Sign In

By signing in or creating an account, you agree with Associated Broadcasting Company's Terms & Conditions and Privacy Policy.

Kia Carens: ಕಿಯಾದ 7 ಆಸನಗಳ ಈ ಫ್ಯಾಮಿಲಿ ಕಾರಿಗೆ ಭರ್ಜರಿ ಡಿಮ್ಯಾಂಡ್: 2 ಲಕ್ಷ ಯುನಿಟ್ಸ್ ಸೇಲ್

Kia Carens: ಕಿಯಾ ಕ್ಯಾರೆನ್ಸ್ ಬಹಳ ಕಡಿಮೆ ಅವಧಿಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ. ಆರಾಮದಾಯಕ ಮತ್ತು ವೈಶಿಷ್ಟ್ಯಪೂರ್ಣ ಕಾರನ್ನು ಬಯಸುವ ಕುಟುಂಬಗಳಿಗೆ ಈ MPV ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಇದು ಸ್ಟೈಲಿಶ್ ಆಗಿಯೂ ಕಾಣುತ್ತದೆ. ಕ್ಯಾರೆನ್ಸ್‌ನ ಯಶಸ್ಸಿಗೆ ಪ್ರಮುಖ ಕಾರಣವೆಂದರೆ ಅದರ ಉನ್ನತ ಮಾದರಿಗಳಿಗೆ ಇರುವ ಅಪಾರ ಬೇಡಿಕೆ. ಒಟ್ಟು ಮಾರಾಟದಲ್ಲಿ ಟಾಪ್ ಮಾಡೆಲ್‌ಗಳ ಮಾರಾಟವು ಶೇಕಡಾ 24 ರಷ್ಟಿದೆ.

Kia Carens: ಕಿಯಾದ 7 ಆಸನಗಳ ಈ ಫ್ಯಾಮಿಲಿ ಕಾರಿಗೆ ಭರ್ಜರಿ ಡಿಮ್ಯಾಂಡ್: 2 ಲಕ್ಷ ಯುನಿಟ್ಸ್ ಸೇಲ್
Kia Carens
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on: Mar 09, 2025 | 3:42 PM

Kia Carens 2 Lakh Units Sold In India: ಕಿಯಾ ಸೆಲ್ಟೋಸ್ ಮತ್ತು ಸೋನೆಟ್ ನಂತರ, ಈಗ ಕಿಯಾದ ಕೈಗೆಟುಕುವ 7 ಆಸನಗಳ ಫ್ಯಾಮಿಲಿ ಕಾರು ಕ್ಯಾರೆನ್ಸ್ ದೊಡ್ಡ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಕ್ಯಾರೆನ್ಸ್ ಬಿಡುಗಡೆಯಾದ ಕೇವಲ 36 ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಮೂಲಕ ಕಿಯಾ ದೊಡ್ಡ ಸಾಧನೆ ಮಾಡಿದೆ. ಇದು ಕಿಯಾ ಇಂಡಿಯಾದ ಫ್ಯಾಮಿಲಿ ಕಾರಾಗಿದ್ದು, ಈ ವಿಭಾಗದಲ್ಲಿ ವೇಗವಾಗಿ ಮಾರಾಟವಾಗುವ ವಾಹನಗಳಲ್ಲಿ ಒಂದಾಗಿದೆ. ಭಾರತವನ್ನು ಹೊರತುಪಡಿಸಿ, ಕಂಪನಿಯು ಇದನ್ನು 70 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಿದೆ. ಕ್ಯಾರೆನ್ಸ್‌ನ ಜನಪ್ರಿಯತೆಯು ಅದರ ಸೌಕರ್ಯ, ಸ್ಪೇಸ್, ತಂತ್ರಜ್ಞಾನ ಮತ್ತು ಶೈಲಿಯಿಂದಾಗಿದೆ.

ಈ ಅದ್ಭುತ ವೈಶಿಷ್ಟ್ಯಕ್ಕೆ ಗ್ರಾಹಕರು ಫಿದಾ:

ಕಿಯಾ ಕ್ಯಾರೆನ್ಸ್ ಬಹಳ ಕಡಿಮೆ ಅವಧಿಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ. ಆರಾಮದಾಯಕ ಮತ್ತು ವೈಶಿಷ್ಟ್ಯಪೂರ್ಣ ಕಾರನ್ನು ಬಯಸುವ ಕುಟುಂಬಗಳಿಗೆ ಈ MPV ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಇದು ಸ್ಟೈಲಿಶ್ ಆಗಿಯೂ ಕಾಣುತ್ತದೆ. ಕ್ಯಾರೆನ್ಸ್‌ನ ಯಶಸ್ಸಿಗೆ ಪ್ರಮುಖ ಕಾರಣವೆಂದರೆ ಅದರ ಉನ್ನತ ಮಾದರಿಗಳಿಗೆ ಇರುವ ಅಪಾರ ಬೇಡಿಕೆ. ಒಟ್ಟು ಮಾರಾಟದಲ್ಲಿ ಟಾಪ್ ಮಾಡೆಲ್‌ಗಳ ಮಾರಾಟವು ಶೇಕಡಾ 24 ರಷ್ಟಿದೆ. ಸನ್‌ರೂಫ್, ವಿಭಿನ್ನ ಚಾಲನಾ ವಿಧಾನಗಳು, ಗಾಳಿ ಇರುವ ಸೀಟುಗಳು ಮತ್ತು ಕಿಯಾ ಕನೆಕ್ಟ್‌ನಂತಹ ವೈಶಿಷ್ಟ್ಯಗಳು ಜನರನ್ನು ಈ ಮಾದರಿಗಳ ಕಡೆಗೆ ಆಕರ್ಷಿಸುತ್ತವೆ. ಈ ವೈಶಿಷ್ಟ್ಯಗಳು ಕಾರನ್ನು ಇನ್ನಷ್ಟು ಪ್ರೀಮಿಯಂ ಆಗಿ ಮಾಡುತ್ತದೆ ಮತ್ತು ಗ್ರಾಹಕರಿಗೆ ಉತ್ತಮ ಚಾಲನಾ ಅನುಭವವನ್ನು ನೀಡುತ್ತದೆ.

