ಜಗತ್ತು ಬದಲಾಗಿದೆ, ಈ ಬದಲಾವಣೆಯ ಜೊತೆಗೆ ನಾವು ನಮ್ಮ ಶೈಲಿಯನ್ನು ಬದಲಾಯಿಸುತ್ತಾ ಮುನ್ನಡೆಯುತ್ತಿವೆ. ಎಲ್ಲಾ ಕಾರ್ಯವು ಕ್ಷಣಮಾತ್ರದಲ್ಲಿ ಆಗಬೇಕು ಎಂಬ ತುಡಿತದಲ್ಲಿರುವ ನಾವು ಬೆರಳ ತುದಿಯಲ್ಲಿಯೇ ಇಡೀ ಪ್ರಪಂಚವನ್ನು ಅರಿತು ಕೊಳ್ಳುತ್ತಿದ್ದೇವೆ. ಇದಕ್ಕೆ ಮೂಲ ಕಾರಣ ತಂತ್ರಜ್ಞಾನ ಅದರಲ್ಲಿಯೂ ಮೊಬೈಲ್. ಮೊಬೈಲ್ ಎಂಬ ಒಂದು ಸಣ್ಣ ಗಾತ್ರದ ಮಾಧ್ಯಮ ಪ್ರಪಂಚವನ್ನೇ ನಮ್ಮ ಕೈಗೆ ಕೊಟ್ಟು ಬಿಟ್ಟಿದೆ. ಇಂತಹ ಮಾಯಾ ಮಾಧ್ಯಮವನ್ನು ಪ್ರಪಂಚದ ಕೈಗಿಟ್ಟವನೇ ಡಾ| ಮಾರ್ಟಿನ್ ಕೂಪನ್, ಇವನ ಈ ಆವಿಷ್ಕಾರದಿಂದ ಹಿರಿ ವಯಸ್ಸಿನಿಂದ ಹಿಡಿದು ಕಿರಿ ವಯಸ್ಸಿನವರೆಗೂ, “ಮೊಬೈಲ್ “ಎಂಬ ಹೆಸರನ್ನು ಕೇಳದವರೇ ಇಲ್ಲ. ಎಲ್ಲಾ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನಮ್ಮ ಕಣ್ಣ ಮುಂದಿಡುವ ಈ ಮಾಧ್ಯಮದಿಂದ ಒಳಿತು ಎಷ್ಟಿದೆಯೋ ಅಷ್ಟೇ ಕೆಡಕು ಇದೆ. ಯಾವುದೇ ಮಾಧ್ಯಮದ ಒಳಿತು-ಕೆಡುಕು ನಾವು ಉಪಯೋಗಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.
ಮೊಬೈಲ್ ಮಾಹಿತಿಯನ್ನು ನೀಡುತ್ತದೆ, ನಮ್ಮ ಜ್ಞಾನವನ್ನು ವೃದ್ಧಿಸುತ್ತದೆ, ಹಾಗೆಯೇ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ.”ಅತಿಯಾದರೆ ಅಮೃತವೂ ವಿಷ” ಎಂಬಂತೆ ಯಾವ ವಸ್ತುವಿನ ಬಳಕೆಯು ಮಿತಿ ಮೀರಬಾರದು ಜ್ಞಾನ ಸಂಪಾದನೆಗಾಗಿ ಉಪಯೋಗಿಸುವ ಮೊಬೈಲ್ ನಿಂದ ದಾರಿ ತಪ್ಪಿದರೆ ಕಷ್ಟ.
ಈಗಿನ ಯುವ ಪೀಳಿಗೆ ಸಂಬಂಧಗಳಿಗೆ ನೀಡುವ ಗೌರವಕ್ಕಿಂತ ಮೊಬೈಲ್ ಗೆ ನೀಡುವ ಪ್ರಾಮುಖ್ಯತೆ ಅಧಿಕವಾಗಿದೆ. ಈ ಮೊಬೈಲ್ ನಿಂದಾಗಿ ಸಂಬಂಧಗಳ ಪ್ರಾಮುಖ್ಯತೆ ಕ್ಷೀಣಿಸುತ್ತಿದೆ.
ನಮ್ಮ ಸುಖ, ದುಃಖ, ಒಬ್ಬಂಟಿತನ ಹೀಗೆ ಎಲ್ಲಾ ಕ್ಷಣದಲ್ಲಿ ನಮ್ಮ ಜೊತೆಯಾಗಿರುವ ಆತ್ಮ ಸ್ನೇಹಿತ ಮೊಬೈಲ್. ಎಲ್ಲೇ ಹೋದರೂ ಮೊಬೈಲ್ ಜೊತೆಗಾರ, ನಮ್ಮ ಪ್ರಪಂಚವಾಗಿ ಬಿಟ್ಟಿದೆ.
ದಿನದ ಪ್ರತಿ ಘಳಿಗೆಯಲ್ಲೂ ಮೊಬೈಲ್ ನಲ್ಲಿರುವ ನಾವು ಅದೆಷ್ಟು ಮೂರ್ಖರು ಅಲ್ಲವೇ? ತಂತ್ರಜ್ಞಾನ ನಮ್ಮ ಮುಷ್ಟಿ ಯೊಳಗೆ ಇರಬೇಕೇ ಹೊರತು ನಾವು ತಂತ್ರಜ್ಞಾನದ ಮುಷ್ಟಿಯೊಳಗೆ ಇರಬಾರದು.
