Mother’s Day 2022: ಅಮ್ಮ ಎಂದರೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲದ ಶಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 08, 2022 | 7:00 AM

Mother’s Day 2022: ಮಕ್ಕಳ ಪಾಲನೆಗಾಗಿ ತಾಯಿ ತನ್ನ ಸುಖವನ್ನೆಲ್ಲ ಮರೆತು ಆಹಾರ ನಿದ್ರೆ ಗಳನ್ನು ತೆರೆದು ಮಗುವಿನ ಲಾಲನೆ ಪೋಷಣೆ ಗಳಲ್ಲಿ ಸುಖವನ್ನು ಕಾಣುತ್ತಾಳೆ .

Mother’s Day 2022:  ಅಮ್ಮ ಎಂದರೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲದ ಶಕ್ತಿ
ಸಾಂದರ್ಭಿಕ ಚಿತ್ರ
Follow us on

ತಾಯಿಯನ್ನು ಜನನಿ, ಜನ್ಮದಾತೆ, ಅಮ್ಮ, ಹೀಗೆ ಅನೇಕ ಶಬ್ದಗಳಿಂದ ಕರೆಯುತ್ತೇವೆ. ಮಾನ್ಯತೆ, ಪೂಜ್ಯತೆ, ಮಾತ ಎಂಬ ಮಾತಿನಲ್ಲಿಯೂ ಗೌರವಿಸಲ್ಪಡುವ ತಾಯಿ ಪೂಜಿಸಲ್ಪಡುತ್ತಾಳೆ. ಅವಳು ನಮಗೆಲ್ಲ ಜನ್ಮ ಕೊಟ್ಟ ತಾಯಿ, ಮಾತು ಕಲಿಸಿದ ಗುರು, ಸಂಸ್ಕಾರ ಕೊಟ್ಟ ಅಮ್ಮ, ಯಾವತ್ತು ತನ್ನ ಸ್ವಾರ್ಥಕ್ಕಾಗಿ ಬದುಕಿದವಳು ಅಲ್ಲ. ತನ್ನ ಕರುಳಿನ ಕುಡಿಗಾಗಿ ಬದುಕಿದವಳು ಅಮ್ಮ. ತಾಯಿ ಮಗುವನ್ನು ಜೋಪಾನವಾಗಿ ಒಂಬತ್ತು ತಿಂಗಳು ತನ್ನ ಉದರದಲ್ಲಿ ಹೊತ್ತು ಕಾಪಾಡುತ್ತಾಳೆ. ಏಕೆಂದರೆ ಆ ಮಗು ಹೊಟ್ಟೆಯಿಂದ ಹೊರಬರಲು ಈ ಸಮಾಜದಲ್ಲಿ ಬೆಳೆದು ನಿಂತ ಮೇಲೆ ತನಗೆ ಆಸರೆಯಾಗಿ ನಿಲ್ಲುತ್ತದೆ ಎಂಬ ನಂಬಿಕೆಯಿಂದ ತನ್ನ ಮಗು ಅಂಚಿಗಾಲಿನಿಂದ ಪುಟ್ಟಪುಟ್ಟ ಹೆಜ್ಜೆಯನಿಡುತ್ತಾ ನಡೆಯೋಕೆ ಶುರು ಮಾಡುವಾಗ ಎಲ್ಲಿ ಮಗು ಎಡವಿ ಬಿದ್ದು ಗಾಯ ಮಾಡಿಕೊಳ್ಳುತ್ತದೆ ಎಂಬ ಭಯದಿಂದ ತನ್ನ ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವವಳೇ ತಾಯಿ. ತಾಯಿಗೆ ಏನಾದರೂ ಸಮಸ್ಯೆ ಬಂದರೆ ಯಾರೊಡನೆ ಹೇಳದೆ ತನ್ನ ನೋವನ್ನು ಒಂಟಿಯಾಗಿ ಅನುಭವಿಸುತ್ತಾಳೆ.

ಮಕ್ಕಳ ಪಾಲನೆಗಾಗಿ ತಾಯಿ ತನ್ನ ಸುಖವನ್ನೆಲ್ಲ ಮರೆತು ಆಹಾರ ನಿದ್ರೆ ಗಳನ್ನು ತೆರೆದು ಮಗುವಿನ ಲಾಲನೆ ಪೋಷಣೆ ಗಳಲ್ಲಿ ಸುಖವನ್ನು ಕಾಣುತ್ತಾಳೆ . ನಾವು ಸಣ್ಣವರಿದ್ದಾಗ ಏನೇ ತೊಂದರೆ ಬಂದರು ಅಥವಾ ಗಾಯವಾದರೆ ಅಳುತ್ತಾ ಮೊದಲು ಓಡುವುದು ತಾಯಿಯ ಹತ್ತಿರ. ಇವತ್ತಿಗೂ ಏನಾದರೂ ಗಾಯವಾದರೆ ಮೊದಲು ಬಾಯಿಂದ ಹೊರಬರುವ ಏಕೈಕ ಪದ ಅಮ್ಮ .

ಈ ಜಗತ್ತಿನಲ್ಲಿ ದಾನ-ಧರ್ಮ ಅಂತ ಮಾಡುವವರು ಎಷ್ಟೋ ಮಂದಿ ಇರುತ್ತಾರೆ. ಆದರೆ ತಾಯಿ ಮನಸ್ಸನ್ನು ಅರ್ಥ ಮಾಡಿಕೊಂಡವರು ಕೆಲವು ಮಂದಿ ಇರುತ್ತಾರೆ. ಜೀವಂತ ಇರುವಾಗ ಆಕೆಯ ಬೆಲೆ ಯಾರಿಗೂ ಅರ್ಥವಾಗುವುದಿಲ್ಲ. ಆಕೆಯ ನೋವನ್ನು ಹಂಚಿಕೊಳ್ಳುವವರು ಯಾರು ಇಲ್ಲ. ಆಯ್ಕೆ ಒಂದು ನಿಮಿಷ ಕಣ್ಣು ತಪ್ಪಿದರೆ ಸಾಕು ಆಕೆಯನ್ನು ನಮ್ಮ ಕಣ್ಣು ಹುಡುಕುತ್ತದೆ. ನಾವು ಪ್ರೀತಿಸಿದರೆ ನಮ್ಮನ್ನು ಪ್ರೀತಿಸುವ ಕೆಲವು ಹೃದಯಗಳಾದರು ನಮಗೆ ಸಿಗಬಹುದು. ಆದರೆ ನಾವು ಪ್ರೀತಿಸಿದಿದ್ದರೂ ನಮ್ಮನ್ನು ಪ್ರೀತಿಸುವ ಹೃದಯವೊಂದಿದ್ದರೆ ಅದು ತಾಯಿ ಮಾತ್ರ.

ಜಯಶ್ರೀ.ಸಂಪ

ಪ್ರಥಮ ಪತ್ರಿಕೋದ್ಯಮ, ಅಂಬಿಕಾ ಮಹಾವಿದ್ಯಾಲಯ
ಬಪ್ಪಳಿಕೆ, ಪುತ್ತೂರು

ಅಮ್ಮಂದಿರ ದಿನವನ್ನು ಹೀಗೆ ಸ್ಪಷಲ್ ಆಗಿ ಆಚರಿಸಲು ಇಲ್ಲಿ ಕ್ಲಿಕ್ ಮಾಡಿ