Ultraviolette Scooter: ಫೋನ್‌ನಂತೆಯೇ, ಮುಂಭಾಗ-ಹಿಂಭಾಗ ಕ್ಯಾಮೆರಾ ಇರುವ ಮೊಟ್ಟ ಮೊದಲ ಸ್ಕೂಟರ್ ಬಿಡುಗಡೆ: ಬೆಲೆ ಎಷ್ಟು?
ಅಲ್ಟ್ರಾವೈಲೆಟ್ ಆಟೋಮೋಟಿವ್‌ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಸೆರಾಕ್ಟ್ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಡ್ಯುಯಲ್ ರಾಡಾರ್ ಜೊತೆಗೆ, ನೀವು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ಯಾಶ್ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ. ರಾಡಾರ್ ವ್ಯವಸ್ಥೆಯು ನಿಮಗೆ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಓವರ್ ಟೇಕ್ ಅಲರ್ಟ್ ಮತ್ತು ಡಿಕ್ಕಿಯ ಎಚ್ಚರಿಕೆಯನ್ನು ನೀಡುತ್ತದೆ.

ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಅಲ್ಟ್ರಾವೈಲೆಟ್ ಆಟೋಮೋಟಿವ್‌ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಸೆರಾಕ್ಟ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಸ್ಕೂಟರ್‌ನಲ್ಲಿ ಬೇರೆ ಯಾವುದೇ ಸ್ಕೂಟರ್‌ನಲ್ಲಿ ಕಾಣದಂತಹ ಅದ್ಭುತ ವೈಶಿಷ್ಟ್ಯಗಳನ್ನು ಸೇರಿಸಿದೆ. ಈ ಸ್ಕೂಟರ್ ಮೊಬೈಲ್ ಫೋನಿನಂತೆಯೇ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ, ಇಲ್ಲಿಯವರೆಗೆ ಕ್ಯಾಮೆರಾ ಹೊಂದಿದ ಯಾವುದೇ ಸ್ಕೂಟರ್ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಮುಂಭಾಗ-ಹಿಂಭಾಗ ಕ್ಯಾಮೆರಾ ಇರುವ ಮೊಟ್ಟ ಮೊದಲ ಸ್ಕೂಟಿ ಇದಾಗಿದೆ.
ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ನ ಗುಣಲಕ್ಷಣಗಳು:
ಈ ಸ್ಕೂಟರ್ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಡ್ಯುಯಲ್ ರಾಡಾರ್ ಜೊತೆಗೆ, ನೀವು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ಯಾಶ್ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ. ರಾಡಾರ್ ವ್ಯವಸ್ಥೆಯು ನಿಮಗೆ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಓವರ್ ಟೇಕ್ ಅಲರ್ಟ್ ಮತ್ತು ಡಿಕ್ಕಿಯ ಎಚ್ಚರಿಕೆಯನ್ನು ನೀಡುತ್ತದೆ. ಹಿಲ್ ಹೋಲ್ಡ್ ಮತ್ತು ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯದೊಂದಿಗೆ ಬರುವ ಈ ಸ್ಕೂಟರ್, ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ABS, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಕಂಪನಿಯು ಈ ಸ್ಕೂಟರ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒದಗಿಸಿದೆ.
ಚಾಲನಾ ಶ್ರೇಣಿ, ವೇಗ ಮತ್ತು ಬ್ಯಾಟರಿ ಆಯ್ಕೆಗಳು:
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಚಾಲನಾ ಶ್ರೇಣಿಯ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ 261 ಕಿಲೋ ಮೀಟರ್ ಗಳವರೆಗೆ ಕ್ರಮಿಸಬಹುದು. 2.9 ಸೆಕೆಂಡುಗಳಲ್ಲಿ 0 ರಿಂದ 60 ರವರೆಗೆ ವೇಗವನ್ನು ಹೆಚ್ಚಿಸುವ ಈ ಸ್ಕೂಟರ್ ಅನ್ನು 3.5kWh, 5kWh ಮತ್ತು 6kWh ನ ಮೂರು ಬ್ಯಾಟರಿ ಆಯ್ಕೆಗಳಲ್ಲಿ ಖರೀದಿಸಬಹುದು.
