
(ಬೆಂಗಳೂರು, ಮಾ: 13): ಭಾರತದ ಪ್ರಸಿದ್ಧ ಟಾಟಾ ಮೋಟಾರ್ಸ್ (TATA Motors) ಕಂಪನಿ ಕಡಿಮೆ ಬೆಲೆಗೆ ಅತ್ಯುತ್ತಮ ವಾಹನಗಳನ್ನು ತಯಾರಿಸುತ್ತಿದೆ. ಸುರಕ್ಷತೆಗೆ ಮತ್ತೊಂದು ಹೆಸರೇ ಟಾಟಾ ಕಾರು ಎನ್ನಬಹುದು. ಟಾಟಾ ಕಂಪನಿಯ ಕಾರಿನ ಲಿಸ್ಟ್ನಲ್ಲಿ ಟಿಯಾಗೊ ಕೂಡ ಒಂದು. ಅತ್ಯಂತ ಅಗ್ಗದ ಮತ್ತು ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿರುವ ಟಾಟಾ ಟಿಯಾಗೊವನ್ನು ಪೆಟ್ರೋಲ್ ಜೊತೆಗೆ ಸಿಎನ್‌ಜಿ ಆಯ್ಕೆಯಲ್ಲಿಯೂ ಖರೀದಿಸಬಹುದು. ನೀವು ಹೊಸ CNG ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, 4 ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿರುವ ಈ ಕಾರಿನ ಅಗ್ಗದ CNG ಮಾದರಿಗೆ ಹೋಗಬಹುದು.
ಟಾಟಾ ಟಿಯಾಗೊದ ಅತ್ಯಂತ ಅಗ್ಗದ ಸಿಎನ್‌ಜಿ ಮಾದರಿ ರೂ. 5 ಲಕ್ಷ 99 ಸಾವಿರ 990 (ಎಕ್ಸ್-ಶೋರೂಂ) ಗೆ ಲಭ್ಯವಿದೆ. ಈ ಬೆಲೆಯಲ್ಲಿ ನೀವು ಈ ಕಾರಿನ ಅಟೊಮೆಟಿಕ್ ಆಯ್ಕೆಯ ರೂಪಾಂತರವನ್ನು ಪಡೆಯುತ್ತೀರಿ. ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಸಿಎನ್‌ಜಿ ಮಾದರಿಯ ಟಾಪ್ ರೂಪಾಂತರವನ್ನು ಖರೀದಿಸಲು, ನೀವು 8 ಲಕ್ಷ 19 ಸಾವಿರ 990 ರೂ. ಗಳನ್ನು (ಎಕ್ಸ್ ಶೋ ರೂಂ) ಖರ್ಚು ಮಾಡಬೇಕಾಗುತ್ತದೆ.
ಟಾಟಾ ಮೋಟಾರ್ಸ್‌ನ ಈ ಜನಪ್ರಿಯ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಮಾದರಿಯು ಒಂದು ಕಿಲೋಗ್ರಾಂನಲ್ಲಿ ಎಷ್ಟು ಕಿಲೋಮೀಟರ್ ಕ್ರಮಿಸುತ್ತದೆ ಎಂಬುದನ್ನು ನೋಡುವುದಾದರೆ.. ಕಾರ್‌ದೇಖೋ ವರದಿಯ ಪ್ರಕಾರ, ಈ ಕಾರು ಒಂದು ಕಿಲೋಗ್ರಾಂ ಸಿಎನ್‌ಜಿಯಲ್ಲಿ 26.49 ಕಿಲೋ ಮೀಟರ್ ಗಳವರೆಗೆ ಓಡಬಲ್ಲದು. ಬೂಟ್ ಸ್ಪೇಸ್ ಬಗ್ಗೆ ಹೇಳುವುದಾದರೆ, ಕಂಪನಿಯು ಈಗ CNG ಯೊಂದಿಗೆ ಪೂರ್ಣ ಬೂಟ್ ಸ್ಪೇಸ್ ಅನ್ನು ಸಹ ನೀಡುತ್ತದೆ, ಅಂದರೆ, CNG ಸಿಲಿಂಡರ್ ಹೊಂದಿದ್ದರೂ ಸಹ, ಈ ಕಾರಿನಲ್ಲಿ ನೀವು 242 ಲೀಟರ್ ಬೂಟ್ ಸ್ಪೇಸ್ ಪಡೆಯುತ್ತೀರಿ.
Hero Splendor Plus: ಹೊಸ ಅವತಾರದಲ್ಲಿ ಬರುತ್ತಿದೆ ಭಾರತದ ನಂಬರ್ 1 ಬೈಕ್: ಯಾವುದು?, ಬೆಲೆ ಎಷ್ಟು?
ಟಾಟಾ ಟಿಯಾಗೊ 1199 ಸಿಸಿ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಕಾರಿನಲ್ಲಿರುವ ಈ ಎಂಜಿನ್ 6,000 rpm ನಲ್ಲಿ 86 PS ಪವರ್ ಮತ್ತು 3,300 rpm ನಲ್ಲಿ 113 Nm ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಟಿಯಾಗೊ ಸಿಎನ್‌ಜಿಯಲ್ಲಿರುವ ಎಂಜಿನ್ 6,000 ಆರ್‌ಪಿಎಂನಲ್ಲಿ 75.5 ಪಿಎಸ್ ಪವರ್ ಮತ್ತು 3,500 ಆರ್‌ಪಿಎಂನಲ್ಲಿ 96.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಟಾಟಾ ಕಾರಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳಿವೆ.
ಟಾಟಾ ಟಿಯಾಗೊ ಕಾರು ಹುಂಡೈನ ಅಗ್ಗದ ಮತ್ತು ಜನಪ್ರಿಯ ಹ್ಯಾಚ್‌ಬ್ಯಾಕ್ ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಮಾರುತಿ ಸುಜುಕಿ ಸೆಲೆರಿಯೊ ಜೊತೆ ಸ್ಪರ್ಧಿಸುತ್ತದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Fri, 14 March 25