ನನ್ನ ಮೊದಲ ಸಂಬಳದಿಂದ ನಾನು ಕಲಿತ ಪಾಠ !
ಮದುರಂಗಿ ಶಾಸ್ತ್ರ ಕಾರ‍್ಯಕ್ರಮವಿದ್ದದ್ದು ವಿಟ್ಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿಗೆ ಹೋಗುವ ಖುಷಿ, ಕುತೂಹಲವನ್ನು ಜೊತೆಗೆ ಸೇರಿಸಿಕೊಂಡು ಆತುರದಿಂದ ಹೋರಟು ಹೋದೆ. ದಾರಿ ಹುಡುಕಿಕೊಂಡು ಕಾರ‍್ಯಕ್ರಮವಿರುವ ಸ್ಥಳಕ್ಕೆ ತಲುಪಿದೆ.
ಆ ದಿನ ಅದ್ಯಾವುದೋ ಯೋಚನೆಯಲ್ಲಿ ಮಲಗಿದ ನನಗೆ ನಿದ್ರಾದೇವಿ ಆವರಿಸತೊಡಗಿದ್ದಳು. ಅಷ್ಟರಲ್ಲೇ , ಬದಿಯಲ್ಲಿದ್ದ ಮೊಬೈಲ್ ರಿಂಗ್ ಆಯಿತು, ತಿಳಿಯಲೇ ಇಲ್ಲ. ಕಾಲ್ ಬೆಂಬಿಡದೆ ಬರುತ್ತಿದ್ದ ಕಾರಣ ರಿಂಗ್ ಟೋನ್ ನನ್ನನ್ನು ಎಚ್ಚರಗೊಳಿಸಿತ್ತು. ಕರೆಯನ್ನು ಸ್ವೀಕರಿಸುತ್ತಾ ಆ ಕಡೆಯಿಂದ, ನಾಳೆ ನಮ್ಮ ನನ್ನ ಮದುರಂಗಿಶಾಸ್ತ್ರ ಇದೆ ಮದುರಂಗಿ ಇಡಬಹುದಾ? ಎನ್ನೋ ಮೃದು ದನಿಯ ಮಾತುಗಳು ನನ್ನನ್ನು ನಿದ್ರಾವಸ್ಥೆಯಿಂದ ಹೊರತಂದ್ದಿದ್ದವು. ಸರಿ ಎನ್ನುತ್ತಾ ಪೋನ್ ಕಟ್ ಮಾಡಿ ಮತ್ತೆ ನಿದ್ರಾ ಅವಸ್ಥಿಗೆ ಜಾರಿದೆ. ಶಶಿಯು ಜಾರಿ ಮರುದಿನದ ರವಿಯ ಬರುವಿಕೆಗಾಗಿ ಎದುರು ನೋಡುತ್ತಿದ್ದೆ. ಬಾನಾಡಿಯಲ್ಲಿ ಕೆಂಬಣ್ಣದ ಸೂರ್ಯ ಉದಯಿಸುವ ಮುನ್ನವೇ ನನಗಂದು ಎಚ್ಚರವಾಗಿತ್ತು. ಕಾಲುಗಳಿಗೆ ಚಕ್ರ ಕಟ್ಟಿರುವಂತೆ ನಿಂತಲ್ಲಿ ನಿಲ್ಲುತಿರಲಿಲ್ಲ. ಅದೊಂದು ಹೊಸ ಅನುಭವದ ಚಿತ್ರಣ ನನಗೆ ಅರಿಯದೇ ನನಲ್ಲಿ ಕಾಣತೊಡಗಿತ್ತು.