Womens Car: ಜಾಗ್ವಾರ್- ಆಡಿ ಅಲ್ಲ: ಈ ಕಾರುಗಳು ಮಹಿಳೆಯರ ಮೊದಲ ಆಯ್ಕೆಯಂತೆ
ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಬೆಲೆ:
14 ಇಂಚಿನ ಚಕ್ರಗಳು ಮತ್ತು 34 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿರುವ ಈ ಸ್ಕೂಟರ್ ಅನ್ನು ಮೂರು ಬಣ್ಣಗಳಲ್ಲಿ ಖರೀದಿಸಬಹುದು. ಈ ಸ್ಕೂಟರ್‌ನ ಬುಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮತ್ತು ಈ ಸ್ಕೂಟರ್‌ನ ವಿತರಣೆಯು 2026 ರ ಮೊದಲ ತ್ರೈಮಾಸಿಕದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ, ಕಂಪನಿಯು ಈ ಸ್ಕೂಟರ್‌ನ ಆರಂಭಿಕ ಬೆಲೆಯನ್ನು 1 ಲಕ್ಷ 45 ಸಾವಿರ (ಎಕ್ಸ್-ಶೋರೂಂ) ಎಂದು ನಿಗದಿಪಡಿಸಿದೆ. ಮೊದಲ 10,000 ಗ್ರಾಹಕರು ಈ ಸ್ಕೂಟರ್ ಅನ್ನು 1.20 ಲಕ್ಷ (ಎಕ್ಸ್-ಶೋರೂಂ) ಗೆ ಪಡೆಯುತ್ತಾರೆ ಎಂದು ಕಂಪನಿ ಆರಂಭದಲ್ಲಿ ಹೇಳಿತ್ತು. ಆದರೆ, ಅಲ್ಟ್ರಾವೈಲೆಟ್ ಆಟೋಮೋಟಿವ್‌ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಸೆರಾಕ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ 48 ಗಂಟೆಗಳಲ್ಲಿ, 20,000 ಕ್ಕೂ ಹೆಚ್ಚು ಜನರು ಇದನ್ನು ಬುಕ್ ಮಾಡಿದ್ದಾರೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸಾಮಾನ್ಯ ಜನರು ಹಾಗೂ ಸೆಲೆಬ್ರಿಟಿಗಳಲ್ಲಿ ಅಪಾರ ಕ್ರೇಜ್ ಇದೆ ಮತ್ತು ಬಂಪರ್ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಕಂಪನಿಯು ಈಗ 50 ಸಾವಿರ ಬುಕಿಂಗ್‌ಗಳಿಗೆ ಪರಿಚಯಾತ್ಮಕ ಬೆಲೆಯನ್ನು ವಿಸ್ತರಿಸಿದೆ. ಅಲ್ಟ್ರಾವೈಲೆಟ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ನಾರಾಯಣ್ ಸುಬ್ರಮಣಿಯಂ, ‘‘ಟೆಸ್ಸೆರಾಕ್ಟ್‌ಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಹೆಚ್ಚಿನ ಬೇಡಿಕೆಯು ಗ್ರಾಹಕರು ಅಲ್ಟ್ರಾವೈಲೆಟ್ ದೃಷ್ಟಿಯಲ್ಲಿ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಟೆಸ್ಸೆರಾಕ್ಟ್ ಚಲನಶೀಲತೆಯಲ್ಲಿ ಅಗಾಧ ಬದಲಾವಣೆಯನ್ನು ತರಲಿದೆ’’ ಎಂದು ಹೇಳಿದ್ದಾರೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