದರೆ ಇತ್ತೀಚೆಗೆ ಬಿಡುಗಡೆಯಾಗ ಹೊಸ ಕಾರುಗಳಲ್ಲಿ ಕಾರು ಉತ್ಪಾದನಾ ಕಂಪನಿಗಳ ಗ್ರಾಹಕರ ಬೇಡಿಕೆ ಆಧರಿಸಿ 10ಕ್ಕಿಂತಲೂ ಹೆಚ್ಚಿನ ವೆರಿಯೆಂಟ್ ಗಳನ್ನು ಪರಿಚಯಿಸುತ್ತಿವೆ. ಈ ವೇಳೆ ಗ್ರಾಹಕರಿಗೆ ಯಾವ ವೆರಿಯೆಂಟ್ ಖರೀದಿ ಮಾಡಿದ್ರೆ ಸೂಕ್ತ ಎನ್ನುವ ಗೊಂದಲ ಆರಂಭವಾಗುತ್ತವೆ. ಹೀಗಾಗಿ ವೆರಿಯೆಂಟ್ ಗಳ ಆಯ್ಕೆ ವೇಳೆ ಗ್ರಾಹಕರನ್ನು ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕೆಂಬುವುದನ್ನು ಇಲ್ಲಿ ತಿಳಿಯೋಣ.

ಇಂಧನ ಪ್ರಕಾರವನ್ನು ನಿರ್ಧರಿಸಿ

ಹೊಸ ಕಾರುಗಳ ಖರೀದಿ ಸಂದರ್ಭದಲ್ಲಿ ಮುಖ್ಯವಾಗಿ ಯಾವ ಇಂಧನ ಮಾದರಿಯನ್ನು ಖರೀದಿ ಮಾಡಬೇಕೆಂಬುವುದನ್ನು ನಿರ್ಧರಿಸಿ. ಪೆಟ್ರೋಲ್ ಅಥವಾ ಡೀಸೆಲ್ ಇಲ್ಲವೇ ಪರಿಸರ ಸ್ನೇಹಿಯಾಗಿರುವ ಸಿಎನ್ ಜಿ ಅಥವಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಬಹುದಾಗಿದ್ದು, ವಿವಿಧ ಇಂಧನ ಮಾದರಿಗಳು ವೈಯುಕ್ತಿಕ ಬಳಕೆಗಾ ಇಲ್ಲವೇ ವಾಣಿಜ್ಯ ಬಳಕೆಗಾ ಎಂಬುವುದರ ಮೊದಲು ನಿರ್ಧರಿಸಬೇಕು.

ಬಜೆಟ್ ಮೇಲೆ ವೆರಿಯೆಂಟ್ ಆಯ್ಕೆ

ಹೊಸ ಕಾರುಗಳ ಖರೀದಿ ಸಂದರ್ಭದಲ್ಲಿ ಗ್ರಾಹಕರು ಮುಖ್ಯವಾಗಿ ಬಜೆಟ್ ಗಾತ್ರಕ್ಕೆ ಅನುಗುಣವಾಗಿ ವೆರಿಯೆಂಟ್ ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಯಾಕೆಂದರೆ ಒಂದು ಕಾರು ವಿವಿಧ ವೆರಿಯೆಂಟ್ ಗಳನ್ನು ಹೊಂದಿರಲಿದ್ದು, ಇದರಲ್ಲಿ ಆರಂಭಿಕ ವೆರಿಯೆಂಟ್ ಮತ್ತು ಟಾಪ್ ಎಂಡ್ ವೆರಿಯೆಂಟ್ ಗಳ ಬೆಲೆಯಲ್ಲಿ ಸಾಕಷ್ಟು ಅಂತರವಿರತ್ತದೆ. ಉದಾಹರಣೆ ಹೇಳುವುದಾರೇ ಟಾಟಾ ನೆಕ್ಸಾನ್ ಸದ್ಯ ಬರೋಬ್ಬರಿ 95 ಸಬ್ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 8 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ರೂ. 13.20 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ ಆರಂಭಿಕ ವೆರಿಯೆಂಟ್ ಗೂ ಮತ್ತು ಟಾಪ್ ಎಂಡ್ ವೆರಿಯೆಂಟ್ ಗೂ ಸುಮಾರು ರೂ. 5.20 ಲಕ್ಷ ಬೆಲೆ ಅಂತರವನ್ನು ನೋಡಬಹುದಾಗಿದೆ.