Ultraviolette Scooter: ಫೋನ್‌ನಂತೆಯೇ, ಮುಂಭಾಗ-ಹಿಂಭಾಗ ಕ್ಯಾಮೆರಾ ಇರುವ ಮೊಟ್ಟ ಮೊದಲ ಸ್ಕೂಟರ್ ಬಿಡುಗಡೆ: ಬೆಲೆ ಎಷ್ಟು?

ಪೆಟ್ರೋಲ್ ಆವೃತ್ತಿ ಹೆಚ್ಚು ಜನಪ್ರಿಯವಾಗಿದೆ:

ಗ್ರಾಹಕರು ಪೆಟ್ರೋಲ್ ರೂಪಾಂತರವನ್ನು ಹೆಚ್ಚು ಇಷ್ಟಪಡುತ್ತಾರೋ ಅಥವಾ ಡೀಸೆಲ್ ಅನ್ನು ಹೆಚ್ಚು ಇಷ್ಟಪಡುತ್ತಾರೋ ಎಂಬ ಅಂಕಿಅಂಶಗಳನ್ನು ಗಮನಿಸಿದಾಗ ಪೆಟ್ರೋಲ್ ಆವೃತ್ತಿಯು ಹೆಚ್ಚು ಜನಪ್ರಿಯವಾಗಿದೆ ಎಂಬುದು ತಿಳಿದುಬಂದಿದೆ. ಶೇ. 58 ರಷ್ಟು ಜನರು ಪೆಟ್ರೋಲ್ ಆವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆ, ಶೇ. 42 ರಷ್ಟು ಜನರು ಡೀಸೆಲ್ ಆವೃತ್ತಿಯನ್ನು ಖರೀದಿಸುತ್ತಿದ್ದಾರೆ. ಅಟೊಮೆಟಿಕ್ ಮತ್ತು iMT ಗೇರ್ ಹೊಂದಿರುವ ಮಾದರಿಗಳು ಸಹ ಸಾಕಷ್ಟು ಪ್ರಸಿದ್ಧವಾಗಿವೆ. ಶೇ. 32 ರಷ್ಟು ಗ್ರಾಹಕರು ಈ ಟ್ರಾನ್ಸ್‌ಮಿಷನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಏಕೆಂದರೆ ಅವು ಚಾಲನೆಯನ್ನು ಸುಲಭಗೊಳಿಸುತ್ತವೆ. iMT ಗೇರ್‌ಗಳು ಕ್ಲಚ್ ಇಲ್ಲದೆಯೇ ಗೇರ್‌ಗಳನ್ನು ಬದಲಾಯಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಜನರು ಸನ್‌ರೂಫ್ ಅನ್ನು ತುಂಬಾ ಇಷ್ಟಪಡುತ್ತಿದ್ದಾರೆ ಮತ್ತು ಶೇ. 28 ರಷ್ಟು ಖರೀದಿದಾರರು ಸನ್‌ರೂಫ್ ಹೊಂದಿರುವ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗರಿಷ್ಠ ಜನರು 7 ಆಸನಗಳ ಮಾದರಿಯನ್ನು ಖರೀದಿಸುತ್ತಿದ್ದಾರೆ, ಇದು ಒಟ್ಟು ಮಾರಾಟದ ಶೇಕಡಾ 95 ರಷ್ಟಿದೆ.

ವಿದೇಶಗಳಲ್ಲಿಯೂ ಭಾರಿ ಬೇಡಿಕೆ:

ಕಿಯಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಹರ್ದೀಪ್ ಸಿಂಗ್ ಬ್ರಾರ್, ಕ್ಯಾರೆನ್ಸ್‌ನ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಕಿಯಾ ಕ್ಯಾರೆನ್ಸ್‌ನ ಯಶಸ್ಸು ಭಾರತೀಯ ಕುಟುಂಬಗಳ ಬದಲಾಗುತ್ತಿರುವ ಅಗತ್ಯಗಳ ಬಗ್ಗೆ ನಮ್ಮ ಆಳವಾದ ತಿಳುವಳಿಕೆ, ನಂಬಿಕೆ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ತನ್ನ ಸುಧಾರಿತ ವೈಶಿಷ್ಟ್ಯಗಳು, ವಿಶಾಲವಾದ ಒಳಾಂಗಣಗಳು ಮತ್ತು ಅತ್ಯುತ್ತಮ ಸುರಕ್ಷತೆಯೊಂದಿಗೆ, ಕ್ಯಾರೆನ್ಸ್ ಫ್ಯಾಮಿಲಿ ಮೂವರ್ ವಿಭಾಗವನ್ನು ಮರು ವ್ಯಾಖ್ಯಾನಿಸಿದೆ. ಕ್ಯಾರೆನ್ಸ್‌ ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಜನಪ್ರಿಯವಾಗುತ್ತಿವೆ. ಕಂಪನಿಯು 24,064 ಕ್ಯಾರೆನ್ಸ್ ವಾಹನಗಳನ್ನು 70 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕ್ಯಾರೆನ್ಸ್‌ನ ಆರಂಭಿಕ ಎಕ್ಸ್-ಶೋರೂಂ ಬೆಲೆ 10.6 ಲಕ್ಷ ರೂ. ಗಳಿಂದ 19.7 ಲಕ್ಷ ರೂ. ಗಳವರೆಗೆ ಇದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!