ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜರವರ ಸಾಧನೆಯ ಹಾದಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಗೌರವವನ್ನು ನೀಡಿದೆ. ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಮಡಿರುವ ಇವರು ಒಬ್ಬ ಯುವ ಸಾಹಿತಿ, ವಾಗ್ಮಿ, ನಿರೂಪಕ, ಹಾಡುಗಾರ, ನೃತ್ಯಪಟು, ನಟ ಮತ್ತು ತರಬೇತುದಾರ. ಸಾಂಸ್ಕ್ರತಿಕ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಇವರು ಹಲವಾರು ಕಾರ್ಯಕ್ರಮಗಳನ್ನ ಸಂಯೋಜಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಎರಡು ಪುಸ್ತಕಗಳನ್ನ ಬಿಡುಗಡೆ ಮಾಡಿದ್ದು, ಹಲವಾರು ಲೇಖನಗಳು ಪ್ರಕಟಗೊಂಡಿದೆ.
ಸಾಹಿತ್ಯ ಲೋಕದಲ್ಲಿ ಕನ್ನಡ ವರ್ಣಮಾಲೆಯನ್ನಿಟ್ಟುಕೊಂಡು ಪ್ರತಿಯೊಂದು ವರ್ಣಮಾಲೆ ಅಕ್ಷರಕ್ಕೂ ಒಂದೊಂದು ಕವನ ರಚಿಸಿ, ಕವನದ ಎಲ್ಲ ಸಾಲುಗಳ ಪ್ರಥಮ ಅಕ್ಷರ ಒಂದೇ ಬರುವಂತೆ ಜೋಡಿಸಿ ಬಹಳ ವಿಭಿನ್ನವಾಗಿ ಬರೆದ “ಅಂತ್ಯ ಆರಂಭಕ್ಕೊಂದು ಮುನ್ನುಡಿ“ ಪುಸ್ತಕ ಸಾಹಿತ್ಯ ಲೋಕದ ಅತ್ಯಂತ ವಿಭಿನ್ನ ಪುಸ್ತಕವೆಂದು ಇಂಡಿಯನ್ ಬುಕ್ ಆಫ್ ರೆಕಾರ್ಡ್ (Indian book of Record) ಸಂಸ್ಥೆಯು ಇವರನ್ನು ಗುರುತಿಸಿದೆ, ಇದೇ ಮೊದಲ ಬಾರಿಗೆ ಇಂತಹ ಪುಸ್ತಕ ಪ್ರಕಟವಾಗಿದ್ದು ಈ ಪುಸ್ತಕವನ್ನು ಯುವವಾಹಿನಿ ರಿ ಬೆಳ್ತಂಗಡಿಯು ಪ್ರಕಟಿಸಿದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಮೊದಲ ಸೂರ್ಯ ಮುಳುಗದ ಸಾಮ್ರಾಜ್ಯ: ವಸಾಹತುಶಾಹಿ ಆಡಳಿತ ಆರಂಭಿಸಿದ್ದು, ಕೊನೆಗೊಳಿಸಿದ್ದು ಯಾವ ದೇಶ?
ಇವರ ಬಹುಮುಖ ಸಾಧನೆಗೆ ಈಗಾಗಲೇ ದ.ಕ ಜಿಲ್ಲಾ ಯುವ ಸಾಧಕ ಪ್ರಶಸ್ತಿ, ಪ್ರಭಾಕರ ನೀರುಮಾರ್ಗ ಯುವ ಸಾಹಿತಿ ಪ್ರಶಸ್ತಿ , ಎ.ಪಿ.ಜೆ ಅಬ್ದುಲ್ ಕಲಾಂ ಪುರಸ್ಕಾರ, ಜೆಸಿಐ ಸಾಧನಾ ಶ್ರೀ, ಸಾಂಸ್ಕೃತಿಕ ಚೇತನ ಪುರಸ್ಕಾರ ಮತ್ತು ರಾಜ್ಯ, ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳು ಲಭಿಸಿವೆ. ಖಾಸಗಿ ಟಿವಿ ಮಾಧ್ಯಮದ ರೀಯಾಲಿಟಿ ಶೋಗಳಲ್ಲಿ ಕ್ರೀಯೆಟಿವ್ ಆಗಿ ಕರ್ತವ್ಯ ನಿರ್ವಾಹಿಸಿರುವ ಇವರು ಜೆಸಿಐ ಮಂಜುಶ್ರೀ, ಯುವವಾಹಿನಿ ಬೆಳ್ತಂಗಡಿ ನಿರ್ದೇಶಕರಾಗಿ ಬಳಂಜ ಬಿಲ್ಲವ ಸಂಘದ ಸಕ್ರೀಯ ಸದಸ್ಯರಾಗಿದ್ದಾರೆ.
ಇವರು ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಮನೆಯ ಶ್ರೀಧರ ಪೂಜಾರಿ ಮತ್ತು ಸುಶೀಲ ದಂಪತಿಗಳ ಪುತ್ರ, ಇದೀಗ ಇವರ “ಅಂತ್ಯ ಆರಂಭಕ್ಕೊಂದು ಮುನ್ನುಡಿ” ಎಂಬ ಪುಸ್ತಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದೆ.
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Sat, 18 June 22