ವಿವಿಧ ವೆರಿಯೆಂಟ್ ಗಳಲ್ಲಿ ಕಾರು ಉತ್ಪಾದನಾ ಕಂಪನಿಗಳು ಬೆಲೆಗೆ ತಕ್ಕಂತೆ ಎಂಜಿನ್ ಆಯ್ಕೆ, ಗೇರ್ ಬಾಕ್ಸ್ ಆಯ್ಕೆ ಮತ್ತು ಫೀಚರ್ಸ್ ಗಳನ್ನು ಜೋಡಣೆ ಮಾಡಲಿದ್ದು, ಇದರಿಂದ ವೆರಿಯೆಂಟ್ ಗಳನ್ನು ಖರೀದಿಸುವಾಗ ನಿಮ್ಮ ಬಜೆಟ್ ಮತ್ತು ಆದ್ಯತೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಸನ್‌ರೂಫ್‌ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!

ಬೇಸಿಕ್ ವೆರಿಯೆಂಟ್ vs ಟಾಪ್ ಎಂಡ್ ವೆರಿಯೆಂಟ್

ಹೊಸ ಕಾರುಗಳಲ್ಲಿ ಆರಂಭಿಕ ವೆರಿಯೆಂಟ್ ಮತ್ತು ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿನ ಎಂಜಿನ್ ಆಯ್ಕೆ ಒಂದೇ ಆಗಿದ್ದರೂ ಸಹ ಅದರಲ್ಲಿ ಗೇರ್ ಬಾಕ್ಸ್ ಆಯ್ಕೆಗಳು ಮತ್ತು ಪ್ರೀಮಿಯಂ ಫೀಚರ್ಸ್ ಗಳ ಜೋಡಣೆಗೆ ಅನುಗುಣವಾಗಿ ಬೆಲೆ ಹೆಚ್ಚುತ್ತಾ ಹೋಗುತ್ತದೆ. ಒಂದು ವೇಳೆ ನಿಮ್ಮ ಬಳಿ ಹೆಚ್ಚಿನ ಬಜೆಟ್ ಲಭ್ಯವಿದ್ದು, ಪ್ರೀಮಿಯಂ ಕಾರು ಚಾಲನೆ ಅನುಭವ ಬಯಸುವುದಾರೇ ಟಾಪ್ ಎಂಡ್ ವೆರಿಯೆಂಟ್ ಗಳನ್ನೇ ಖರೀದಿಸಬಹುದು. ಇಲ್ಲವಾದರೆ ಸಿಮಿತ ಲಭ್ಯವಿದ್ದರೆ ಅಗತ್ಯವಾಗಿರುವ ಫೀಚರ್ಸ್ ಗಳನ್ನು ಒಳಗೊಂಡಿರುವ ಮಧ್ಯಮ ಕ್ರಮದಲ್ಲಿನ ವೆರಿಯೆಂಟ್ ಗಳನ್ನು ಆಯ್ಕೆ ಮಾಡುವುದು ಸೂಕ್ತ ಎನ್ನಬಹುದು.

ಇದನ್ನೂ ಓದಿ: ಗುಜರಿ ಪಾಲಿಸಿ ಅಡಿ ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್

ವಿವಿಧ ವೆರಿಯೆಂಟ್ ಗಳಲ್ಲಿನ ಫೀಚರ್ಸ್

ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದ ಕಾರುಗಳಲ್ಲಿ ಗಮನಾರ್ಹವಾದ ಫೀಚರ್ಸ್ ಗಳನ್ನು ನೋಡಬಹುದಾಗಿದ್ದು, ಆರಂಭಿಕ ಮಾದರಿಯಲ್ಲೂ ಸಹ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗುತ್ತಿದೆ. ಆರಂಭಿಕ ಕಾರ್ ವೆರಿಯೆಂಟ್ ಗಳಲ್ಲಿ ಅರಾಮದಾಯಕ ಚಾಲನೆಗೆ ಅನೂಕರವಾದ ಹಲವು ಫೀಚರ್ಸ್ ಗಳಿದ್ದು, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಟಾಪ್ ಎಂಡ್ ಮಾದರಿಗಳಲ್ಲಿ ದೊಡ್ಡದಾದ ಇನ್ಪೋಟೈನ್ ಸಿಸ್ಟಂ, ಸನ್ ರೂಫ್, ಪ್ರೀಮಿಯಂ ಆಡಿಯೋ ಸಿಸ್ಟಂ, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೆಂಟಿಲೆಟೆಡ್ ಆಸನ ಸೌಲಭ್ಯಗಳನ್ನು ನೋಡಬಹುದಾಗಿದೆ. ಹೀಗಾಗಿ ಕಾರು ಖರೀದಿಸುವಾಗ ಹೆಚ್ಚಿನ ಬಜೆಟ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯನ್ನು ಇಲ್ಲವೇ ಸೀಮಿತ ಬಜೆಟ್ ಲಭ್ಯವಿದ್ದಲ್ಲಿ ಆರಂಭಿಕ ಅಥವಾ ಮಧ್ಯಮ ಕ್ರಮಾಂಕದ ವೆರಿಯೆಂಟ್ ಆಯ್ಕೆ ಉತ್ತಮವಾಗಿರುತ್ತದೆ.

ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!