ಇಂದಿನ ಅದೆಷ್ಟೋ ಅಪಘಾತಗಳು ಸಾವು-ನೋವುಗಳು ಮೊಬೈಲ್ ಬಳಕೆಯಿಂದಲೇ ಹೆಚ್ಚಾಗುತ್ತಿದೆ. ವಾಹನಗಳಲ್ಲಿ ಸಂಚಾರಿಸುವಾಗ ನಮ್ಮ ಗಮನ ಮೊಬೈಲ್ ಕಡೆ ಇದ್ದರೆ ಹಾದಿ ತಪ್ಪಿ ವಾಹನ ಅಪಘಾತಕ್ಕೆ ಈಡಾಗುತ್ತಿದೆ. ಇನ್ನೂ ಕೆಲವರು ತಮ್ಮ ಸಾಹಸ ಪ್ರದರ್ಶಿಸುವ ಹುಮ್ಮಸ್ಸಿನಿಂದ ಸೆಲ್ಫಿ, ರೀಲ್ಸ್ ಎಂಬ ಹುಚ್ಚಾಟದಲ್ಲಿ ತಮ್ಮ ಪ್ರಾಣವನ್ನು ಕಸಿದುಕೊಳ್ಳುತ್ತದೆ.
ಮೊಬೈಲ್ ಎಂಬ ಮಾಯಾವಿ ನಮ್ಮ ವಿದ್ಯಾಭ್ಯಾಸದ ಮೇಲೆ ಬಹುದೊಡ್ಡ ಹೊಡೆತವನ್ನೇ ಕೊಡುತ್ತದೆ. ಇಂದಿನ ವಿದ್ಯಾರ್ಥಿಗಳು ವಿದ್ಯೆಯ ಕಡೆ ಗಮನ ಹರಿಸುದಕ್ಕಿಂತ ಹೆಚ್ಚು ಮೊಬೈಲ್ ನಲ್ಲಿ ಗೇಮ್ಸ್, ಸೋಶಿಲ್ ಮೀಡಿಯಾ ದಲ್ಲಿಯೇ ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ. ಇದು ಅವರ ಭವಿಷ್ಯವಕ್ಕೆ ಮಾರಕವಾಗುತ್ತದೆ.
ಹಿಂದೆ ಮಗುವಿಗೆ ಕೈತುತ್ತು ತಿನ್ನಿಸುವಾಗ ತಾಯಿ ನೋಡಲ್ಲಿ”ಚಂದಮಾಮ” ಎಂದು ಆಕಾಶ ತೋರಿಸುತ್ತಿದ್ದಳು, ಈಗ ಮಗುವಿನ ಊಟ ಕೇವಲ ಮೊಬೈಲ್ ಗಾಗಿ. ಚಿಕ್ಕವಯಸ್ಸಿನಿಂದಲೇ ಮೊಬೈಲ್ ಕೈಯಲ್ಲಿ ಇನ್ನು ಯೌವನಕ್ಕೆ ಬಂದಾಗ ಮೊಬೈಲ್ ಇಲ್ಲದಿದ್ದರೆ? ಸಂಬಂಧಿಕರು ಮನೆಗೆ ಬಂದಾಗ ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ದೂರ ಆಟವಾಡಲು ಬಿಟ್ಟಾಗ ಮುಂದೆ ಸಂಬಂಧಿಕರ ಮಹತ್ವ ಅರಿಯುವುದೇ ಆ ಮಗುವಿಗೆ?
ಮೊಬೈಲ್ ನಿಂದ ಎಲ್ಲವೂ ಕೆಡಕು ಎಂಬುದಲ್ಲ ಇದರಿಂದ ಅದೆಷ್ಟೋ ಮಾಹಿತಿಯನ್ನು ಕ್ಷಣದಲ್ಲಿ ಪಡೆಯಬಹುದು, ಜ್ಞಾನವೃದ್ಧಿ ಆಗುತ್ತದೆ. ಆದರೆ ಬಳಸುವ ವಿಧಾನ ಸರಿಯಿಲ್ಲ. ಈ ಜಂಗಮವಾಣಿ ಯಿಂದ ಪುಸ್ತಕ, ಪತ್ರಿಕೆಗೆ ಸಿಗುತ್ತಿದ್ದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ, ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ, ಇಂದಿನ ಪೀಳಿಗೆ ಅಕ್ಷರ ಜ್ಞಾನವನ್ನೇ ಮರೆತುಬಿಟ್ಟಿದ್ದಾರೆ. ಸ್ನೇಹಿತರೇ ಯೋಚಿಸಿ ಎಲ್ಲಾ ಸಂಬಂಧಗಳಿಂದ ಎಷ್ಟೊಂದು ದೂರ ಮಾಡಿಬಿಟ್ಟಿದೆ ಈ ಮೊಬೈಲ್. ಒಂದು ದಿನ ಮೊಬೈಲ್ ಕೈ ಯಲ್ಲಿ ಇಲ್ಲದಿದ್ದರೆ ಹೇಗಾಗುತ್ತದೆ ಎಲ್ಲವನ್ನು ಕಳೆದುಕೊಂಡಂತಹ ಮನಸ್ಥಿತಿ ನಾವು ತಲುಪುತ್ತೇವೆ, ಅಲ್ಲವೇ? ಹಾಗಾದರೆ ಈ ಮೊಬೈಲ್ ಅಷ್ಟೊಂದು ಜಾದುಗಾರನೇ? ಮನುಷ್ಯನನ್ನು ತನ್ನತ್ತ ಸೆಳೆಯುವ ಅಂತಹ ಶಕ್ತಿ ಅದಕ್ಕೆ ಹೇಗೆ ಬಂದಿರಬಹುದು…..
ಕವಿತಾ
ಆಳ್ವಾಸ್ ಕಾಲೇಜು