World Environment Day 2022 : ಭೂಲೋಕದ ಸ್ವರ್ಗ ಕೂಡ್ಲು ತೀರ್ಥ ಜಲಪಾತ
World Environment Day 2022: ಮಲೆನಾಡಿನ ಅತೀ ಸುಂದರ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು.ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಕೂಡ್ಲು ತೀರ್ಥ ಜಲಪಾತ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು ಎಂದು ಹೇಳಿದ್ದಾರೆ ತಪ್ಪಿಲ್ಲ.
ಈ ಭೂಮಿಯ ಮೇಲೆ ವಾಸಿಸುವ ಎಲ್ಲಾ ಜೀವಿಗಳು ಪರಿಸರವನ್ನು ಅವಲಂಬಿಸಿ ಜೀವಿಸುತ್ತದೆ . ಪರಿಸರವು ಗಾಳಿ, ನೀರು, ಸೂರ್ಯನ ಬೆಳಕು, ಸಸ್ಯಗಳು, ಪ್ರಾಣಿಗಳು ಇತ್ಯಾದಿಗಳನ್ನು ಒಳಗೊಂಡಿರುವ ಜೀವ ಸಂಕುಲ, ಇಂತಹ ಭೂಮಿಯಲ್ಲಿ ಸ್ವರ್ಗವನ್ನೇ ಕಾಣಬಹುದು ಎಂದು ಹೇಳಿದರೆ ತಪ್ಪಿಲ್ಲ, ಏಕೆಂದರೆ ಇಲ್ಲಿನ ಪರಿಸರವನ್ನು ಕಾಣುವಾಗ ಸ್ವರ್ಗ ಕಣ್ಮುಂದೆ ಕಾಣಿಸುವಂತೆ ಭಾಸ ವಾಗುತ್ತದೆ. ಪ್ರತಿಯೊಬ್ಬರು ತನ್ನ ಜೀವನದಲ್ಲಿ ಆಗುವ ನೋವು ಅಥವಾ ದುಃಖವನ್ನು ಮರೆಯಲು ಮೊದಲು ಹೋಗುವುದೇ ಪರಿಸರ ವೀಕ್ಷಣೆಗೆ ಅಲ್ಲಿ ಸಿಗುವಂತಹ ಮನಶಾಂತಿ ಬೇರೆಲ್ಲೂ ಸಿಗಲು ಕಷ್ಟ. ಇನ್ನೂ ಹೇಳಬೇಕಾದರೆ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಪ್ರಕೃತಿಯ ವೀಕ್ಷಣೆಗಾಗಿ ಸುಂದರವಾದ ಪ್ರದೇಶಕ್ಕೆ ಪ್ರಯಾಣ ಬೆಳೆಸಬೇಕು. ಆಗ ಆ ಸುಂದರವಾದ ಪರಿಸರವು ನಮ್ಮ ಮನಸ್ಸಿಗೆ ಸಂತೋಷ ನೀಡುತ್ತದೆ. ನಾನು ಕೂಡ ಪ್ರಕೃತಿಯ ವೀಕ್ಷಣೆಗಾಗಿ ಪ್ರಕೃತಿಯ ಸೊಬಗನ್ನು ಸವಿಯಲು ಸಂಚಾರ ಹೊರಟೆನು.ನಾನು ಅಲ್ಲಿನ ಪ್ರದೇಶವನ್ನು ನೋಡುವಾಗ ಭೂಲೋಕದ ಸ್ವರ್ಗ ಎಂದು ಅನಿಸಿತ್ತು. ಸೌಂದರ್ಯದಲ್ಲಿ ಪ್ರಕೃತಿಯನ್ನು ಮೀರಿಸಲು ಯಾರಿಂದಲೂ ಅಸಾಧ್ಯ. ಅಂತಹ ಒಂದು ಸುಂದರವಾದ ಪ್ರದೇಶವೇ ಮಲೆನಾಡಿನ ಕೂಡ್ಲು ತೀರ್ಥ ಜಲಪಾತ. ದಟ್ಟಕಾಡಿನ ಮಧ್ಯೆ ಇರುವ ಈ ಕೂಡ್ಲು ತೀರ್ಥ ಜಲಪಾತವು ಪ್ರತ್ಯೇಕವಾದ ಸೌಂದರ್ಯದಿಂದಲೇ ಖ್ಯಾತಿ ಪಡೆದುಕೊಂಡಿದೆ.