ಮದುರಂಗಿ ಶಾಸ್ತ್ರ ಕಾರ‍್ಯಕ್ರಮವಿದ್ದದ್ದು ವಿಟ್ಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿಗೆ ಹೋಗುವ ಖುಷಿ, ಕುತೂಹಲವನ್ನು ಜೊತೆಗೆ ಸೇರಿಸಿಕೊಂಡು ಆತುರದಿಂದ ಹೋರಟು ಹೋದೆ. ದಾರಿ ಹುಡುಕಿಕೊಂಡು ಕಾರ‍್ಯಕ್ರಮವಿರುವ ಸ್ಥಳಕ್ಕೆ ತಲುಪಿದೆ. ಕಾರ‍್ಯಕ್ರಮಗಳಲ್ಲಿ ನನ್ನನ್ನು ಅತಿಥಿಯಾಗಿ ಸ್ವೀಕರಿಸಿದ ರೀತಿ ನನಗೆ ತೋರಿದ ಆತಿಥ್ಯ ನನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಅರಶಿನ ಶಾಸ್ತ್ರಗಳೆಲ್ಲ ಮುಗಿದ ನಂತರ ಕೈಯ ಮೇಲೆ ಕೆಂಬಣ್ಣದ ಗೋರಂಟೆ ಇಡುವ ಕ್ರಮ ಆರಂಭವಾಯಿತು.ಈಗ ನನ್ನ ಜವಾಬ್ದಾರಿ ಸೂರ್ಯ ಚಂದ್ರರು ಕೈಯ ಮೇಲೆ ಮೂಡಿಬರುತ್ತಿದ್ದಂತೆ ನವವಧುವಿನ ಮೊಗದಲಿ ಅದೇನೋ ಸಂತಸದ ಛಾಯೆ. ಬಹುಷಃ ಇನಿಯನ ನೆನೆದು ಆಕೆಯ ಮೊಗವು ನಾಚಿ ನೀರಾದಂತ್ತಿತ್ತು. ಸಂಜೆಯಾಗುತ್ತಲೇ ಮದರಂಗಿ ಇಡೋ ನನ್ನ ಕೆಲಸವೂ ಮುಗಿದಿತ್ತು.
ಹಿರಿಯರ ಸಮ್ಮುಖದಲ್ಲಿ ಮದುವೆಯ ಮಮತೆಯ ಕರೆಯೋಲೆಯ ಜೊತೆಗೆ ಮೂರು ಗರಿ ಗರಿ ನೋಟನ್ನು ನನ್ನ ಕೈಯಲ್ಲಿತ್ತರು. ಅದೇನೋ ಹೊಸ ಅನುಭವ , ನನ್ನೋಳಗೆ ಒಂದು ರೀತಿಯ ನಿರಾಳಭಾವ. ದುಡಿಯುವ ಮೊದಲ ಹೆಜ್ಜೆಯ ಪ್ರಯತ್ನ ಇಂದು ಹೆತ್ತವರು ದುಡಿದು ತಂದ ಹಣವನ್ನು ನೀರಿನಂತೆ ವ್ಯಯ ಮಾಡೋ ಕಾಲದಲ್ಲಿ , ಅವರ ಒಂದೊಂದು ಬೆವರ ಹನಿಯ ಅರಿತು ಉಳಿತಾಯ ಮಾಡುವುದು ಉತ್ತಮ ಅಲ್ವಾ. ದಿನವಿಡೀ ದುಡಿಯುವ ಕೈಗಳಿಗೆ ಒಂದು ಸಲಾಂ ಹೇಳೋಣವೇ? ಅಂದಿನ ಆ ನನ್ನ ಮೊದಲ ಸ್ಯಾಲರಿ ಮರೆಯಲಾಗದ ಖುಷಿ ಕೊಟ್ಟಿರುವ ಜೊತೆಗೆ ಒಂದೊಂದು ಬೆವರ ಹನಿಯ ಮಹತ್ವ ತಿಳಿಸಿದ್ದು ಮಾತ್ರ ಸುಳ್ಳಲ್ಲ.
ನೀತಾ ರವೀಂದ್ರ ವಿವೇಕಾನಂದ ಕಾಲೇಜ್ ಪುತ್ತೂರು