ಮಲೆನಾಡಿನ ಅತೀ ಸುಂದರ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು. ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಕೂಡ್ಲು ತೀರ್ಥ ಜಲಪಾತ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು ಎಂದು ಹೇಳಿದ್ದಾರೆ ತಪ್ಪಿಲ್ಲ. ಆಗುಂಬೆ ಬಳಿ ಹರಿಯುವ ಪವಿತ್ರಾ ಸೀತಾ ನದಿಯಿಂದಾಗಿ ಕೂಡ್ಲು ತೀರ್ಥ ಜಲಪಾತ ಸೃಷ್ಟಿಯಾಗಿದೆ ಈ ನದಿಯನ್ನು ಹೆಬ್ರಿ ಸೀತಾ ನದಿ ಎಂದು ಕೂಡ ಸ್ಥಳೀಯರು ಕರೆಯುತ್ತಾರೆ.ಇಂತಹ ಪವಿತ್ರ ನದಿಯಿಂದ ಹರಿಯುವ ನೀರನ್ನು ಕಾಣುವುದೇ ಒಂದು ಸಂಭ್ರಮ ಈ ಕೊಳದಿಂದಾಗಿ ಸೃಷ್ಟಿಯಾಗಿರುವ ಕೂಡ್ಲು ತೀರ್ಥ ಜಲಪಾತ ಸುಮಾರು 126 ಅಡಿ ಎತ್ತರವಿದೆ, ಇಲ್ಲಿಗೆ ಬರುವ ಪ್ರವಾಸಿಗರು ಅಲ್ಲಿನ ಸೌಂದರ್ಯವನ್ನು ಕಂಡು ನೀರಿಗೆ ಇಲ್ಲಿಯುತ್ತಾರೆ ಮೇಲಿನಿಂದ ಹರಿಯುವ ನೀರು ನಮ್ಮ ಮೈಯನ್ನು ಸ್ಪರ್ಶಿಸಿದಾಗ ಆಗುವ ರೋಮಾಂಚನವನ್ನು ಹೇಳಲು ಸಾಧ್ಯವಿಲ್ಲ.ತಂಪಾದ ನೀರು ಅಲ್ಲಿನ ಗಿಡ,ಮರಗಳು ಪ್ರಕೃತಿಯ ನಿಜವಾದ ಸೌಂದರ್ಯವನ್ನು ಎತ್ತಿ ತೋರಿಸುವಂತೆ ಮಾಡಿದೆ. ಈ ಕೊಳದಲ್ಲಿ ನೂರಾರು ವರ್ಷಗಳ ಹಿಂದೆ ಹಲವು ಋಷಿ ಮುನಿಗಳು ತಪಸ್ಸನ್ನಾಚರಿಸಿದ್ದರು ಎಂಬ ಪ್ರತೀತಿ ಇದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಅಂದು ಪರಿಸರ ಬೆಳಸಿ, ಇಂದು ಪರಿಸರ ಉಳಿಸಿ, ಪರಿಸರ ರಕ್ಷಣೆ ನಮ್ಮ ಕೈಯಲ್ಲಿ
ಆಗುಂಬೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಪ್ರವಾಸ ಹೊರಡುವವರೆಲ್ಲರು ಇಂತಹ ಸ್ಥಳಕ್ಕೆ ಹೋಗಲೇಬೇಕು ಇಂತಹ ಸ್ಥಳಗಳಿಗೆ ಹೋಗುವುದರಿಂದ ನಮ್ಮಗೆ ನಮ್ಮ ಪರಿಸರದ ಬಗ್ಗೆ ಅರಿವು ಉಂಟಾಗುತ್ತದೆ. ಏಕೆಂದರೆ ಇಂದಿನ ದಿನಗಳಲ್ಲಿ ನಾವು ಮರಗಳನ್ನು ಕಡಿಯುವುದರ ಜೊತೆಗೆ ಹೀಗೆ ಅನೇಕ ವಿಚಾರದಲ್ಲಿ ನಾವು ಪರಿಸರವನ್ನು ನಾಶಪಡಿಸುತ್ತಿದ್ದೇವೆ, ಆದರೆ ಇಂತಹ ಪ್ರದೇಶಗಳಿಗೆ ಹೋದಾಗ ನಾವು ನಮ್ಮ ಪರಿಸರವನ್ನು ಉಳಿಸಬೇಕು ಎಂಬ ಭಾವನೆ ಬರಬಹುದು ಎಲ್ಲರೂ ಇಂತಹ ಸ್ಥಳಕ್ಕೆ ಹೋಗಬೇಕು ಏಕೆಂದರೆ ಇಂತಹ ಸ್ಥಳದಿಂದ ಜೀವನಕ್ಕೆ ಉತ್ತಮ ಪಾಠ ಕಲಿಸುವಂತೆ ಮಾಡುತ್ತದೆ.
ಕವಿತಾ ಆಳ್ವಾಸ್ ಕಾಲೇಜು ಮೂಡಬಿದ್ರಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